ಮನೆ ಸುದ್ದಿ ಜಾಲ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಮತ ಎಣಿಕೆ ಕಾರ್ಯವನ್ನು ಯಶಸ್ವಿಗೊಳಿಸಿ: ಡಾ. ಕೆ.ವಿ.ರಾಜೇಂದ್ರ

ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಮತ ಎಣಿಕೆ ಕಾರ್ಯವನ್ನು ಯಶಸ್ವಿಗೊಳಿಸಿ: ಡಾ. ಕೆ.ವಿ.ರಾಜೇಂದ್ರ

0

ಮೈಸೂರು: ಕರ್ನಾಟಕ ವಿಧಾನಸಭಾ ಚನಾವಣೆಯ ಮತಎಣಿಕೆ ಕಾರ್ಯ ಮೇ 13 ರಂದು ನಡೆಯಲ್ಲಿದೆ. ಈ ಸಂಬಂಧ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಮತಎಣಿಕೆ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ ಕೆ.ವಿ.ರಾಜೇಂದ್ರ ಅವರು ತಿಳಿಸಿದರು.

Join Our Whatsapp Group

ಇಂದು ಕಲಾಮಂದಿರದಲ್ಲಿ ಮತ ಎಣಿಕೆ ಕೇಂದ್ರದ ಮೇಲ್ವಿಚಾರಕರು ಹಾಗೂ ಮತ ಎಣಿಕೆ ಸಹಾಯಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ‘ಮತ ಎಣಿಕೆ ಕಾರ್ಯವನ್ನು ಅವಸರದಿಂದ ಮಾಡದೇ ತಾಳ್ಮೆಯಿಂದ ಹಾಗೂ ಬಹಳ ಎಚ್ಚರಿಕೆಯಿಂದ ಮಾಡಬೇಕು. ಮತದಾನ ಪ್ರಕ್ರಿಯೆ ಕಾರ್ಯ ಉತ್ತಮವಾಗಿ ನೆರವೇರಿಸಿದಂತೆ, ಮತಎಣಿಕೆ ಪ್ರಕ್ರಿಯೆಯನ್ನು ಉತ್ತಮ ರೀತಿಯಲ್ಲಿ ನೆರವೇರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮತ ಎಣಿಕೆ ಸ್ಥಳಕ್ಕೆ ಮೊಬೈಲ್‌ ತರಬೇಡಿ, ಫಲಿತಾಂಶ ಮುಗಿಯುವವರೆಗೂ ಮತ ಎಣಿಕೆ ಟೇಬಲ್‌ ಬಿಟ್ಟು ಅನಾವಶ್ಯಕವಾಗಿ ಓಡಾಡಬಾರದು. ಎಚ್ಚರಿಕೆಯಿಂದ ಮತ ಎಣಿಕೆ ಕಾರ್ಯ ಮಾಡಬೇಕು ಎಂದು ಅವರು ತಿಳಿಸಿದರು.

ಮತ ಎಣಿಕೆ ಕಾರ್ಯ ಸರಳ ಪ್ರಕ್ರಿಯೆಯಾಗಿದ್ದು, ಗೊಂದಲಕ್ಕೆ ಒಳಗಾಗಬೇಡಿ. ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಮತ ಎಣಿಕೆ ಕಾರ್ಯವನ್ನು ಯಶಸ್ವಿ ಗೊಳಿಸಬೇಕು.

ಬಹಳ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಆತ್ಮವಿಶ್ವಾಸದಿಂದ ಕೆಲಸ ನಿರ್ವಹಿಸಬೇಕು. ಏನಾದರೂ ಸಮಸ್ಯೆಗಳು ಇದ್ದರೆ ಸಮಯಪ್ರಜ್ಞೆಯಿಂದ ಸಂಬಂಧಪಟ್ಟ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಅವರು ತಿಳಿಸಿದರು.

ಅಂಚೆ ಮತ ಪತ್ರಗಳ ಎಣಿಕೆ ಬೆಳಗ್ಗೆ 8 ಗಂಟೆಗೆ ವೀಕ್ಷಕರ ಸಮ್ಮುಖದಲ್ಲಿ ಆರಂಭವಾಗಲ್ಲಿದ್ದು ನಂತರ ಮತಯಂತ್ರಗಳ ಎಣಿಕೆ ಆರಂಭವಾಗಲ್ಲಿದೆ. ಈ ಸಂಬಂಧ ಮೇಲ್ವಿಚಾರಕರು, ಮತ ಎಣಿಕೆ ಸಹಾಯಕರು ಚುನಾವಣೆ ಕೆಲಸದ ವಿಷಯವನ್ನು ಸರಿಯಾಗಿ ತಿಳಿದುಕೊಂಡು ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜಾರಾಂ ಹಾಗೂ ಚುನಾವಣಾ ಅಧಿಕಾರಿಗಳು ಉಪಸ್ಧಿತರಿದ್ದರು.