ಪಿರಿಯಾಪಟ್ಟಣ: ತಾಲ್ಲೂಕು ಪಂಚಾಯಿತಿಯಿಂದ ಬಿಡುಗಡೆಯಾಗುವ ಅನುದಾನಗಳನ್ನು ಅಧಿಕಾರಿಗಳು ಅಭಿವೃದ್ಧಿ ಯೋಜನೆಗಳಿಗೆ ಸದ್ಭಳಕ್ಕೆ ಮಾಡುವುದರ ಮೂಲಕ ಯಾವುದೇ ರೀತಿಯ ಲೋಪವಾಗದಂತೆ ಎಚ್ಚರವಹಿಸಬೇಕು ತಾಲ್ಲೂಕು ಪಂಚಾಯಿತಿ ಎಂದು ಆಡಳಿತಾಧಿಕಾರಿ ಮಹಮ್ಮದ್ ಫಯಾಸುಧೀನ್ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಸರ್ಕಾರದ ಅನುದಾನ ಬಳಸುವ ಪ್ರತಿಯೊಂದು ಕೆಲಸಕ್ಕೂ ದಾಖಲೆ ನಿರ್ವಹಣೆ ಮಾಡಬೇಕು ಎಂದರು. ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ ಮಾತನಾಡಿ ನೂತನ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು ಸರ್ಕಾರಿ ಶಿಕ್ಷಕರ ಕೊರತೆಯ ಸ್ಥಳಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ವಿದ್ಯಾರ್ಥಿಗಳಿಗೆ ಸಮವಸ್ತ್ರ, ನೋಟ್ ಬುಕ್ ವಿತರಿಸಲಾಗಿದೆ ಮತ್ತು ಶಾಲಾ ಕೊಠಡಿ, ಅಡಿಗೆ ಮನೆಗಳ ಅವಶ್ಯಕತೆ ಇರುವುದರಿಂದ್ದ ಅನುದಾನ ಅವಶ್ಯಕತೆ ಇದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಎನ್. ಚಂದ್ರಶೇಖರ್ ಮಾತನಾಡಿ ಇಲಾಖೆಯಿಂದ ಕಾನೂನು ಪದವಿ ಪೂರೈಸಿ ನೂತನವಾಗಿ ವಕೀಲಿ ವೃತ್ತಿ ಆರಂಭಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಕೀಲರಿಗೆ ಎರಡು ವರ್ಷಗಳ ವರೆಗೆ ಶಿಷ್ಯ ವೇತನವಾಗಿ ಹತ್ತು ಸಾವಿರ ನೀಡಲಾಗುತ್ತಿದೆ. ಕಾಲೇಜು ವಿದ್ಯಾರ್ಥಿ ನಿಲಯಗಳ ನಿರ್ವಹಣೆಗಾಗಿ ಅನುದಾನ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯ ನಿರ್ವಾಹಕಾಧಿಕಾರಿ ಸುನಿಲ್ ಕುಮಾರ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಸೋಮಯ್ಯ, ಕೃಷಿ ಇಲಾಖೆ ಅಧಿಕಾರಿ ಪ್ರವೀಣ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್, ಜಿ ಪಂ ಅಭಿಯಂತರ ಮಲ್ಲಿಕಾರ್ಜುನ, ಅರಣ್ಯ ಇಲಾಖೆ ವಲಯ ಅಧಿಕಾರಿ ಪದ್ಮ ಶ್ರೀ, ಸುಬ್ರಮಣ್ಯ, ಸಹಕಾರ ಇಲಾಖೆ ಹಿತೇಂದ್ರ, ಬಿಸಿಎಂ ಇಲಾಖೆ ಕೃಷ್ಣ ಗೌಡ, ರೇಷ್ಮೆ ಇಲಾಖೆ ಚಂದ್ರೆಗೌಡ, ಭೂ ಮಾಪನ ಇಲಾಖೆ ಮುನಿಯಪ್ಪ, ಅಕ್ಷರ ದಾಸೋಹ ಸಂಯೋಜಕ ಪ್ರಶಾಂತ್, ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯೆ ಮಧು ಮಾಲತಿ, ಚೆಸ್ಕಾಂ ಅಭಿಯಂತರ ಶಶಿಕುಮಾರ್, ತಾ ಪಂ ಲೆಕ್ಕಧಿಕಾರಿ ರಂಗನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.














