ಮನೆ ಅಡುಗೆ ಲೆಮನ್ ಪೆಪ್ಪರ್ ಚಿಕನ್ ಮಾಡಿ ಸವಿಯಿರಿ

ಲೆಮನ್ ಪೆಪ್ಪರ್ ಚಿಕನ್ ಮಾಡಿ ಸವಿಯಿರಿ

0

ಸಾಮಾನ್ಯವಾಗಿ ಏನಾದರೂ ಸ್ಪೆಷಲ್‌ ಮಾಡ್ಬೇಕು ಅಂದುಕೊಳ್ತೀವಿ. ಆದರೆ ಏನು ಮಾಡೋದು ಅಂತಾನೇ ಗೊತ್ತಾಗಲ್ಲ. ಅದರಲ್ಲೂ ಕೆಲವೊಮ್ಮೆ ನಾನ್‌ ವೆಜ್‌ ಮಾಡಬೇಕು ಅನಿಸುತ್ತೆ. ಅದರಲ್ಲೂ ಒಂದೇ ಸಮಸ್ಯೆ ಏನ್‌ ಮಾಡೋದು ಅಂತಾ., ಹೀಗಿರುವಾಗ ಒಂದು ಬಾರಿ ಲೆಮನ್ ಪೆಪ್ಪರ್ ಚಿಕನ್ ಮಾಡಿ ಸವಿಯಿರಿ.. ನಿಜಕ್ಕೂ ಮತ್ತೆ ತಿನ್ಬೇಕು ಅನಿಸೋದಂತು ಪಕ್ಕಾ.

ಬೇಕಾಗುವ ಸಾಮಾಗ್ರಿಗಳು :
ಚಿಕನ್
ಪೆಪ್ಪರ್ ಪೌಡರ್
ಶುಂಠಿ ಬೆಳ್ಳುಳ್ಳಿ ಪೌಡರ್‌
ಎಣ್ಣೆ
ಉಪ್ಪು-ರುಚಿಗೆ ತಕ್ಕಷ್ಟು
ಖಾರದ ಪುಡಿ
ಕಾರ್ನ್‌ ಫ್ಲೋರ್‌
ಮೊಟ್ಟೆ
ನಿಂಬೆ ರಸ
ಚಿಲ್ಲಿ ಫ್ಲೆಕ್ಸ್‌

ಮಾಡುವ ವಿಧಾನ : ಮೊದಲಿಗೆ ಬೋನ್‌ ಲೆಸ್‌ ಚಿಕನ್‌ನನ್ನು ಚೆನ್ನಾಗಿ ತೊಳೆದುಕೊಳ್ಳಿ. ಅದಕ್ಕೆ ಬೆಳ್ಳುಳ್ಳಿ ಪೌಡರ್‌, ಪೆಪ್ಪರ್ ಪೌಡರ್, ಉಪ್ಪು, ಖಾರದ ಪುಡಿ, ಕಾರ್ನ್‌ ಫ್ಲೋರ್‌, ಮೊಟ್ಟೆ ಒಡೆದು ಹಾಕಿ. ಬಳಿಕ ಚಿಕನ್‌ನನ್ನು ಚೆನ್ನಾಗಿ ಮ್ಯಾರಿನೇಟ್‌ ಮಾಡಿಕೊಳ್ಳಿ. ಇನ್ನೊಂದು ಕಡೆ ಚಿಪ್ಸ್‌ನ್ನು ಮಿಕ್ಸಿಗೆ ಹಾಕಿಟ್ಟುಕೊಳ್ಳಿ. ಮ್ಯಾರಿನೇಟ್‌ ಮಾಡಿದ ಚಿಕನ್‌ನ್ನು ಚಿಪ್ಸ್‌ನಲ್ಲಿ ಅದ್ದಿ, ಕರಿದುಕೊಳ್ಳಿ.

ಬಳಿಕ ಇನ್ನೊಂದು ಬಾಣಲಿಗೆ ಬಟರ್‌, ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ, ಚಿಲ್ಲಿ ಫ್ಲೆಕ್ಸ್‌, ನಿಂಬೆ ರಸ, ಜೇನು ತುಪ್ಪ, ನೀರು, ಉಪ್ಪು, ಪೆಪ್ಪರ್‌ ಪೌಡರ್‌ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಒಂದು ಬಟ್ಟಲಿನಲ್ಲಿ ಕಾರ್ನ್‌ ಫ್ಲೋರ್‌ಗೆ ನೀರು ಬೆರೆಸಿ ಕಲಸಿಕೊಂಡು ಮಿಶ್ರಣಕ್ಕೆ ಹಾಕಿ. ಬಳಿಕ ಚೆನ್ನಾಗಿ ಕುದಿಸಿಕೊಂಡು ಒಂದು ಬಟ್ಟಲಿಗೆ ಹಾಕಿ. ಕೊನೆಗೆ ಕರಿದ ಚಿಕನ್‌ನ್ನು ಈ ಮಿಶ್ರಣಕ್ಕೆ ಅದ್ದಿದರೆ ಲೆಮನ್ ಪೆಪ್ಪರ್ ಚಿಕನ್ ತಯಾರಾಗುತ್ತದೆ.