ಮನೆ ರಾಜಕೀಯ ಆಧಾರ ರಹಿತ ಆರೋಪ ಮಾಡುವುದು ಬಿಜೆಪಿಯವರ ಚಾಳಿ: ಸಚಿವ ದಿನೇಶ್ ಗುಂಡೂರಾವ್

ಆಧಾರ ರಹಿತ ಆರೋಪ ಮಾಡುವುದು ಬಿಜೆಪಿಯವರ ಚಾಳಿ: ಸಚಿವ ದಿನೇಶ್ ಗುಂಡೂರಾವ್

0

ಮಂಗಳೂರು: ಪಂಚರಾಜ್ಯ ಚುನಾವಣೆಗೆ ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಆಗಿ ಬಳಕೆ ಮಾಡುತ್ತಿದೆ ಎಂಬ ಬಿಜೆಪಿಯ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರಲ್ಲಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.

Join Our Whatsapp Group

ಬಿಜೆಪಿ ಮುಖಂಡರು ಆಧಾರ ರಹಿತ ಆರೋಪ ಮಾಡುವುದು ಒಂದು ಚಾಳಿ ಆಗಿದೆ. ಪಂಚರಾಜ್ಯ ಚುನಾವಣೆಯಲ್ಲಿ ಸೋಲಿನ ಭೀತಿ ಅವರನ್ನು ಕಾಡತೊಡಗಿದೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕದಲ್ಲಿ ಬಿಜೆಪಿಯವ್ರು ಧೂಳೀಪಟ ಆಗಿದ್ದಾರೆ. ಕರ್ನಾಟಕದಲ್ಲಿ ಯಾವ ರೀತಿ ಆಡಳಿತ ಕೊಟ್ಟಿದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಯಾವ ರೀತಿ ಕರ್ನಾಟಕವನ್ನ ಎಟಿಎಂಗಿಂತ ಕಡೆಯಾಗಿ ದುರುಪಯೋಗ ಮಾಡಿಕೊಂಡಿದ್ದನ್ನು ಜನ ನೋಡಿದ್ದಾರೆ. ಪಂಚರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಸೋಲಿನ ಭೀತಿ ಕಾಡುತ್ತಿದೆ ಎಂದರು.
ಇನ್ನು ಕಾಂಗ್ರೆಸ್ ಗೆ ಮಸಿ ಬಳಿಯುವ ಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಅಲ್ಲದೇ ಸುಳ್ಳಿನ ಆರೋಪ ಮಾಡುತ್ತಿದ್ದಾರೆ ಎಂದ ಅವರು, ಐಟಿ , ಸಿಬಿಐ ಎಲ್ಲಾ ಸಂಸ್ಥೆಗಳು ಅವರ ಕೈಯಲ್ಲೇ ಇದೆ. ಐಟಿ, ಸಿಬಿಐ ಅವರ ನಿರ್ದೇಶನದಂತೆ ನಡೆಯುತ್ತಿದೆ. ಬಿಜೆಪಿ ಆಡಳಿತ ಸಂದರ್ಭ ಅವರ ಮುಖಂಡರ ಮೇಲೆ ಐಟಿ, ಸಿಬಿಐ ದಾಳಿ ನಾವು ನೋಡಿಲ್ಲ. ಐಟಿ ರೇಡ್ ಬಗ್ಗೆ ಸಿಬಿಐ ತನಿಖೆಗೆ ಅವರು ಒತ್ತಾಯಿಸುತ್ತಿದ್ದಾರೆ. ಸಿಬಿಐಗೆ ಐಟಿ ಅವರೆ ಪ್ರಕರಣವನ್ನು ನೀಡಬೇಕು. ರೇಡ್ ಸಂದರ್ಭ ಯಾರಲ್ಲಿ ಹಣ ಸಿಕ್ಕಿದೆ ಅವರು ಯಾರೂ ಕಾಂಗ್ರೆಸ್ ನವರಲ್ಲ. ಯಾರೇ ತಪ್ಪುಮಾಡಿದರೆ ಅವರ ವಿರುದ್ಧ ಕ್ರಮ ಆಗಲಿ. ಅದನ್ನ ಸ್ವಾಗತ ಮಾಡುತ್ತೇವೆ ಎಂದರು.
ಇನ್ನು ಜೆಡಿಎಸ್ ನಿಂದ ಎಷ್ಟು ಜನ ಬರ್ತಾರೆ ಗೊತ್ತಿಲ್ಲ. ಆ ಪಕ್ಷ ದಲ್ಲಿ ಆಗುತ್ತುರುವ ಬೆಳವಣಿಗೆ ಬಗ್ಗೆ ಸಮಾಧಾನ ಇಲ್ಲದಿರ ಬಹುದು. ರಾಜಕೀಯದಲ್ಲಿ ಈ ರೀತಿಯ ಬೆಳವಣಿಗೆ ಇದ್ದೇ ಇರುತ್ತದೆ. ಆಪರೇಷನ್ ಕಮಲ ಮಾಡಿದವರು ಯಾರು? ಎಷ್ಟು ಕೆಟ್ಟ ರೀತಿಯಲ್ಲಿ ವ್ಯವಸ್ಥೆ ಹಾಳು ಮಾಡಿರೋದನ್ನು ಇಡೀ ದೇಶ ನೋಡಿದೆ. ಹಣಕೊಟ್ಟು ಬೆದರಿಸಿ ಆಪರೇಷನ್ ಮಾಡೋದ್ರಲ್ಲಿ ಬಿಜೆಪಿ ಅವರು ಎಕ್ಸ್ ಪರ್ಟ್ಸ್ ಎಂದು ಕಿಡಿಕಾರಿದ್ದಾರೆ.

ಹಿಂದಿನ ಲೇಖನಪರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಅಪಘಾತ: ಸವಾರ ಸಾವು
ಮುಂದಿನ ಲೇಖನದಸರಾ ವಸ್ತು ಪ್ರದರ್ಶನದಲ್ಲಿ  ಪಂಚ ಗ್ಯಾರಂಟಿಗಳ ದರ್ಬಾರ್: ವಾರ್ತಾ ಇಲಾಖೆ ಮಳಿಗೆಗೆ ಸಿ.ಎಂ.ಮೆಚ್ಚುಗೆ