ಮನೆ ದೇವಸ್ಥಾನ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ: ವಾರ್ಷಿಕ ಜಾತ್ರೆಗಳು

ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ: ವಾರ್ಷಿಕ ಜಾತ್ರೆಗಳು

0

ಮೈಸೂರು(Mysuru):  ಕಾರ್ತಿಕ ಸೋಮವಾರದ ಅಂಗವಾಗಿ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 2022ನೇ ಸಾಲಿನಲ್ಲಿ ಜರುಗುವ ವಾರ್ಷಿಕ ಜಾತ್ರೆಗಳಾದ ಮಹಾಲಯ ಅಮಾವಾಸ್ಯೆ ಜಾತ್ರೆ, ದಸರಾ, ದೀಪಾವಳಿ, ಕಾರ್ತಿಕ ಸೋಮವಾರದ ವಾರ್ಷಿಕ ಜಾತ್ರೆಗಳು ಜರುಗಲಿದೆ.
2022 ರ ಸೆಪ್ಟೆಂಬರ್ 23 ರಿಂದ 26 ರ ವರೆಗೆ ಮಹಾಲಯ ಜಾತ್ರೆ, ಅಕ್ಟೋಬರ್ 3 ರಿಂದ 5 ರವರೆಗೆ ದಸರಾ ಜಾತ್ರೆ, ಅಕ್ಟೋಬರ್ 22 ರಿಂದ 26 ರ ವರೆಗೆ ದೀಪಾವಳಿ ಜಾತ್ರೆ ನಡೆಯಲಿದೆ.
ಕಾರ್ತಿಕ ಸೋಮವಾರಗಳು ಅಕ್ಟೋಬರ್ 30 ರಿಂದ 31 ರವರೆಗೆ ಒಂದನೇ ಕಾರ್ತಿಕ ಸೋಮವಾರ, ನವೆಂಬರ್ 6 ರಿಂದ 7ರವರೆಗೆ ಎರಡನೇ ಕಾರ್ತಿಕ ಸೋಮವಾರ, ನವೆಂಬರ್ 13 ರಿಂದ 14 ರವರೆಗೆ ಮೂರನೇ ಕಾರ್ತಿಕ ಸೋಮವಾರ, ನವೆಂಬರ್ 20 ರಿಂದ 21ರವರೆಗೆ ನಾಲ್ಕನೇ ಕಾರ್ತಿಕ ಸೋಮವಾರ, ನವೆಂಬರ್ 22 ರಿಂದ 23ರ ವರೆಗೆ ಎಣ್ಣೆ ಮಜ್ಜನ ಮತ್ತು ಅಮಾವಾಸ್ಯೆ ವಾರಗಳು ನಡೆಯಲಿದೆ ಎಂದು ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿಗಳನ್ನು ಮಾಡಿಸಿ: ಎಸ್.ಟಿ.ಸೋಮಶೇಖರ್
ಮುಂದಿನ ಲೇಖನಗಜಮುಖನೆ ಗಣಪತಿಯೇ ನಿನಗೆ ವಂದನೆ