ಮನೆ ಆರೋಗ್ಯ ಮಲೇರಿಯಾ

ಮಲೇರಿಯಾ

0

ಸೊಳ್ಳೆಗಳ ಕಾಟ ಇರುವಲ್ಲಿ ವಾಸಿಸುವುದು ಕಷ್ಟದಾಯಕ. ಹಳ್ಳಿಗಳಿಂದ ದೊಡ್ಡ ದೊಡ್ಡ ಪಟ್ಟಣಗಳವರೆಗೆ ಇದರ ಕಾಟ ನಿಂತಿಲ್ಲ. ರಾತ್ರಿ ಹೊತ್ತು ಹಾಯಾಗಿ ನಿದ್ದೆ ಮಾಡಲಾಗದು, ಜನರ ಆರೋಗ್ಯಕ್ಕೆ ಸೊಳ್ಳೆಗಳು ಸವಾಲೊಡ್ಡಿವೆ ಎಂದರೆ ಅತಿಶೋಯೋಕ್ತಿಯಲ್ಲ.

ಈ ಹಾನಿಕಾರಕ ಸೊಳ್ಳೆಗಳಿಂದ ಉಂಟಾಗುವ ರೋಗಿಗಳಲ್ಲಿ ಮಲೇರಿಯ ಮುಂಚೂಣಿಯಲ್ಲಿದೆ. ಸೊಳ್ಳೆಗಳ ನಿರ್ಮೂಲನಕ್ಕೆ ಸರ್ಕಾರವು ಅನೇಕ ವರ್ಷಗಳಿಂದ ಕ್ರಮ ಕೈಗೊಂಡರು ಅವುಗಳ ನಿರ್ನಾಮ ಸಾಧ್ಯವಾಗಿಲ್ಲ.

ಮಲೇರಿಯಾ ಅನಾಫಿಲಿಸ್ ಎಂಬ ಸೊಳ್ಳೆಯಿಂದ ಹರಡುತ್ತದೆ. ಈ ಸೊಳ್ಳೆ ಕೊಳೆಚೆ ನೀರಿನಲ್ಲಿ, ಕಸದಲ್ಲೂ ವೃದ್ಧಿಕೊಳ್ಳುವುದಲ್ಲದೆ ಶುಭ್ರವಾದ ನಿಂತ ನೀರಿನಲ್ಲಿ ಅದರ ಸಂತತಿ ಬೆಳೆಯುತ್ತದೆ.

Plasmodium ಎನ್ನುವ ಸೂಕ್ಷ್ಮ ಜೀವಿಯಿಂದಾಗಿ ಮಲೇರಿಯಾ ಉಂಟಾಗುತ್ತದೆ. ಈ ಸೂಕ್ಷ್ಮಜೀವಿ ಹೆಣ್ಣು ಸೊಳ್ಳೆಯ ಲಾಲಾರಸ ಗ್ರಂಥಿಗಳಲ್ಲಿ ಇರುತ್ತದೆ. ಮನುಷ್ಯನನ್ನು ಇಂತಹ ಸೊಳ್ಳೆ ಕಚ್ಚಿದಾಗ ಅದರ ಲಾಲಾರಸದೊಂದಿಗೆ ಈ ಜೀವಾಣು ಆತನ ಚರ್ಮದ ಮೂಲಕ ರಕ್ತದಲ್ಲಿ ಪ್ರವೇಶಿಸುತ್ತದೆ.

ಈ Plasmodium ವ್ಯಕ್ತಿಯ ಪಿತ್ತ ಜನಕಾಂಗದಲ್ಲಿ ಸೇರಿ ಅಲ್ಲಿ ತಮ್ಮ ಸಂತತಿಯನ್ನು ವೃದ್ಧಿ ಮಾಡುತ್ತದೆ. ನಂತರ ರಕ್ತ ಪರಿಚಲನೆಯಲ್ಲಿ ಕೆಂಪು ರಕ್ತ ಕಣಗಳನ್ನು ನಾಶ ಮಾಡಲು ಆರಂಭಿಸುತ್ತದೆ. ಮಲೇರಿಯಾ ಜೀವಣುಗಳು ವ್ಯಕ್ತಿಯ ಪಿತ್ತ ಜನಕಾಂಗದಲ್ಲಿ ಇರುವಾಗ ಯಾವ ರೋಗದ ಲಕ್ಷಣಗಳು ಗುಚರಿಸುವುದಿಲ್ಲ. ಅವು ರಕ್ತದಲ್ಲಿ ಸೇರಿದಾಗ ಅತಿಯಾದ ಜ್ವರ ಚಳಿ ಕಾಣಿಸಿಕೊಳ್ಳುತ್ತದೆ.

ಮಲೇರಿಯಾ ಪೀಡಿತ ವ್ಯಕ್ತಿಯನ್ನು ಹೆಣ್ಣು ಸೊಳ್ಳೆ ಕಚ್ಚಿ ರಕ್ತ ಹೀರಿ ಆನಂತರ ಬೇರೆ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ ಆತನಿಗೂ ಮಲ್ಲೇರಿಯ ಬರುವ ಸಾಧ್ಯತೆ ಬಹಳ. ಹೀಗೆ ಸೊಳ್ಳೆಗಳು ಮಲೇರಿಯಾ ಹರಡಲು ಕಾರಣವಾಗುತ್ತದೆ.

ಲಕ್ಷಣಗಳು:

•       ಮಲೇರಿಯಾ ಜೀವಣಗಳು ಪಿತ್ತ ಜನಕಾಂಗದಿಂದ ರಕ್ತದಲ್ಲಿ ಪ್ರವೇಶಿಸಿದಾಗ ಕೆಂಪು ರಕ್ತ ಕಣಗಳ ಸಂಹಾರ ಪ್ರಾರಂಭವಾಗುತ್ತದೆ ಆಗ ಆ ವ್ಯಕ್ತಿ 103, 104 ಡಿಗ್ರಿ ಅಷ್ಟು ಜ್ವರ ಜ್ವರದಿಂದ ಬಳಲಿ ನಡುಕ ಚಳಿ ಉಂಟಾಗುತ್ತದೆ. ರೋಗಿಗೆ ತಲೆನೋವು ,ಬೆನ್ನು ನೋವು, ವಾಂತಿ ಕೂಡ ಆಗಬಹುದು.

ಚಳಿ ತಡೆದುಕೊಳ್ಳಲು ಬೆಚ್ಚಗೆ ಹೊದಿಕೆಗಳು ಬೇಕಾಗುತ್ತವೆ. ಜ್ವರ ಹೆಚ್ಚಾದರೆ ಮಾತ್ರ ಜಳಿ ಕಡಿಮೆಯಾಗುತ್ತದೆ.

•       ಚಳಿ ಕಡಿಮೆಯಾದ ಸ್ವಲ್ಪ ಸಮಯದ ನಂತರ ಶರೀರದ ಉಷ್ಣತೆ ಸಾಮಾನ್ಯ ಸ್ಥಿತಿಗೆ ಮರಳಿದಾಗ ನರಳುವಿಕೆ ಕಾಣಿಸಿಕೊಳ್ಳುವುದರ ಜೊತೆಗೆ ಶರೀರದಲ್ಲಿ ನಿಶಕ್ತಿ, ಆಲಸ್ಯತನ ಉಂಟಾಗುತ್ತದೆ.

•       ಜ್ವರ ಇಳಿದಾಗ ಒಂದರಿಂದ ಮೂರು ದಿನಗಳವರೆಗೆ ವ್ಯಕ್ತಿ ಸಾಮಾನ್ಯ ಸ್ಥಿತಿಗೆ ಮರಳಿದಂತಾದರು ಮತ್ತೆ ಜ್ವರ ಚಳಿಯಿಂದ ಬಳಲಬಹುದು.

•       ಮಲೇರಿಯಾದ ಮುಖ್ಯ ಲಕ್ಷಣಗಳೆಂದರೆ ದಿನ ಬಿಟ್ಟು ದಿನ ಇಲ್ಲವೇ ಎರಡು ದಿನಗಳಿಗೆ ಒಮ್ಮೆ ಜ್ವರ ಬರುವುದು, ತೀವ್ರ ಚಳಿಯಾಗುವುದು, ಪಿತ್ತ ಜನಕಾಂಗದಿಂದ ಜೀವಾಣುಗಳು ರಕ್ತನಾಳಗಳಲ್ಲಿ ಪ್ರವೇಶಿಸಿದಾಗಲೆಲ್ಲ ಚಳಿ ಮತ್ತು ಜ್ವರ ಕಾಣಿಸಿಕೊಳ್ಳುತ್ತದೆ.

ರಕ್ತಹೀನತೆ:

ಮಲೇರಿಯಾ ಮತ್ತೆ ಮತ್ತೆ ಬರುತ್ತಿದ್ದರೆ ವ್ಯಕ್ತಿಯ ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆಯಾಗಿ ರಕ್ತ ಹೀನತೆ ಉಂಟಾಗುತ್ತದೆ. ಕೊನೆಯ ಹಂತದಲ್ಲಿ ಆತನ ಪಿತ್ತ ಜನಕಾಂಗ ಓದಿಕೊಳ್ಳುತ್ತದೆ.

ಗುರುತಿಸುವುದು:

•       ಸಾಮಾನ್ಯವಾಗಿ ಮಲೇರಿಯಾದ ಲಕ್ಷಣಗಳಾದ ಚಳಿ ಜ್ವರ ಬಂದಾಗ ವೈದ್ಯರು ಆಳವಾಗಿ ಪರೀಕ್ಷಿಸುವುದಿಲ್ಲ ತಮ್ಮ ಅನುಭವದ ಮೇಲೆ ಉಪಚರಿಸುತ್ತಾರೆ. ಸಂದೇಹವಿದ್ದಲ್ಲಿ ಮಾತ್ರ ರಕ್ತ ಮೂತ್ರ ಇತ್ಯಾದಿ ಪರೀಕ್ಷೆಗೆ ಸಲಹೆ ಮಾಡುತ್ತಾರೆ.

•       ಕೈ ಬೆರಳಿನಿಂದ ಒಂದು ತೊಟ್ಟು ರಕ್ತವನ್ನು ಗಾಜಿನ ಮೇಲೆ ಇಟ್ಟು ಕೆಂಪು ರಕ್ತ ಕಣದಲ್ಲಿ ಮತ್ತು ರಕ್ತದಲ್ಲಿ ಮಲೇರಿಯಾ ರೋಗಾಣುಗಳು ಇರುವುದನ್ನು ಸೂಕ್ಷ್ಮದರ್ಶಕದ ಮೂಲಕ ಪ್ರಾಡಪಡಿಸಿಕೊಳ್ಳುತ್ತಾರೆ.

ಚಿಕಿತ್ಸೆ:

ಮಲೇರಿಯಾ ಜ್ವರದ ಚಿಕಿತ್ಸೆಯಲ್ಲಿ ಮೂರು ವಿಧಗಳಿವೆ:

•       ಚಳಿ ಜ್ವರ ಕಡಿಮೆ ಮಾಡುವುದು

•       ಚಳಿ ಜ್ವರ ಮತ್ತೆ ಬಾರದಂತೆ ನೋಡಿಕೊಳ್ಳುವುದು

•       ಮಲೇರಿಯಾ ಕ್ರಿಮಿಗಳನ್ನು ದೇಹದಿಂದ ಸಂಪೂರ್ಣ ಹೊರ ಹಾಕುವುದು

ಬಹಳ ದಿನಗಳಿಂದ ಮಲೇರಿಯ ರೋಗಕ್ಕೆ ಉಪಯೋಗಿಸುತ್ತಿದ್ದು ಕ್ವಿನೈನ್ ಟ್ಯಾಬ್ಲೆಟ್ಸ್, ಇತ್ತೀಚೆಗೆ ಹೊಸ ಹೊಸ ಔಷಧಿಗಳು ಮಾರುಕಟ್ಟೆಗೆ ಬಂದಿವೆ ಇವುಗಳಿಂದ ಅಡ್ಡ ಪರಿಣಾಮ ಕಡಿಮೆ.

ಮಲೇರಿಯಾ ಔಷಧಿಗಳು

•       ಕ್ಲೋರೋಕ್ವಿನ್

•       ಅಮೋಡಿಯಾ ಕ್ವಿನ್

•       ಪ್ರತಿಯೊಬ್ಬ ವೈದ್ಯರು ತಮ್ಮ ಅನುಭವಕ್ಕನುಸಾರ ಇವುಗಳನ್ನು ಶಿಫಾರಸು ಮಾಡುತ್ತಾರೆ ಇವುಗಳ ಪ್ರಮಾಣ ವಿಚಿತ್ರವಾಗಿದೆ.

•       ಮೊದಲ ದಿನ ಸಿಂಗಲ್ ಡೋರ್ಸ್ ನಲ್ಲಿ ನಾಲ್ಕು ಟ್ಯಾಬ್ಲೆಟ್ ಗಳನ್ನು ಒಂದೇ ಸಲಕ್ಕೆ ತೆಗೆದುಕೊಳ್ಳಬೇಕು.

•       6 ಗಂಟೆಗಳ ನಂತರ ಇನ್ನೆರಡು ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಆನಂತರ ಮೂರು ದಿನ ಬೆಳಗ್ಗೆ ಒಂದು ಸಾಯಂಕಾಲ ಒಂದನ್ನು ಸೇವಿಸಬೇಕು.

•       ಒಟ್ಟು 12 ಮಾತ್ರೆಗಳೊಂದಿಗೆ ಕೋರ್ಸ್ ಪೂರ್ತಿ ಆಗುತ್ತದೆ ಇದು ಗುಡ್ಡವರಿಗೆ

•       ಚಿಕ್ಕ ಮಕ್ಕಳಿಗೆ ಅವರ ತೂಕದ ಪ್ರಕಾರ ಕ್ಲೋರೋ ಕ್ವೀನ್ ಸಿರಪ್ನ ಪ್ರಮಾಣ ಡೋಸೆಜ್ ನಿರ್ಣಯಿಸುತ್ತಾರೆ.

•       ಕ್ಲೋರೋ ಕ್ವಿನ್ ನಿಂದ ಆಗುವ ಸೈಡ್ ಎಫೆಕ್ಟ್ ಗಳು ಬೆವರುವುದು, ವಾಂತಿ ಇತ್ಯಾದಿ ಅಧಿಕವಾಗಿರುತ್ತದೆ. ಆದುದರಿಂದ ಈ ಮಾತ್ರೆಗಳನ್ನು ಊಟ ತಿಂಡಿ ತಿಂದ ನಂತರ ತೆಗೆದುಕೊಳ್ಳಬೇಕು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು

•       ಕ್ಲೋರೋ ಕ್ವಿನ್ ನಿಂದ ರಕ್ತನಾಳಗಳಲ್ಲಿರುವ ರೋಗಾಣುಗಳು ನಾಶವಾಗುತ್ತವೆಯೇ ವಿನಹ ಪಿತ್ತ ಜನಕಾಂಗದಲ್ಲಿರುವುವು ಜೀವಂತವಾಗಿರುತ್ತವೆ. ಕೆಲವು ದಿನಗಳ ನಂತರ ರಕ್ತಕ್ಕೆ ಸೇರುತ್ತದೆ ಆಗ ಜ್ವರ ಬರುತ್ತದೆ. ಆದುದರಿಂದ ಕೂಡಿದರು ಪುನಃ ವಾರಕ್ಕೆ ಎರಡು ಕ್ಲೋರೋ ಕ್ವಿನ್ ಮಾತ್ರೆಗಳನ್ನು ತಪ್ಪದೇ ತೆಗೆದುಕೊಳ್ಳಬೇಕು. ಇಷ್ಟಾದರೂ ಪಿತ್ತ ಜನಕಾಂಗದಲ್ಲಿರುವ ರೋಗಾಣುಗಳು ನಾಶ ಹೊಂದುವುದಿಲ್ಲ.

•       ಪಿತ್ತ ಜನಕಾಂಗದಲ್ಲಿರುವ ರೋಗಾಣುಗಳು ಸಾಧಾರಣ ಮಾತ್ರೆಗಳಿಗೆ ನಾಶ ಹೊಂದದಿರುವುದರಿಂದ Primaquine ಎನ್ನುವ ಔಷಧಿಯೇ ಇದಕ್ಕೆ ರಾಮಬಾಣ

•       ಈ Primaquine ಪಿತ್ತ ಜನಕಾಂಗದಲ್ಲಿರುವ ರೋಗಾಣುಗಳನ್ನು ನಾಶಪಡಿಸುತ್ತವೆಯಾದರು, ಇದರಿಂದ ಕೆಲವು ದುಷ್ಪರಿಣಾಮ ಆಗುವ ಸಾಧ್ಯತೆ ಇದೆ. ಇದನ್ನು ವೈದ್ಯರ ಮೇಲಿವಿಚಾರಣೆ ಸಲಹೆಯಂತೆ ಸೇವಿಸಬೇಕು. ಕೆಲವು ಬಾರಿ ಈ ಔಷಧಿಯಿಂದ ಕೆಂಪು ರಕ್ತ ಕಣಗಳು ಹಾನಿಯಾಗಿ, ಕಾಮಾಲೆ ರೋಗ ಬರುವ ಸಾಧ್ಯತೆ ಇದೆ.

ಗರ್ಭಿಣಿಯರಿಗೆ

•       ಗರ್ಭಿಣಿಯರಿಗೆ ಮಲೇರಿಯಾ ಬಂದರೆ ಮೂರು ತಿಂಗಳಾದ ನಂತರ ಮಾತ್ರೆಗಳನ್ನು ಕೊಡಬಹುದು. Chloroquine, Quinine ಅನ್ನು ಮೂರು ತಿಂಗಳ ಒಳಗಿನ ಗರ್ಭಿಣಿಯರಿಗೆ ಕೊಟ್ಟಾಗ ಗರ್ಭಪಾತ ಆಗುವ ಸಾಧ್ಯತೆ ಇದೆ.

•       •Primaquine ಮಾತ್ರೆಗಳನ್ನು ಯಾವ ಕಾರಣಕ್ಕೂ ಗರ್ಭಿಣಿಯರಿಗೆ ಕೊಡಬಾರದು.

ಮೆದುಳಿನ ಮಲೇರಿಯಾ

•       Plasmodium Falciparum ಎನ್ನುವ ಮಲೇರಿಯಾ ಜೀವನುಗಳಿಂದ ಮನುಷ್ಯನ ಮೆದುಳಿಗೆ ಸೋಂಕುಂಟಾಗುತ್ತದೆ. ಇಂತಹ ಮಲೇರಿಯಾ ಬಂದಾಗ ಮೆದುಳಿನ ರಕ್ತನಾಳಗಳಲ್ಲಿ ತಡೆ ಉಂಟಾಗಿ ಆತನಿಗೆ ಫಿಟ್ಸ್ ಬರಬಹುದು ಮರಣವು ಸಂಭವಿಸಬಹುದು.

•       ಇದನ್ನು Cerebral Malaria ಎನ್ನುತ್ತಾರೆ ಈ ರೋಗದಲ್ಲಿ ಕೆಂಪು ರಕ್ತ ಕಣಗಳಿಗೆ ಅತಿಯಾದ ನಷ್ಟ ಉಂಟಾಗಿ ಕಿಡ್ನಿಯಲ್ಲಿ ಏರುಪೇರಾಗಿ ಜ್ವರದೊಂದಿಗೆ ಆತನ ಮೂತ್ರ ಕಪ್ಪು ಬಣ್ಣಕ್ಕೆ ತಿರುಗಿ ಕಪ್ಪಾದ ಮೂತ್ರ ವಿಸರ್ಜಿಸಲ್ಪಡುತ್ತದೆ ಬ್ಲಾಕ್ ವಾಟರ್ ಫೀವರ್ ಎನ್ನುವ ಈ ರೋಗದಿಂದ ಸಾವು ಸಂಭವಿಸುವ ಸಾಧ್ಯತೆ ಇದೆ.

ಕ್ವಿನೈನ್ – ಕ್ಲೋರೋ ಕ್ವೀನ್

•       ಕ್ವಿನೈನ್ ಔಷಧಿಯನ್ನು ಬಹಳ ವರ್ಷಗಳಿಂದ ಮಲೇರಿಯಾ ರೋಗಕ್ಕೆ ಉಪಯೋಗಿಸುತ್ತಿದ್ದಾರೆ ಇದರ ನಂತರ ಅನೇಕ ಹೊಸ ಔಷಧಿಗಳು ಬಂದಿವೆ.

•       ಕ್ವಿನೈನ್ ನಲ್ಲಿ ಅಡ್ಡ ಪರಿಣಾಮಗಳು ಅಧಿಕವಿರುವುದರಿಂದ ಕ್ಲೋರೋಕ್ವಿನೈನ್ ಬಳಕೆಯಲ್ಲಿ ಬಂದಿದೆ. ಆದರೆ ಸೆರೆಬ್ರಲ್ ಮಲೇರಿಯಾಗೆ ಕ್ಲೋರೋಕ್ವಿನೈನ್ ಅಷ್ಟು ಉಪಯುಕ್ತವಾಗಿಲ್ಲ ಅದರಿಂದ ಪುನಃ ಕ್ವಿನೈನ್ ಗೆ ಪ್ರಾಮುಖ್ಯತೆ ಹೆಚ್ಚಿತು. ಮುಖ್ಯವಾಗಿ ಸೆರೆಬ್ರಲ್ ಮೇಲೆ ಟ್ರೀಟ್ಮೆಂಟ್ನಲ್ಲಿ ಕ್ವಿನೈನ್ ಸೈಡ್ ಎಫೆಕ್ಟ್ ಯಾವುದೆಂದರೆ

•       ಮೈ ಬೆವರುವುದು

•       ಕಣ್ಣುಗಳು ಮಂಜಾಗುವುದು ತಲೆನೋವು

•       ಕ್ವಿನೈನ್ ಮಾತ್ರೆಗಳನ್ನು ಅತಿಯಾಗಿ ತೆಗೆದುಕೊಂಡರೆ ಹೃದಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಮಲೇರಿಯಾ ರೋಗದ ಮುಂಜಾಗ್ರತಾ ಕ್ರಮಗಳು

•       ಸೊಳ್ಳೆಗಳ ನಿರ್ಮೂಲನೆಗಾಗಿ ಔಷಧಿಯನ್ನು ಸಿಂಪಡಿಸುವುದು.

•       ಸೊಳ್ಳೆಗಳ ತಾಣಗಳನ್ನು ಪತ್ತೆ ಹಚ್ಚಿ ಔಷಧಿ ಸಿಂಪಡಿಸುವ ಮೂಲಕ, ಅದರ ಲಾರ್ವಗಳನ್ನು ನಾಶಪಡಿಸುವುದು.

•       ಸೊಳ್ಳೆಗಳು ಕಚ್ಚೆತ್ತಿರುವಂತೆ ಮನೆಯಲ್ಲಿ ಹೊಗೆಬತ್ತಿ ಅಥವಾ ಮ್ಯಾಟ್ ಉಪಯೋಗಿಸುವುದರ ಜೊತೆಗೆ ಸೊಳ್ಳೆ ಪರದೆಯಂತಹ ನಿಯಂತ್ರಣ ಕಾರ್ಯವನ್ನು ಕೈಗೊಳ್ಳಬೇಕು.

•       ಇತ್ತೀಚಿಗೆ ಅನೇಕ ವಿಧವಾದ ಸ್ಪ್ರೇ ಲಭ್ಯವಿರುವುದರಿಂದ ಸೊಳ್ಳೆಗಳ ಜೊತೆ ಇತರೆ ಕೀಟಗಳನ್ನು ಹತೋಟಿಯಲ್ಲಿ ಇಡಬಹುದು.

•       ಸೊಳ್ಳೆಯೊಂದಿಗೆ ಹೋರಾಡುವುದೆಂದರೆ ಅದರ ಮೊಟ್ಟೆ ಮರಿ ಯನ್ನು ನಾಶಪಡಿಸುವುದಾಗಿದೆ.

•       ಮನೆಯಲ್ಲಿರುವ ಫ್ಲವರ್ ಪಾಟ್ ಟೈರ್ ಮುಂತಾದವುಗಳಲ್ಲಿ ಎರಡು ಮೂರು ದಿನಗಳಿಗಿಂತ ಜಾಸ್ತಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಮತ್ತು ನಿಂತ ನೀರಿಗೆ ಸ್ವಲ್ಪ ಸೀಮೆಎಣ್ಣೆ ಹಾಕುವುದು. ನಿಂತ ನೀರಲ್ಲಿ ಸುಳ್ಳೇ ಅಭಿವೃದ್ಧಿ ಆಗುತ್ತದೆ.

•       ಮನೆಯ ನೀರಿನ ಪಾತ್ರಗಳನ್ನು ಪತ್ರವಾಗಿ ಮುಚ್ಚಿಡಬೇಕು ನೀರು ಬದಲಿಸುವಾಗ ಸ್ವಚ್ಛಗೊಳಿಸಿ ನೀರು ತುಂಬಬೇಕು.

•       ಮನೆಯ ಮೇಲಿನ ನೀರಿನ ತೊಟ್ಟಿ, ಸ್ಟೀಲ್ನದಾಗಿದ್ದರೆ ಉತ್ತಮ ಅದರ ಮುಚ್ಚಳವನ್ನು ಭದ್ರವಾಗಿ ಮುಚ್ಚಬೇಕು.

•       ಮನೆಯ ಆವರಣದಲ್ಲಿ ನೀರಿನ ಬಗ್ಗೆ ಇದ್ದು ಕೆಲಸ ಮಾಡದಿರುವಾಗ ಶುದ್ಧ ಮಾಡಿ ಒಣಗಿಸಿಡಿ.

•       ಮುಖ್ಯವಾಗಿ ಮಳೆಗಾಲದಲ್ಲಿ ಸಜ್ಜೆ ಮೇಲೆ ತಗ್ಗಿನಲ್ಲಿ ನೀರು ಇಲ್ಲದಂತೆ ಮಾಡಬೇಕು.