ಮನೆ ಮನೆ ಮದ್ದು ಮಲೇರಿಯಾ

ಮಲೇರಿಯಾ

0

  ಮಲೇರಿಯಾ ರೋಗಕ್ಕೆ ಒಂದೇ ದಿವಸ ಕ್ಲೋರೋಕ್ವೀನ್ ಪಾಸ್ ಫೇಟ್ ಮಾತ್ರೆಗಳನ್ನು ನಾಲ್ಕು ಒಂದೇ ಸಲ ನುಂಗುವುದರಿಂದ ಗುಣವಾಗುವುದು. ಹಾಗೆ ಸಾಧ್ಯವಾಗದಿದ್ದರೆ ಎರಡೆರಡು  ಮಾತ್ರೆ ಮೂರು ದಿನ ಸೇವಿಸಿರಿ. ಪ್ರಿಮಾಕ್ಟೀನ ಸಹ ಮಲೇರಿ ಯಾಕೆ ಔಷಧವಾಗಿದೆ.

Join Our Whatsapp Group

 ರಕ್ತ ಒತ್ತಡ :-

1. ರಕ್ತದ ಒತ್ತಡದಲ್ಲಿ ಬೀಟ್  ರೊಟ್ ರಸ 4 ಚಮಚಕ್ಕೆ ಒಂದು ಚಮಚ ನಿಂಬೆರಸ ಸೇರಿಸಿ,ಬೆಳಿಗ್ಗೆ ಕುಡಿಯುವುದರಿಂದ ರಕ್ತದ ಒತ್ತಡ ಕಡಿಮೆಯಾಗುತ್ತದೆ.

2. ಪ್ರತಿದಿನವೂ ಒಂದೊಂದು ಬಾಳೆಹಣ್ಣನ್ನು ಸೇವಿಸುವುದರಿಂದ ರಕ್ತದ ಒತ್ತಡ ಕಡಿಮೆಯಾಗುತ್ತದೆಂದು ಡಾಕ್ಟರ್ ಆರ್. ಬಿ. ಸಿಂಗ್ ಎಂಬ ಖ್ಯಾತ ವೈದ್ಯರು ತಿಳಿಸಿರುತ್ತಾರೆ

3. ಬೆಳ್ಳುಳ್ಳಿ ಗಡ್ಡೆಯನ್ನು ಜಜ್ಜಿ ಹಾಲಿನಲ್ಲಿ ಕುದಿಸಿ, ಸೋಸಿಕೊಂಡು ಸಕ್ಕರೆ ಬೆರೆಸಿ, ಮಲಗುವ ಮುಂಚೆ ಸೇವಿಸಿದರೆ ರಕ್ತದ ಒತ್ತಡ  ಕಡಿಮೆಯಾಗುವುದು.

4. ಅಧಿಕ ರಕ್ತದ ಒತ್ತಡ ವಿರುವವರು ಕಲ್ಲಂಗಡಿ ಹಣ್ಣಿನ ಬೀಜದ ಒಳಗಿನ ಬಿಳಿಯ ಭಾಗವನ್ನು ಸೇವಿಸುವುದರಿಂದ ಕಡಿಮೆಯಾಗುವುದು.

5. ಪಿತ್ತ ಅಧಿಕವಾಗಿ  ಕಂಡು ಬಂದರೆ ರಕ್ತದ ಒತ್ತಡ ಇರುತ್ತದೆ. ಆಗ ಪ್ರತಿದಿನ ಚೆನ್ನಾಗಿ ಬಲಿತ ಎರಡು ನೆಲ್ಲಿಕಾಯಿ ಸೇವಿಸಿದರೆ ಪಿತ್ತ ಶಾಂತಿಯೂ ಆಗಿ ರಕ್ತದ ಒತ್ತಡ ಕಡಿಮೆಯಾಗಿ ಸ್ಕರ್ವಿ ಎಂಬ ರೋಗ ಕೂಡ ನಿವಾರಣೆ ಆಗುತ್ತದೆ.ಬಾಯಿ ಹುಣ್ಣು ಗುಣವಾಗುತ್ತದೆ.

6. ನಿಂಬೆ ರಸವನ್ನು ಬಾರ್ಲಿ ಗಂಜಿಯಲ್ಲಿ ಸೇರಿಸಿ ಸೇವಿಸುವುದರಿಂದ ರಕ್ತದ ಒತ್ತಡ ಗುಣವಾಗುವುದು.

7. ಆಹಾರದಲ್ಲಿ ಪ್ರತಿದಿನವೂ ಬೀಟ್ ರೊಟ್ ಸೇವಿಸುವುದರಿಂದ ರಕ್ತದ ಒತ್ತಡ ನಿವಾರಣೆ ಆಗುವುದು.