1. ಡಾಲ್ಚಿನ್ನಿಗೆ ಕಾಡು ಮೆಣಸಿನ ಪುಡಿ ಸೇರಿಸಿ,ಕುದಿಸಿ ಮಾಡಿದ ಕಷಾಯಕ್ಕೆ ಜೇನುತುಪ್ಪ ಸೇರಿಸಿ,ಸೇವಿಸುವುದರಿಂದ ಮಲೇರಿಯ ಅಥವಾ ಚಳಿ ಜ್ವರ ನಿಲ್ಲುವುದು.
2. ತುಳಸಿ ಸೊಪ್ಪಿನ ರಸವನ್ನು ಚಳಿ ಜ್ವರ ಬಂದಾಗ ಮೈಗೆ ತಿಕ್ಕುವುದರಿಂದ ಚಳಿ ಕಡಿಮೆಯಾಗುವುದು.
3. ನಿಂಬೆರಸಕ್ಕೆ ಅಷ್ಟೇ ಪ್ರಮಾಣದ ಈರುಳ್ಳಿ ರಸ ಸೇರಿಸಿ,ನಾಲ್ಕೈದು ಟೀ ಸ್ಪೂನಿನಷ್ಟು ದಿನವೂ ಮೂರು ಬಾರಿ ಬಿಡದೆ ಸೇವಿಸುತ್ತಿದ್ದರೆ ಮಲೇರಿಯಾ ಜ್ವರದ ತಾಪ ಕಡಿಮೆಯಾಗುವುದು.
4. ಒಂದು ಬಟ್ಟಲು ಕುದಿಯುವ ನೀರಿಗೆ ಒಂದು ಟೀ ಸ್ಪೂನಿನಷ್ಟು ಮೆಣಸಿನ ಪುಡಿ ಸೇರಿಸಿ,ಬಿಡಿಸಿದ ಮೂರು ನಾಲ್ಕು ಬೆಳ್ಳುಳ್ಳಿ ತೊಳೇಗಳೊಂದಿಗೆ ಕುದಿಸಿ ಕಷಾಯ ಮಾಡಿ ಸಣ್ಣಗಾದ ನಂತರ ಶೋಧಿಸಿ,ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿಯಂತೆ ಸೇವಿಸುತ್ತಿದ್ದರೆ ವಾರದ ಒಳಗಾಗಿ ಮಲೇರಿಯಾ ಜ್ವರ ನಿಲ್ಲುವುದು.
5. ಮಲೇರಿಯಾದಿಂದ ನರಳುವವರಿಗೆ ಬಾಳೆಹಣ್ಣಿನ ಸೇವನೆ ಗುಣಕಾರಿ.
6. ಕೊಳಚೆ ಪ್ರದೇಶಗಳಾಗಲು ಅವಕಾಶ ಕೊಡದೆ, ನೈರ್ಮಲ್ಯದಿಂದ ವಾತಾವರಣವನ್ನು ಇಡುವುದರಿಂದ ಸೊಳ್ಳೆಗಳ ಕಾಟ ಇಲ್ಲದೆ ಮಲೇರಿಯಾದ ಸುಡುವೆ ಇರದು.
ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ :
1. ಬೇವಿನ ಎಲೆಗಳ ರಸವನ್ನು ಹನಿಯಾಗಿ ಮೂಗಿನ ಹೊಳ್ಳೆಯೊಳಗೆ ಬಿಡುವುದರಿಂದ ಮೂಗಿನಲ್ಲಿ ರತಸ್ರಾವ ಆಗುತ್ತಿದ್ದರೆ ನಿಲ್ಲುವುದು.
2. ಎಮ್ಮೆ ಅಥವಾ ಹಸಿವಿನ ಸಗಣಿಯನ್ನು ಮೂಗಿನ ಬಳಿ ಹಿಡಿದು, ಮೂಸಿ ನೋಡಲು ಬಿಟ್ಟರೆ ಮೂಗಿನಲ್ಲಿ ರಕ್ತ ಸುರಿಯುವುದು ನಿಲ್ಲುವುದು.
3. ಕೆಲವು ತೊಟ್ಟು ನಿಂಬೆ ರಸವನ್ನು ಹೂವಿನೊಳಗೆ ಬಿಟ್ಟರೂ ಸಹ ಮೂಗಿನೊಳಗೆ ಬಿಟ್ಟರೂ ಸಹ ಮೂಗಿನಲ್ಲಿ ಸುರಿಯುವ ರಕ್ತ ನಿಲ್ಲುವುದು.