ಮನೆ ರಾಜ್ಯ ಮಲ್ಲಿಕಾರ್ಜುನ ಖರ್ಗೆಯವರೇ ನಿಮ್ಮ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿಕೊಡಿ – ಗೋವಿಂದ ಕಾರಜೋಳ

ಮಲ್ಲಿಕಾರ್ಜುನ ಖರ್ಗೆಯವರೇ ನಿಮ್ಮ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿಕೊಡಿ – ಗೋವಿಂದ ಕಾರಜೋಳ

0

ಬೆಂಗಳೂರು : ಮಲ್ಲಿಕಾರ್ಜುನ ಖರ್ಗೆಯವರೇ ನಿಮ್ಮ ಮನೆ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿಕೊಡಿ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ. ಆರ್‌ಎಸ್‌ಎಸ್ ಚಟುವಟಿಕೆ ನಿಷೇಧದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ವಿಚಾರವಾಗಿ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀವು ಎದುರಿಸಬೇಕಿರೋದು ಆರ್‌ಎಸ್‌ಎಸ್ ಅಲ್ಲ, ಬಿಜೆಪಿಯನ್ನು.

ನೀವು ಎದುರಿಸಬೇಕಿರೋದು ಮೋದಿಯನ್ನು, ಮೋಹನ್ ಭಾಗವತ್ ಅವರನ್ನು ಅಲ್ಲ. ಸೋನಿಯಾ ಗಾಂಧಿಯವರನ್ನು ಮೆಚ್ಚಿಸೋಕೆ ಆರ್‌ಎಸ್‌ಎಸ್ ಟೀಕೆ ಟಿಪ್ಪಣಿ ಮಾಡೋದು ಬಿಡಿ. ಇದನ್ನು ದೇಶದ ಜನರು ಸಹಿಸೋದಿಲ್ಲ ಎಂದು ಕಿಡಿಕಾರಿದರು. ಯಾರನ್ನೋ ಮೆಚ್ಚಿಸೋದಕ್ಕೆ ಹೋಗಿ ಈ ರೀತಿ ಹೇಳಿಕೆ ಕೊಡಬೇಡಿ. ಆರ್‌ಎಸ್‌ಎಸ್‌ನಲ್ಲಿ ಜಾತಿ ಪದ್ಧತಿ ಇಲ್ಲ. ನೀವು ಇದೇ ರೀತಿ ಮಾತು ಆಡುತ್ತಿದ್ದರೆ ರಸ್ತೆಯಲ್ಲಿ ಓಡಾಡೋದು ಕಷ್ಟ ಆಗುತ್ತದೆ. ಆರ್‌ಎಸ್‌ಎಸ್ ರಾಜಕೀಯ ಪಕ್ಷ ಅಲ್ಲ, ಮೋಹನ್ ಭಾಗವತ್ ರಾಜಕಾರಣಿ ಅಲ್ಲ.

ರಾಹುಲ್ ಗಾಂಧಿ ಎದುರಿಸಬೇಕಾಗಿರುವುದು ಬಿಜೆಪಿಯನ್ನು, ಪ್ರಧಾನಿ ಮೋದಿಯವರನ್ನು. ನೀವು ಸೋನಿಯಾ, ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಮಾತಾಡುವುದನ್ನು 140 ಕೋಟಿ ಜನ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ನಾನೂ ಸಿಎಂ ಯಾಕಾಗಬಾರದು ಎಂಬ ಡಾ. ಪರಮೇಶ್ವರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸಿಎಂ ಆದ ದಿನದಿಂದಲೇ ಸಿಎಂ ಕುರ್ಚಿ ಬಗ್ಗೆ ಚರ್ಚೆ ಆಗುತ್ತಿದೆ. ಎರಡೂವರೆ ವರ್ಷದಲ್ಲಿ ಆಡಳಿತ ಕುಸಿದು ರೈತರ ಸಾವಿನಲ್ಲಿ ರಾಜ್ಯ ದೇಶದಲ್ಲೇ ಎರಡನೇ ಸ್ಥಾನಕ್ಕೆ ಹೋಗಿದೆ.

ಇಂದು ಸಿದ್ದರಾಮಯ್ಯ ಜಾತಿ ಗಣತಿ, ಆಹಾರ ಕಿಟ್ ಹೀಗೆ ಬೇರೆ ಬೇರೆ ನಾಟಕ ಮಾಡುತ್ತಿದ್ದಾರೆ. ಬಡವರ ಹಣವನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸುತ್ತಿದ್ದಾರೆ. ಇಂದು ಸಿಎಂ ಡಿನ್ನರ್ ಮೀಟಿಂಗ್ ಸಮಾಧಾನ ಮಾಡಲು ಅಲ್ಲ. ಊಟ ಹಾಕಿ ಬಿಹಾರ ಚುನಾವಣೆಗೆ ಟಾರ್ಗೆಟ್ ಫಿಕ್ಸ್ ಮಾಡಲು ಕರೆದಿದ್ದಾರೆ ಹೊರತು ಮೇಯಿಸಲು ಅಲ್ಲ ಎಂದರು.