ಮನೆ ರಾಜಕೀಯ INDI ಮೈತ್ರಿಕೂಟ ಮುನ್ನಡೆಸಲು ಮಮತಾ ಬ್ಯಾನರ್ಜಿ ಉತ್ತಮ ವ್ಯಕ್ತಿ: ಲಾಲು ಪ್ರಸಾದ್ ಯಾದವ್

INDI ಮೈತ್ರಿಕೂಟ ಮುನ್ನಡೆಸಲು ಮಮತಾ ಬ್ಯಾನರ್ಜಿ ಉತ್ತಮ ವ್ಯಕ್ತಿ: ಲಾಲು ಪ್ರಸಾದ್ ಯಾದವ್

0

ಪಾಟ್ನ: ಇಂಡಿ(INDI) ಮೈತ್ರಿಕೂಟ ಮುನ್ನಡೆಸಲು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಉತ್ತಮ ವ್ಯಕ್ತಿ ಎಂದು ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

Join Our Whatsapp Group

ಇದಕ್ಕೂ ಮೊದಲು ಇಂಡಿ ಮೈತ್ರಿಕೂಟದ ನಾಯಕತ್ವ ವಹಿಸಿಕೊಳ್ಳಲು ಶರದ್ ಪವಾರ್, ಅಖಿಲೇಶ್ ಯಾದವ್ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಿದ್ದರು.

ಮಮತಾ ಬ್ಯಾನರ್ಜಿಗೆ ಇಂಡಿ ಮೈತ್ರಿಕೂಟದ ನಾಯಕತ್ವ ಸಿಗಬೇಕು ಎಂದು ಮಾಧ್ಯಮಗಳಿಗೆ ಪಾಟ್ನಾದಲ್ಲಿ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ. ಲಾಲು ಪ್ರಸಾದ್ ಯಾದವ್ ಅವರ ಈ ಹೇಳಿಕೆ ರಾಹುಲ್ ಗಾಂಧಿಗೆ ಹಿನ್ನೆಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಮಾತನಾಡಿದ್ದು, “ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಯಾರೂ ಪ್ರಶ್ನಿಸುತ್ತಿಲ್ಲ, ಅವರು ನಮ್ಮೆಲ್ಲರ ನಾಯಕರಾಗಿದ್ದಾರೆ. ನಮ್ಮ ಕೆಲವು ಮಿತ್ರಪಕ್ಷಗಳಾದ ಟಿಎಂಸಿ, ಲಾಲೂ, ಅಖಿಲೇಶ್ ಇಂಡಿ ಮೈತ್ರಿ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದರೆ, ಹೊಸದನ್ನು ಹೇಳಲು ಬಯಸಿದರೆ ಮತ್ತು ಇಂಡಿ ಮೈತ್ರಿಯನ್ನು ಬಲಪಡಿಸಲು ಬಯಸಿದರೆ ಅದನ್ನು ಪರಿಗಣಿಸಬೇಕು ಮತ್ತು ಕಾಂಗ್ರೆಸ್ ಚರ್ಚೆಗೆ ಸೇರಬೇಕು ಎಂದು ಹೇಳಿದ್ದಾರೆ.