ಮನೆ ರಾಜ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಎಂ ನಿಂದಿಸಿದ್ದ ವ್ಯಕ್ತಿಯ ಬಂಧನ..!

ಸೋಶಿಯಲ್ ಮೀಡಿಯಾದಲ್ಲಿ ಸಿಎಂ ನಿಂದಿಸಿದ್ದ ವ್ಯಕ್ತಿಯ ಬಂಧನ..!

0

ಬೆಂಗಳೂರು : ಸೋಶಿಯಲ್ ಮೀಡಿಯಾದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ನಿಂದಿಸಿದ್ದ ವ್ಯಕ್ತಿಯನ್ನು ಸಿಸಿಬಿ ಸೈಬರ್ ಪೊಲೀಸರು ಬಂಧಿಸಿದ್ದಾರೆ. ವಸಂತ್ ಕುಮಾರ್ (40) ಬಂಧಿತ ಆರೋಪಿ. ಸಕಲೇಶಪುರದ ವಸಂತ್ ಕುಮಾರ್ ನಿವೃತ್ತ ಯೋಧನಾಗಿದ್ದು, ನಿವೃತ್ತಿ ಬಳಿಕ ಊರಿನಲ್ಲಿ ವ್ಯವಸಾಯ ಮಾಡುತ್ತಿದ್ದ.

ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನ ಕನ್ನಡ ಬರುತ್ತ ಎಂದು ಸಿಎಂ ಸಿದ್ದರಾಮಯ್ಯ ಕೇಳಿದ್ದರು. ಇದಕ್ಕೆ ಹನುಮ ಭಕ್ತ ಅನ್ನೋ ಫೇಸ್‌ಬುಕ್ ಪೇಜ್‌ನಲ್ಲಿ ಸಿಎಂ ನಿಂದಿಸಿ ವಸಂತ್ ಕುಮಾರ್ ಪೋಸ್ಟ್ ಹಾಕಿದ್ದ ಎನ್ನಲಾಗಿದೆ.

ಸಿಎಂ ಕುರಿತು ಏಕವಚನದಲ್ಲೇ ಕೆಟ್ಟದಾಗಿ ನಿಂದಿಸಿ ಪೋಸ್ಟ್ ಮಾಡಿದ್ದ. ಈ ಸಂಬಂಧ ಸಿಸಿಬಿ ಸೈಬರ್ ಪೊಲೀಸರು ವಸಂತ್ ಕುಮಾರ್‌ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.