ಮನೆ ಅಪರಾಧ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಬಂಧನ

ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಬಂಧನ

0

ಮಂಡ್ಯ: ಜಿಲ್ಲೆಯಲ್ಲಿ ಪುಟ್ಟ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ 55 ವರ್ಷದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಆರೋಪಿ ಶಿವಣ್ಣ ಎಂಬಾತ ಮೂರು ವರ್ಷದ ಮಗುವನ್ನು ಪಕ್ಕದ ಮನೆಯಿಂದ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ.

ಬಾಗಿಲನ್ನು ಲಾಕ್ ಮಾಡಿದ ನಂತರ, ಆತ ಮಗುವಿನ ಬಟ್ಟೆಗಳನ್ನು ಕಳಚಿದ್ದಾನೆ. ಮಗುವಿನ ಕೂಗನ್ನು ಕೇಳಿದ ನೆರೆಹೊರೆಯವರು ಅನುಮಾನಗೊಂಡು ಆರೋಪಿಯ ಮನೆಗೆ ಧಾವಿಸಿದ್ದಾರೆ. ಬಳಿಕ ಬಾಗಿಲು ಒಡೆದು ಮಗುವನ್ನು ರಕ್ಷಿಸಿದ್ದಾರೆ. ಆದರೆ, ಆರೋಪಿ ಹಿಂಬಾಗಿಲ ಮೂಲಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ಈ ಸಂಬಂಧ ಮಗುವಿನ ಪೋಷಕರು ಕೆಆರ್‌ಎಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

ಹಿಂದಿನ ಲೇಖನಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಿರಂತರ ಪರಿಶ್ರಮ, ಶಿಸ್ತು, ಬದ್ಧತೆ ಮುಖ್ಯ: ಕೆ ಲಕ್ಷ್ಮೀ ಪ್ರಿಯಾ
ಮುಂದಿನ ಲೇಖನ2030 ರ ವೇಳೆಗೆ ಸಂಪೂರ್ಣ 100% ಸಾಕ್ಷರತೆ ಸಾಧಿಸುವ ಗುರಿ: ಆರ್ ಲೋಕನಾಥ್