ಮನೆ ಅಂತಾರಾಷ್ಟ್ರೀಯ ಅಮೆರಿಕದಲ್ಲಿ ಪತ್ನಿ, ಮಗನ ಮುಂದೆ ವ್ಯಕ್ತಿಯ ಶಿರಚ್ಛೇದ – ವಿಡಿಯೋ ವೈರಲ್‌..!

ಅಮೆರಿಕದಲ್ಲಿ ಪತ್ನಿ, ಮಗನ ಮುಂದೆ ವ್ಯಕ್ತಿಯ ಶಿರಚ್ಛೇದ – ವಿಡಿಯೋ ವೈರಲ್‌..!

0

ವಾಷಿಂಗ್ಟನ್‌ : ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ದೊಡ್ಡ ದೊಡ್ಡ ಕೃತ್ಯ ನಡೆಯುತ್ತಿರುವುದು ಸಹಜವಾಗಿಬಿಟ್ಟಿದೆ. ವಿದೇಶಗಳೂ ಇದರಿಂದ ಹೊರತಾಗಿಲ್ಲ. ಅಮೆರಿಕದ ಡಲ್ಲಾಸ್‌ ನಗರದಲ್ಲಿ ನಡೆದಿರುವ ಘಟನೆಯೇ ಇದಕ್ಕೆ ನಿದರ್ಶನವಾಗಿದೆ.

ಕೇವಲ ಕೆಟ್ಟುಹೋದ ವಾಷಿಂಗ್‌ ಮಿಷನ್‌ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಅಮೆರಿಕದಲ್ಲಿ ಪತ್ನಿ, ಮಗನ ಮುಂದೆಯೇ ಕರ್ನಾಟಕ ಮೂಲದ ಮೋಟೆಲ್‌ ಮ್ಯಾನೇಜರ್‌ನ ಶಿರಚ್ಛೇದ ಮಾಡಲಾಗಿದೆ. ಮೋಟೆಲ್ ಎಂಬ ಪದ ಮೋಟರ್ ಲಾಡ್ಜ್ ಅನ್ನೋದನ್ನು ಸೂಚಿಸುತ್ತೇ. ಅಂದರೆ ಸರಳವಾದ ಬಜೆಟ್ ಸ್ನೇಹಿ ವಾಸ್ತವ್ಯಕ್ಕೆ ಯೋಗ್ಯವಾದ ಹೋಟೆಲ್‌ ಮಾದರಿಯ ಸ್ಥಳವಾಗಿದೆ.

ಟೆಕ್ಸಾಸ್‌ನ ಪ್ರಮುಖ ನಗರವಾದ ಡಲ್ಲಾಸ್‌ ಮೋಟೆಲ್‌ನಲ್ಲಿ ಸಹೋದ್ಯೋಗಿಯೇ ಈ ಕೃತ್ಯ ಎಸಗಿರುವುದು ಕಂಡುಬಂದಿದ್ದು, ಈ ಘಟನೆಯ ನಂತರ ಸಹೋದ್ಯೋಗಿಯನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಮೋಟೆಲ್‌ ಮ್ಯಾನೇಜರ್‌ ಆಗಿರುವ ಕರ್ನಾಟಕ ಮೂಲದ ಚಂದ್ರ ನಾಗಮಲ್ಲಯ್ಯ (50), 37 ವರ್ಷದ ತನ್ನ ಸಹೋದ್ಯೋಗಿ ಕೊಬೋಸ್ ಮಾರ್ಟಿನೆಜ್‌ ಮತ್ತು ಮತ್ತೊಬ್ಬ ಮಹಿಳಾ ಸಹೋದ್ಯೋಗಿಗೆ ಕೆಟ್ಟುಹೋಗಿರುವ ವಾಷಿಂಗ್‌ ಮಿಷಿನ್‌ ಬಳಸದಂತೆ ಹೇಳಿದ್ದಾರೆ. ಅವರು ನೇರವಾಗಿ ಹೇಳದೇ ಮತ್ತೊಬ್ಬರಿಂದ ಅನುವಾದಿಸುವಂತೆ ಸೂಚನೆ ನೀಡಿದ್ದಾರೆ. ಅಷ್ಟಕ್ಕೇ ಅಸಮಾಧಾನಗೊಂಡ ಕೊಬೋಸ್ ಮಾರ್ಟಿನೆಜ್ ಅಸಮಾಧಾನಗೊಂಡಿದ್ದಾನೆ ಎಂದು ಹೇಳಲಾಗಿದೆ.

ಅಸಮಾಧಾನಗೊಂದ ಕೊಬೋಸ್ ‌ಮಚ್ಚು ತೆಗೆದುಕೊಂಡು ನಾಗಮಲ್ಲಯ್ಯನಿಗೆ ಇರಿದಿದ್ದಾನೆ. ಆಗ ನಾಗಮಲ್ಲಯ್ಯ ಅಲ್ಲಿಂದ ತಪ್ಪಿಸಿಕೊಂಡು ಪಾರ್ಕಿಂಗ್‌ ಮುಂಭಾಗದಲ್ಲಿದ್ದ ಕಚೇರಿ ಕಡೆಗೆ ದೌಡುಕಿತ್ತಿದ್ದಾನೆ. ಈ ವೇಳೆ ಹೆಂಡತಿ ಮತ್ತು ಮಗ ಮಧ್ಯಪ್ರವೇಶಿಸಲು ಓಡಿಹೋಗಿದ್ದಾರೆ. ಆದರೂ ಆತನ ಬೆನ್ನಟ್ಟಿದ್ದ ಕೊಬೋಸ್‌ ನಾಗಮಲ್ಲಯ್ಯನ ಪತ್ನಿ, ಮಗನ ಮುಂದೆಯೇ ಶಿರಚ್ಛೇದ ಮಾಡಿದ್ದಾನೆ. ಬಳಿಕ ಕತ್ತರಿಸಿದ ತಲೆಯನ್ನು ಕಸದ ತೊಟ್ಟಿಗೆ ಎಸೆದಿದ್ದಾನೆ. ಈ ವಿಡಿಯೋ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಲೆಯನ್ನು ಕಸದ ತೊಟ್ಟಿಗೆ ಎಸೆದು ರಕ್ತ ಹರಿಯುತ್ತಿದ್ದ ಮಚ್ಚು ಹಿಡಿದು ಒಯ್ಯುವಾಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ನಾಗಮಲ್ಲಯ್ಯ ಅವರ ದುರಂತ ಸಾವಿಗೆ ಭಾರತೀಯ ಕಾನ್ಸುಲೇಟ್ ಸಂತಾಪ ಸೂಚಿಸಿದೆ. ನಾವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದ್ದೇವೆ. ಆರೋಪಿ ಡಲ್ಲಾಸ್ ಪೊಲೀಸರ ವಶದಲ್ಲಿದ್ದಾನೆ. ಈ ಪ್ರಕರಣದ ಮೇಲೆ ಗಂಭೀರವಾಗಿ ನಿಗಾ ಇಡುತ್ತೇವೆ ಎಂದು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ.