ಚಿಕ್ಕೋಡಿ: ಕಾರಿಗೆ ಬೆಂಕಿ ತಗುಲಿ ಓರ್ವ ವ್ಯಕ್ತಿ ಸುಟ್ಟು ಕರಕಲಾದ ಘಟನೆ ತಾಲೂಕಿನ ಜೈನಾಪೂರ ಗ್ರಾಮದ ಬಳಿ ಆ.1ರ ಮಂಗಳವಾರ ಮಧ್ಯರಾತ್ರಿ ಸಂಭವಿಸಿದೆ.
ಚಿಕ್ಕೋಡಿ ನಗರದ ಮುಲ್ಲಾ ಪ್ಲಾಟ್ ನಿವಾಸಿ ಪೈರೋಜ ಬಡಗಾಂವ(40) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕಾರು ಮಧ್ಯರಾತ್ರಿ ಬೆಂಕಿಗೆ ಧಗಧಗ ಹೊತ್ತಿ ಉರಿದಿದೆ. ಕಾರಿನಲ್ಲಿದ್ದ ವ್ಯಕ್ತಿ ಸುಟ್ಟು ಕರಕಲಾಗಿದ್ದಾರೆ. ಇದು ಅಪಘಾತವೋ ಅಥವಾ ಕೊಲೆಯೋ ಎಂಬ ಸಂಶಯ ವ್ಯಕ್ತವಾಗಿದೆ.
ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Saval TV on YouTube