ಮನೆ ರಾಜ್ಯ ಬೀದಿನಾಯಿ ದಾಳಿಗೆ ವ್ಯಕ್ತಿ ಬಲಿ – ರಕ್ತಸಿಕ್ತವಾಗಿ ಸಿಕ್ಕ ಶವ

ಬೀದಿನಾಯಿ ದಾಳಿಗೆ ವ್ಯಕ್ತಿ ಬಲಿ – ರಕ್ತಸಿಕ್ತವಾಗಿ ಸಿಕ್ಕ ಶವ

0

ಮಂಗಳೂರು : ನಾಯಿ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ಮಂಗಳೂರು ಹೊರವಲಯದ ಕುಂಪಲ ಎಂಬಲ್ಲಿ ನಡೆದಿದೆ.

ಕುಂಪಲ ನಿವಾಸಿ ದಯಾನಂದ (60) ನಾಯಿ ದಾಳಿಯಿಂದ ಸಾವಿಗೀಡಾದ ವ್ಯಕ್ತಿ. ಅವರ ಮೇಲೆ ಬೀದಿನಾಯಿ ದಾಳಿ ಮಾಡಿವೆ. ಇದರಿಂದ ಅವರು ಸಾವನ್ನಪ್ಪಿದ್ದಾರೆ. ಜನ ವಸತಿ ಪ್ರದೇಶದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಈ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸೋಕೋ ಟೀಮ್ ಸಹ ಪರಿಶೀಲನೆ ನಡೆಸಿದೆ. ನಾಯಿ ದಾಳಿ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ತಿಳಿದುಬಂದಿದೆ.