ಮನೆ ಸ್ಥಳೀಯ ಹೊಂ ಸ್ಟೇಗಳಲ್ಲಿ ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ: ಡಾ.ಕುಮಾರ

ಹೊಂ ಸ್ಟೇಗಳಲ್ಲಿ ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ: ಡಾ.ಕುಮಾರ

0

ಮಂಡ್ಯ: ಪ್ರವಾಸೋದ್ಯಮದ ವ್ಯಾಪ್ತಿಗೆ ಬರುವ ಹೊಂ ಸ್ಟೇಗಳಲ್ಲಿ ಸುರಕ್ಷತಾ ಮತ್ತುರಕ್ಷಣೆಯ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಡಾ.ಕುಮಾರಅವರು ಸೂಚಿಸಿದರು.

ಇಂದು (ಏ.೧೭) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರವಾಸೋದ್ಯಮಅಭಿವೃದ್ಧಿ ಸಮಿತಿ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದಅವರುಜಿಲ್ಲೆಯ ಪ್ರವಾಸೋದ್ಯಮಅಭಿವೃದ್ಧಿ ಹಿತದೃಷ್ಟಿಯಿಂದಜಿಲ್ಲೆಯಲ್ಲಿ ಹೊಸದಾಗಿಅರ್ಜಿ ಸಲ್ಲಿಸಿರುವ ೪ ಹೊಸ ಹೊಂ ಸ್ಟೇ ಗಳಿಗೆ ಪರವಾನಿಗೆ ನೀಡುವ ಮೊದಲು ಹೊಂ ಸ್ಟೇ ಮಾಲೀಕರುಗ್ರಾಮ ಪಂಚಾಯಿತಿಯಿಂದ ಪರವಾನಿಗೆ ಪಡೆದು ಹೊಂ ಸ್ಟೇ ನಡೆಸುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ ಎಂದು ಹೇಳಿದರು.

ಜಿಲ್ಲೆಯಲ್ಲಿಕಾರ್ಯನಿರ್ವಹಿಸುತ್ತಿರುವ ಹೊಂ ಸ್ಟೇಗಳು ಸರ್ಕಾರದ ನಿಯಮಗಳು ಪಾಲಿಸಬೇಕು, ಗುಣಮಟ್ಟದಆರೋಗ್ಯ, ನೈರ್ಮಲ್ಯ ಮತ್ತುಅಗ್ನಿ ಸುರಕ್ಷತೆ ಒಳಗೊಂಡಂತೆ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಲಾಗುತ್ತಿದೆಯೇಎಂದು ಪರೀಕ್ಷಿಸಬೇಕುಎಂದು ಹೇಳಿದರು

ಹೊಸದಾಗಿ ಪರವಾನಿಗೆ ನೀಡುವ ಸಂದರ್ಭದಲ್ಲಿ ಪರೀಶೀಲನೆಗೆ ಸಂಬಂಧ ಪಟ್ಟತಾಲ್ಲೂಕಿನಕಾರ್ಯನಿರ್ವಾಹಕಅಧಿಕಾರಿ, ಅಗ್ನಿಶಾಮಕ ದಳದ ಉಪನಿರ್ದೇಶಕರು, ತಾಲ್ಲೂಕುಆರೋಗ್ಯಾಧಿಕಾರಿ, ಸ್ಥಳೀಯ ಆರಕ್ಷಕ ನಿರೀಕ್ಷಕರು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕರನ್ನು ಒಳಗೊಂಡ ಒಂದು ವಿಶೇ?ತಂಡ ರಚಿಸಿಕೊಂಡು ಪರೀಶೀಲನೆ ನಡೆಸಬೇಕುಎಂದರು.

ಜಲಸಾಹಸ ಕ್ರೀಡೆ
ಮುಖ್ಯಮಂತ್ರಿಗಳು ೨೦೨೪-೨೫ ನೇ ಸಾಲಿನ ಆಯವ್ಯಯ ಭಾ?ಣದಲ್ಲಿ ತಿಳಿಸಿದಂತೆ, ರಾಜ್ಯದ ಜಾಲಾಶಯಗಳ ಹಿನ್ನೀರಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಲ ಕ್ರೀಡೆ ಮತ್ತು ಜಲಸಾಹಸ ಕ್ರೀಡೆಗಳನ್ನು ಯೋಜಿಸಿ ಪ್ರವಾಸೋದ್ಯಮಅಭಿವೃದ್ಧಿಪಡಿಸಲಾಗುವುದುಎಂದು ಘೋಷಿಸಿರುವ ಹಿನ್ನೆಲೆಜಿಲ್ಲೆಯಲ್ಲಿ ೫ ಜಲಾಕ್ರೀಡೆಗೆಅನುಕೂಲಕರ ಜಾಗಗಳನ್ನು ಈಗಾಗಲೇ ಗುರುತಿಸಲಾಗಿದೆಎಂದರು.

ನುರಿತತಜ್ಞರತಂಡವನ್ನು ರಚಿಸಿ ಜಲ ಸಾಹಸ ಮತ್ತು ಜಲ ಕ್ರೀಡೆಗಳಿಗೆ ಗುರುತಿಸಲಾಗಿರುವ ಜಾಗಗಳು ಸೂಕ್ತವಾಗಿ ಇದೆಯೇ ಮತ್ತುಎಲ್ಲಾರೀತಿಯಿಂದ ಸುರಕ್ಷಿತವಾದ ಕ್ರಮಗಳನ್ನು ಕೈಗೊಳ್ಳಲು ಯೋಗ್ಯವಾದ ಸ್ಥಳವಾಗಿದೆಯೇ ಎಂದು ಪರೀಶೀಲನೆ ನಡೆಸಿ ಇ- ಟೆಂಡರ್‌ಕರೆಯಲಾಗುವುದುಎಂದು ತಿಳಿಸಿದರು.

ಯಾತ್ರಿನಿವಾಸಿ ಕಟ್ಟಡ ನಿರ್ವಹಣೆ
ಜಿಲ್ಲೆಯ ನಾಗಮಂಗಲ ತಾಲೂಕಿನ ಮುಳುಕಟ್ಟೆ ಹಾಗೂ ಪಾಂಡವಪುರತಾಲೂಕಿನ ಮೇಲುಕೋಟೆಯಲ್ಲಿ ನಿರ್ಮಿಸಿರುವ ಯಾತ್ರಿನಿವಾಸ ಕಟ್ಟಡಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಇ- ಟೆಂಡರ್‌ಕರೆದು, ಯಾತ್ರಿಕರುತಂಗಲು ಸೂಕ್ತ ವ್ಯವಸ್ಥೆಕಲ್ಪಿಸಲಾಗುವುದುಎಂದು ತಿಳಿಸಿದರು.

ಪ್ರವಾಸೋದ್ಯಮಇಲಾಖೆಯ ಪಟ್ಟಿಗೆಜಿಲ್ಲೆಯ ನೂತನ ಪ್ರವಾಸಿ ತಾಣಗಳು
ಪ್ರವಾಸೋದ್ಯಮಇಲಾಖೆಯ ಉಪ ನಿರ್ದೇಶಕರಾಘವೇಂದ್ರಅವರು ಮಾತನಾಡಿ ಸರ್ಕಾರದಆದೇಶದಂತೆ ಪ್ರವಾಸೋದ್ಯಮದಅಭಿವೃದ್ಧಿದೃಷ್ಟಿಯಿಂದಜಿಲ್ಲೆಯಲ್ಲಿ ನೂತನ ಪ್ರವಾಸಿ ತಾಣಗಳನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಗುರುತಿಸಿರುವ ಎಲ್ಲಾ ತಾಣಗಳು ತನ್ನದೇಆದ ವಿಶೇ?, ವಿಶಿ?ತೆ, ಮಹತ್ವವನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿದೆಎಂದರು.

ಮಂಡ್ಯ- ೧೨, ಮಳವಳ್ಳಿ- ೧೧, ಮದ್ದೂರು- ೧೮, ಶ್ರೀರಂಗಪಟ್ಟಣ – ೨೪, ಪಾಂಡವಪುರ -೧೩, ನಾಗಮಂಗಲ -೧೦, ಕೆ ಆರ್ ಪೇಟೆ -೧೮ ಸೇರಿದಂತೆಒಟ್ಟು -೧೦೬ ನೂತನ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿ ಕೆ ಆರ್ ನಂದಿನಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಕೃ?ಕುಮಾರ್, ಜಿಲ್ಲಾಕುಟುಂಬ ಮತ್ತುಆರೋಗ್ಯಕಲ್ಯಾಣಾಧಿಕಾರಿಡಾ.ಕೆ.ಮೋಹನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಡಾ.ನಂದೀಶ್, ನಿರ್ಮಿತಿಕೇಂದ್ರದಜಯ ಪ್ರಕಾಶ್ ಸೇರಿದಂತೆಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.