ಮನೆ ರಾಜ್ಯ ಮಂಡ್ಯ: 23 ಲಕ್ಷ ಬೆಲೆ ಬಾಳುವ 125  ಮೊಬೈಲ್ ಪತ್ತೆ ಹಚ್ಚಿದ ಸೆನ್ ಠಾಣಾ ಪೊಲೀಸರು

ಮಂಡ್ಯ: 23 ಲಕ್ಷ ಬೆಲೆ ಬಾಳುವ 125  ಮೊಬೈಲ್ ಪತ್ತೆ ಹಚ್ಚಿದ ಸೆನ್ ಠಾಣಾ ಪೊಲೀಸರು

0

ಮಂಡ್ಯ: ಮಂಡ್ಯದಲ್ಲಿ ಸೆನ್ (CEN) ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, CEIR ಪೋರ್ಟಲ್ ಮೂಲಕ ಕಳುವಾದ ಮೊಬೈಲ್ ಗಳನ್ನು ಪತ್ತೆ ಹಚ್ಚಿದ್ದು, ಮಂಡ್ಯ ಜಿಲ್ಲಾದ್ಯಂತ ಕಳೆದ ಮೂರು ತಿಂಗಳಲ್ಲಿ ಕಳ್ಳತನವಾಗಿದ್ದ ವಿವಿಧ ಮಾದರಿಯ ಮೊಬೈಲ್ ಗಳನ್ನು ಪತ್ತೆ ಹಚ್ಚಿದ್ದಾರೆ.

CEN ಅಪರಾಧ ಪೊಲೀಸ್ ಠಾಣೆಯ ಆರಕ್ಷಕ ಮಂಜೇಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಸುಮಾರು 23 ಲಕ್ಷ ಬೆಲೆ ಬಾಳುವ 125  ಮೊಬೈಲ್’ಗಳನ್ನು ಪತ್ತೆ ಹಚ್ಚಲಾಗಿದೆ.

ಮಂಡ್ಯ ಎಸ್ಪಿ ಎನ್. ಯತೀಶ್ ನೇತೃತ್ವದಲ್ಲಿ ವಾರಸುದಾರರಿಗೆ ಮೊಬೈಲ್ ನ್ನು ಪೊಲೀಸರು ಹಸ್ತಾಂತರ ಮಾಡಿದ್ದಾರೆ.

ಈ ಹಿಂದೆಯೂ ಪೊಲೀಸರು 130 ಮೊಬೈಲ್ ಗಳನ್ನು ಪತ್ತೆ ಹಚ್ಚಿದ್ದರು. ಒಟ್ಟು ಜಿಲ್ಲಾದ್ಯಂತ ಈವರೆಗೆ  ಕಳ್ಳತನವಾಗಿದ್ದ 45 ಲಕ್ಷ ಮೌಲ್ಯದ 255 ಮೊಬೈಲ್ ಪತ್ತೆ ಮಾಡಿರುವ CEN ಪೊಲೀಸರ ಕಾರ್ಯವನ್ನು ಎಸ್ ಪಿ ಎನ್.ಯತೀಶ್ ಶ್ಲಾಘಿಸಿದ್ದಾರೆ.

ಸಾರ್ವಜನಿಕರು ಮೊಬೈಲ್ ಕಳ್ಳತನವಾದರೆ ಚಿಂತಿಸದೆ ಸೂಕ್ತ ದಾಖಲೆ ಮೂಲಕ ಕೆಎಸ್ ಪಿ ಆ್ಯಪ್ ನಲ್ಲಿ ನಲ್ಲಿ e-lost ಪ್ರತಿ ಪಡೆದು CEIR ಪೋರ್ಟಲ್ ನಲ್ಲಿ ದೂರು ದಾಖಲಿಸಿ. ಹೆಚ್ಚಿನ ಸಂಖ್ಯೆಯಲ್ಲಿ CEIR ಪೊರ್ಟಲ್ ನ್ನು ಸದುಪಯೋಗ ಪಡಿಸಿಕೊಳ್ಳಲು ಎಸ್ ಪಿ ಎನ್.ಯತೀಶ್ ಮನವಿ ಮಾಡಿದರು.

ಹಿಂದಿನ ಲೇಖನಕೆಲವು ಉದ್ದೇಶಕ್ಕಾಗಿ ಕೆಲ ನಿರ್ಧಾರ ಅನಿವಾರ್ಯ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಮುಂದಿನ ಲೇಖನಸೆ.18 ರಂದು ರಿಯಲ್ ಸ್ಟಾರ್ ಉಪೇಂದ್ರ  ಹುಟ್ಟು ಹಬ್ಬ: ರ್ಊರ್ವಶಿ ಥಿಯೇಟರ್ ನಲ್ಲಿ UI ಸಿನಿಮಾದ ಟೀಸರ್ ರಿಲೀಸ್