ಮಂಡ್ಯ: ತರಗತಿಗೆ ಬರುತ್ತಿಲ್ಲವೆಂದು ಪೋಷಕರಿಗೆ ದೂರು ನೀಡಿದ್ದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿ, ಉಪನ್ಯಾಸಕರಿಗೆ ಲಾಂಗ್ ತೋರಿಸಿ ವಿದ್ಯಾರ್ಥಿ ದರ್ಪ ಮೆರೆದಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಡಿಪ್ಲೊಮೋ ಕಾಲೇಜಿನಲ್ಲಿ ನಡೆದಿದೆ.
ಉದಯ್ ಗೌಡ (18) ಎನ್ನುವ ವಿದ್ಯಾರ್ಥಿ ಉಪನ್ಯಾಸಕರಿಗೆ ಹೆದರಿಸಿದವನು.
ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಡಿಪ್ಲೊಮೋ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಈತ ತರಗತಿಗೆ ಬರುತ್ತಿರಲ್ಲವಂತೆ. ಹೀಗಾಗಿ ಉಪನ್ಯಾಸಕ ಚಂದನ್, ಉದಯ್ ಕ್ಲಾಸ್ ಗೆ ಸರಿಯಾಗಿ ಬರುತ್ತಿಲ್ಲವೆಂದು ಆತನ ಪೋಷಕರಿಗೆ ಹೇಳಿದ್ದಾರೆ.
ಬಳಿಕ ಪೋಷಕರು ಮನೆಯಲ್ಲಿ ಉದಯ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಉದಯ್ ಮಚ್ಚು ಹಿಡಿದು ಕಾಲೇಜಿಗೆ ಬಂದು ಉಪನ್ಯಾಸಕ ಚಂದನ್ ಅವರಿಗೆ ಬೆದರಿಕೆ ಹಾಕಿದ್ದಾನೆ. ನನ್ನ ಬಗ್ಗೆ ನೀವು ನಮ್ ಮನೆಯವರಿಗೆ ಹೇಗೆ ಹೇಳಿದ್ರಿ ಎಂದು ಪ್ರಶ್ನಿಸಿದ್ದು, ಈ ದೃಶ್ಯ ವಿದ್ಯಾರ್ಥಿಗಳ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಈ ಬಗ್ಗೆ ಉಪನ್ಯಾಸಕ ಬೆಳ್ಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಳಿಕ ತನ್ನ ತಪ್ಪಿನ ಅರಿವಾಗಿ ವಿದ್ಯಾರ್ಥಿ ಉದಯ್ ಗೌಡ, ಪೋಷಕರೊಂದಿಗೆ ಬಂದು ಉಪನ್ಯಾಸಕ ಚಂದನ್ ಬಳಿ ಕ್ಷಮೆಯಾಚಿಸಿದ್ದಾನೆ.