ಮಂಡ್ಯ: ವೃದ್ಧನ ಮೇಲೆ ನಾಯಿಗಳು ದಾಳಿ ನಡೆಸಿದ ಪರಿಣಾಮ ಅಪರಿಚಿತ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿಯ ಬಾರ್ ಒಂದರ ಬಳಿ ನಡೆದಿದೆ.
ಮದ್ಯಪಾನ ಮಾಡಿ ರಸ್ತೆಯಲ್ಲೆ ಬಿದ್ದಿದ್ದ ಅಪರಿಚಿತ ವೃದ್ಧನ ಮೇಲೆ ನಾಯಿಗಳು ದಾಳಿ ಮಾಡಿದ್ದು, ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ವೃದ್ಧನ ಗುರುತು ಹಾಗೂ ವಿಳಾಸ ಪತ್ತೆ ಪೊಲೀಸರು ಮುಂದಾಗಿದ್ದಾರೆ.














