ಮನೆ ಅಪರಾಧ ಮಂಡ್ಯ: ಮನೆ ಮೇಲೆ ಅಬಕಾರಿ ಇಲಾಖೆ ದಾಳಿಯಲ್ಲಿ ಬೃಹತ್ ನಕಲಿ ಲಿಕ್ಕರ್ ದಂಧೆ ಬಯಲಿಗೆ

ಮಂಡ್ಯ: ಮನೆ ಮೇಲೆ ಅಬಕಾರಿ ಇಲಾಖೆ ದಾಳಿಯಲ್ಲಿ ಬೃಹತ್ ನಕಲಿ ಲಿಕ್ಕರ್ ದಂಧೆ ಬಯಲಿಗೆ

0

ಮಂಡ್ಯ: ಮಂಡ್ಯ ಜಿಲ್ಲೆಯ ಬಿಟಿ ಲಲಿತಾ ನಾಯಕ್ ಬಡಾವಣೆಯಲ್ಲಿ ಭಾನುವಾರ ಅಬಕಾರಿ ಇಲಾಖೆ ನಡೆಸಿದ ರೇಡ್‌ನಲ್ಲಿ ಬೃಹತ್ ನಕಲಿ ಲಿಕ್ಕರ್ ದಂಧೆ ಬಯಲಾಗಿದೆ.

Join Our Whatsapp Group

ಸಾಲು ಸಾಲಾಗಿ ಜೋಡಿಸಿಟ್ಟಿರುವ ಸ್ಪಿರಿಟ್ ತುಂಬಿರುವ ಕ್ಯಾನ್‌ಗಳು, ಮತ್ತೊಂದೆಡೆ ದುಬಾರಿ ಮದ್ಯದ ಬಾಟಲ್‌ಗಳು ಪತ್ತೆಯಾಗಿವೆ.

ಗ್ಯಾಂಗೊಂದು ಮನೆಯೊಂದನ್ನು ಬಾಡಿಗೆ ಪಡೆದು ‘ಕಾಮಧೇನು ಕಂಫರ್ಟ್ಸ್’ ಅನ್ನೋ ಹೆಸರಲ್ಲಿ ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಮದ್ಯ ತಯಾರಿಕೆ ದಂಧೆ ನಡೆಸುತ್ತಿತ್ತು. ಮನೆಯಲ್ಲೇ ಮದ್ಯದ ಸ್ಯಾಚೆಟ್, ಸ್ಟಿಕ್ಕರ್ ತಯಾರಿಸುವ ಯಂತ್ರ ಇಟ್ಟುಕೊಂಡಿದ್ದರು. ಕರ್ನಾಟಕ ಸರ್ಕಾರದ ಲಾಂಛನ, ಅಬಕಾರಿ ಇಲಾಖೆ ಚಿಹ್ನೆಯನ್ನೂ ಬಳಕೆ ಮಾಡುತ್ತಿದ್ದರು ಎಂದು ಅಬಕಾರಿ ಡಿವೈಎಸ್‌ಪಿ ಸೋಮಶೇಖರ್ ತಿಳಿಸಿದ್ದಾರೆ.

590 ಲೀಟರ್ ಸ್ಪಿರಿಟ್, 30 ಲೀಟರ್ ನಕಲಿ ಮದ್ಯ ಜಪ್ತಿ

ಪಕ್ಕಾ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಹಂಡ್ರೆಡ್ ಪೈಪರ್ಸ್‌, ಎಂಸಿ ವಿಸ್ಕಿ, ಬ್ಲಾಕ್ ಆ್ಯಂಡ್ ವೈಟ್, ಟೀಚರ್ಸ್ ಸ್ಕಾಚ್, ಇಂಪೀರಿಯಲ್ ಬ್ಲೂ, ಹಂಡ್ರೆಡ್ ಪೈಪರ್ಸ್, ಎಂಸಿ ವಿಸ್ಕಿ, ಸಿಲ್ವರ್ ಕಪ್ ಸ್ಯಾಚೆಟ್ ಪತ್ತೆಯಾಗಿವೆ. ದಾಳಿ ವೇಳೆ 35 ಲೀಟರ್ ನಕಲಿ ಮದ್ಯದ ಸ್ಯಾಚೆಟ್​ಗಳು ಸಿಕ್ಕಿವೆ. 590 ಲೀಟರ್ ಸ್ಪಿರಿಟ್, 30 ಲೀಟರ್ ನಕಲಿ ಮದ್ಯ. ಸ್ಟಿಕ್ಕರ್ ತಯಾರಿಸುವ ಯಂತ್ರ, ಕಚ್ಚಾ ಸಾಮಗ್ರಿಯನ್ನ ಸೀಜ್ ಮಾಡಲಾಗಿದೆ. ಒಬ್ಬ ಆರೋಪಿ ಸೆರೆಸಿಕ್ಕಿದ್ದು ಉಳಿದವರು ಪರಾರಿಯಾಗಿದ್ದಾರೆ.

ಮದ್ಯಪ್ರಿಯರ ಜೀವದ ಜತೆ ಚೆಲ್ಲಾಟ ಆಡುತ್ತಿರುವ ಈ ದಂಧೆ ಹಿಂದೆ ದೊಡ್ಡ ಜಾಲವೇ ಇದೆ. ಖದೀಮರ ಗ್ಯಾಂಗ್‌ ನಕಲಿ ಮದ್ಯವನ್ನು ಯಾವ್ಯಾವ ಬಾರ್‌ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ಪೂರೈಕೆ ಮಾಡುತ್ತಿತ್ತು ಎಂಬುದು ತನಿಖೆಯಿಂದ ತಿಳಿಯಬೇಕಿದೆ.