ಮನೆ ರಾಜ್ಯ ಮಂಡ್ಯ ನಗರ ಬಂದ್ ಸಂಪೂರ್ಣ ನೀರಸ: ಸಿಗದ ಜನ ಬೆಂಬಲ

ಮಂಡ್ಯ ನಗರ ಬಂದ್ ಸಂಪೂರ್ಣ ನೀರಸ: ಸಿಗದ ಜನ ಬೆಂಬಲ

0

ಮಂಡ್ಯ: ಕೆರಗೋಡು ಹನುಮ ಧ್ವಜ ವಿವಾದ ಹಿನ್ನಲೆಯಲ್ಲಿ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಮಂಡ್ಯ ನಗರ ಬಂದ್ ಗೆ ಜನರ ಬೆಂಬಲ ಸಿಗದೇ ಸಂಪೂರ್ಣ ನೀರಸವಾಗಿದ್ದು, ಜನ ಜೀವನ ಸಹಜ ಸ್ಥಿತಿಯಲ್ಲಿದೆ.

ಬಸ್, ಆಟೋ ಸೇರಿದಂತೆ ವಾಹನಗಳ ಸಂಚಾರ ಎಂದಿನಂತಿದೆ. ವರ್ತಕರು ಎಂದಿನಂತೆ ವಹಿವಾಟು ನಡೆಸುತ್ತಿದ್ದಾರೆ.

ಇದರ ನಡುವೆ ವಿವಾದಿತ ಕೇಂದ್ರ ಸ್ಥಳ ಕೆರಗೋಡು ಗ್ರಾಮದಲ್ಲಿ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ. ಬಹುತೇಕ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ನೀಡಿದ್ದಾರೆ.

ವಿಎಚ್ ಪಿ, ಭಜರಂಗದಳ, ಶ್ರೀರಾಮ ಭಜನಾ ಮಂಡಳಿಯಿಂದ ಕೆರಗೋಡು ಗ್ರಾಮದಿಂದ ಬೈಕ್ ರ್ಯಾಲಿ ಆರಂಭವಾಗಿದೆ.

ನಗರದ ಸಿಲ್ವರ್ ಜ್ಯುಬಿಲಿ ಪಾಕ್೯ ನಲ್ಲಿ ಜಮಾವಣೆಗೊಂಡು, ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೆರವಣಿಗೆಯಲ್ಲಿ ಜೆಡಿಎಸ್, ಬಿಜೆಪಿ ಭಾಗವಹಿಸಲಿದ್ದು, ಬಂದ್ ನಿಂದ ದೂರ ಉಳಿದಿವೆ.