ಮನೆ ಅಪರಾಧ ಮಂಡ್ಯ: ಅಡ್ಡಾದಿಡ್ಡಿ ಕಾರು ಚಾಲನೆ- ತಪ್ಪಿದ ಭಾರೀ ಅನಾಹುತ

ಮಂಡ್ಯ: ಅಡ್ಡಾದಿಡ್ಡಿ ಕಾರು ಚಾಲನೆ- ತಪ್ಪಿದ ಭಾರೀ ಅನಾಹುತ

0

ಮಂಡ್ಯ: ಮಂಡ್ಯ ನಗರದಲ್ಲಿ ಹಾಡುಹಗಲೇ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಕೆಲಕಾಲ ಭಯದ ವಾತಾವರಣ ಸೃಷ್ಟಿ ಮಾಡಿರುವಂತಹ ಘಟನೆ ನೂರಡಿ ರಸ್ತೆಯಲ್ಲಿ ನಡೆದಿದೆ.

Join Our Whatsapp Group

 KA 55 N 0856 ನಂಬರಿನ ಇನ್ನೋವಾ ಕ್ರಿಸ್ಟಾ ಕಾರು ಬೈಕ್, ಕಾರಿಗೆ ಡಿಕ್ಕಿಹೊಡೆದು ಫುಟ್ ಪಾತ್ ನಲ್ಲಿ ನಿಂತಿದೆ. ಅಸ್ವಸ್ಥ ಅನಾರೋಗ್ಯ ಪೀಡಿತ ಚಾಲಕನಿಂದ ಅಪಘಾತ ಸಂಭವಿಸಿದೆ.

ಕೋರ್ಟ್ ಕೇಸ್ ಹಿನ್ನೆಲೆ ಮಂಡ್ಯಕ್ಕೆ ಆಗಮಿಸಿದ್ದ ಮೈಸೂರು ಮೂಲದ ವ್ಯಕ್ತಿ. ಫುಟ್ ಪಾತ್ ಬಳಿಯ ಸಿಮೆಂಟ್ ಗೋಡೆಗೆ ಡಿಕ್ಕಿಯೊಡೆದ ಪರಿಣಾಮ ಭಾರೀ ಅನಾಹುತ ತಪ್ಪಿದೆ . ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ , ಪರಿಶೀಲನೆ ನಡೆಸಿದರು. ಕಾರಿನಲ್ಲಿದ್ದ ಅಸ್ವಸ್ಥ ವ್ಯಕ್ತಿಯನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಮಂಡ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.