ಮನೆ ರಾಜ್ಯ ಮಂಡ್ಯ: ಕಿಡಿಕೇಡಿಗಳಿಂದ ರೇಷ್ಮೆ ಹುಳು ಸಾಕಾಣಿಕೆ ಮನೆಗೆ ಬೆಂಕಿ- ರೈತನಿಗೆ 7 ಲಕ್ಷ ನಷ್ಟ

ಮಂಡ್ಯ: ಕಿಡಿಕೇಡಿಗಳಿಂದ ರೇಷ್ಮೆ ಹುಳು ಸಾಕಾಣಿಕೆ ಮನೆಗೆ ಬೆಂಕಿ- ರೈತನಿಗೆ 7 ಲಕ್ಷ ನಷ್ಟ

0

ಮಂಡ್ಯ: ಕಿಡಿಗೇಡಿಗಳು ರೇಷ್ಮೆ ಹುಳು ಸಾಕಾಣಿಕೆ ಮನೆಗೆ ಬೆಂಕಿ ಹಾಕಿದ ಪರಿಣಾಮ ರೇಷ್ಮೆ ಹುಳು ಸಾಕಾಣಿಕೆ ಮನೆ ಸುಟ್ಟು ಕರಕಲಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಹೊಂಬೇಗೌಡನ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

ನಾಗರಾಜು ಎಂಬುವವರಿಗೆ ಸೇರಿರುವ ರೇಷ್ಮೆ ಹುಳು ಸಾಕಾಣಿಕ ಮನೆಗೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಸಂಶಯ ವ್ಯಕ್ತವಾಗಿದೆ.

ನಾಗರಾಜು ತಮ್ಮ ತೋಟದಲ್ಲಿ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಿಸಿದ್ದರು.  ರೇಷ್ಮೆ ಗೂಡು ಸಿದ್ದವಾಗಿದ್ದ 150 ಚಂದ್ರಿಕೆಗಳು ಸೇರಿದಂತೆ ಮಾರಾಟಕ್ಕೆ ಸಿದ್ಧವಾಗಿದ್ದ ಗೂಡು ಮನೆ ಬೆಂಕಿಗೆ ಆಹುತಿಯಾಗಿದೆ.

ಮನೆ ಹೊರಗೆ ನಿಲ್ಲಿಸಿದ್ದ ಚಂದ್ರಿಕೆಗಳು, ಮೇಜಗಳು, ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ರೈತನಿಗೆ ಸುಮಾರು 7ಲಕ್ಷ ನಷ್ಟವಾಗಿದೆ.

ಮನೆಯೊಳಗೆ ಯಾರು ಇಲ್ಲದಿದ್ದುದರಿಂದ ಸಾವು-ನೋವು ಸಂಭವಿಸಿಲ್ಲ.  ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.