ಮಂಡ್ಯ: ಮದ್ಯಪಾನ ಮಾಡಿ ಬಂದು ಕಚೇರಿಯಲ್ಲಿ ಸರ್ಕಾರಿ ನೌಕರ ದಾಂಧಲೆ ನಡೆಸಿರುವ ಘಟನೆ ನಾಗಮಂಗಲ ಪಟ್ಟಣದ ಮಿನಿ ವಿಧಾನಸೌಧದ ಕಂದಾಯ ಶಾಖೆಯಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ತಾಲೂಕು ಕಚೇರಿಯ ಗ್ರಾಮ ಲೆಕ್ಕಾಧಿಕಾರಿ ಚಂದ್ರಶೇಖರ್ ಕಚೇರಿಗೆ ಕುಡಿದು ಬಂದು ಕಚೇರಿಯಲ್ಲಿದ್ದ ಫೈಲ್ ಎಸೆದು ಮಹಿಳಾ ಸಿಬ್ಬಂದಿಗೆ ನಿಂದಿಸಿದ್ದಾನೆ.
ಮದ್ಯವ್ಯಸನಿ ನೌಕರನ ಹುಚ್ಚಾಟಕ್ಕೆ ಸಿಬ್ವಂದಿ ಹೈರಾಣಾಗಿದ್ದು, ನೌಕರನ ಪುಂಡಾಟವನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಇಂತಹ ಮದ್ಯವ್ಯಸನಿ ನೌಕರನ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.














