ಮನೆ ಅಪರಾಧ ಮಂಡ್ಯ: ಕುತ್ತಿಗೆ ಬಿಗಿದು ಕಾಫಿ ಉದ್ಯಮಿ ಪತ್ನಿ ಹತ್ಯೆ

ಮಂಡ್ಯ: ಕುತ್ತಿಗೆ ಬಿಗಿದು ಕಾಫಿ ಉದ್ಯಮಿ ಪತ್ನಿ ಹತ್ಯೆ

0

ಮಂಡ್ಯ: ಕಾಫಿ ಉದ್ಯಮಿಯ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಮಂಡ್ಯ ಹೊರವಲಯದ ಹೆಬ್ಬಾಳ ಬಳಿ ಮಂಗಳವಾರ ಸಂಜೆ ನಡೆದಿದೆ.

ಮಂಡ್ಯ ನಗರದ ರಾಘವೇಂದ್ರ ಕಾಫಿ ಹಾಗೂ ಹೆಬ್ಬಾಳ ಬಳಿ ಚಿಕ್ಕೋರಿ ಘಟಕ ನಡೆಸುತ್ತಿದ್ದ ರಮೇಶ್ ಎಂಬುವರ ಪತ್ನಿ ನಳಿನಿ (62) ಹತ್ಯೆಗೀಡಾದವರು.

ಹತ್ಯೆಗೂ ಮುನ್ನ ಅವರು ಹಂತಕರೊಂದಿಗೆ ಸೆಣಸಾಡಿದ್ದಾರೆ. ಕೊನೆಗೆ ಅವರ ಕುತ್ತಿಗೆಯನ್ನು ಬಿಗಿದು ಹತ್ಯೆ ಮಾಡಲಾಗಿದೆ ಎಂಬುದಕ್ಕೆ ಕುರುಹುಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಂಡ್ಯದ ಪೇಟೆ ಬೀದಿ ಕಾಮನ ಸರ್ಕಲ್ ಬಳಿ ರಾಘವೇಂದ್ರ ಕಾಫಿ ವರ್ಕ್ಸ್ ಹೆಸರಿನಲ್ಲಿ ಕಾಫಿಪುಡಿ ಅಂಗಡಿ ನಡೆಸುತ್ತಿದ್ದ ರಮೇಶ ಅವರು ಕೆಲ ವರ್ಷಗಳ ಹಿಂದೆ ಖಾಸಗಿ ಬ್ಯಾಂಕ್  ನಲ್ಲಿ ಸಾಲ ಪಡೆದು ಹೆಬ್ಬಾಳ ಬಳಿ ಕಾಫಿಗೆ ಸಂಬಂಧಿಸಿದಂತೆ ಚಿಕೋರಿ ಘಟಕವನ್ನು ಸ್ಥಾಪಿಸಿದ್ದರು.  

ಆದರೆ ಈ ಉದ್ಯಮದಲ್ಲಿ ನಷ್ಟ ಸಂಭವಿಸಿದ್ದು ಬ್ಯಾಂಕ್ ಸಾಲ ಮರುಪಾವತಿಯಾಗದ ಕಾರಣ ಬ್ಯಾಂಕ್ ನವರು ನ್ಯಾಯಾಲಯದ ಮೂಲಕ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ಈ ಕಾರಣದಿಂದ ಕಳೆದ ಎರಡು ವರ್ಷದಿಂದ ಚಿಕೋರಿ ಘಟಕ ಸ್ಥಗಿತಗೊಂಡಿದೆ. ಸಾಲ ಹಾಗೂ ಉದ್ಯಮಗಳಲ್ಲಿ ಉಂಟಾದ ನಷ್ಟದ ಕಾರಣದಿಂದಾಗಿ ರಮೇಶ್ ಮತ್ತು ನಳಿನಿ ದಂಪತಿ ಮಂಡ್ಯ ತೊರೆದು ಮೈಸೂರು ವೃದ್ದಾಶ್ರಮ ಒಂದಕ್ಕೆ ಸೇರಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಅವರು ಮಂಡ್ಯಕ್ಕೆ ಹಿಂತಿರುಗಿದ್ದರು. ಮಂಡ್ಯ ನಗರದಲ್ಲಿ ಮನೆ ಇದ್ದರೂ ಕೂಡ ಪ್ರತಿದಿನ ಅವರು ಚಿಕೋರಿ ಕಾರ್ಖಾನೆಗೆ ತೆರಳಿ ಅಲ್ಲಿನ ಕೊಠಡಿಯಲ್ಲಿ ಕೆಲಕಾಲ ಇದ್ದು ಬರುತ್ತಿದ್ದರು ಎಂದು ತಿಳಿದುಬಂದಿದೆ.         

ನಳಿನಿ ಅವರ ಸೊಸೆ ಬೆಂಗಳೂರಿನಲ್ಲಿದ್ದು, ಮಂಗಳವಾರ ಸಂಜೆ ಮೊಬೈಲ್ ಗೆ ಕರೆ ಮಾಡಿದಾಗ ನಳಿನಿ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ವಯೋವೃದ್ಧರಾದ ಅವರ ಆರೋಗ್ಯದ ಬಗ್ಗೆ ಕಾಳಜಿಯಿಂದಾಗಿ ನಳಿನಿ ಸೊಸೆ ತಮ್ಮ ಪರಿಚಯಿಸ್ತರಿಗೆ ವಿಷಯ ತಿಳಿಸಿ ಚಿಕೋರಿ ಕಾರ್ಖಾನೆ ಬಳಿ ಹೋಗಿ ಅತ್ತೆಯನ್ನು ನೋಡುವಂತೆ ಹೇಳಿದ್ದರು. ಅದರಂತೆ ಕಾರ್ಖಾನೆ ಬಳಿ ಹೋದಾಗ ಹತ್ಯೆಯ ಪ್ರಕರಣ ಬೆಳಕಿಗೆ ಬಂದಿದೆ.

ಹಿಂದಿನ ಲೇಖನವಿಶ್ವಕಪ್: ನೆದರ್ಲೆಂಡ್ಸ್ ವಿರುದ್ಧ ಆಸ್ಟ್ರೇಲಿಯಾಗೆ ಭರ್ಜರಿ ಜಯ
ಮುಂದಿನ ಲೇಖನಊಟದ ವಿಚಾರಕ್ಕೆ ಗಲಾಟೆ: ಬೆಂಕಿ ಹಚ್ಚಿ ತಾಯಿಯನ್ನೇ ಕೊಂದ ಮಗ