ಮನೆ ರಾಜ್ಯ ಮಂಡ್ಯ:ಧಾರಾಕಾರ ಮಳೆಗೆ ವಿಸಿ ನಾಲೆಯ ಸುರಂಗ ಭೂ ಕುಸಿತ

ಮಂಡ್ಯ:ಧಾರಾಕಾರ ಮಳೆಗೆ ವಿಸಿ ನಾಲೆಯ ಸುರಂಗ ಭೂ ಕುಸಿತ

0

ಮಂಡ್ಯ:ರಾತ್ರಿ ಸುರಿದ ಧಾರಕಾರ ಮಳೆಗೆ ಮಂಡ್ಯ ತಾಲೂಕಿನ ಹುಲಿಕೆರೆ ಗ್ರಾಮದ ವಿಶ್ವೇಶ್ವರಯ್ಯ ನಾಲಾ ಸುರಂಗದಲ್ಲಿ ಭೂ ಕುಸಿತವಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

Join Our Whatsapp Group

ಗ್ರಾಮದ ಮಧ್ಯ ಭಾಗದಲ್ಲಿ ಸುರಂಗ ಹಾದು ಹೋಗಿದ್ದು, ಏಕಾಏಕಿ ನೂರು ಅಡಿ ಸುರಂಗ ಕುಸಿದಿದೆ.

ರಾಜಣ್ಣ ಎಂಬುವವರ ಮನೆಯ ಹಿಂದೆ ಇರುವ ಸುರಂಗ ಕುಸಿದಿದ್ದು, ಏಕಾಏಕಿ ಸುರಂಗ ಕುಸಿದ ಹಿನ್ನೆಲೆ ಮನೆ ಗೋಡೆ ಕುಸಿತವಾಗಿದೆ.

ಹುಲಿಕೆರೆ ಬಳಿಯಿಂದ ವಿ.ಸಿ ನಾಲೆಗೆ ನಿರ್ಮಿಸಿರುವ ಸುರಂಗ ಮಾರ್ಗವು ಏಷ್ಯಾದ ಮೊದಲ ಸುರಂಗ ಮಾರ್ಗವೆಂದೆ ಪ್ರಸಿದ್ಧಿಯಾಗಿದೆ.

ಮದ್ದೂರು ಮಳವಳ್ಳಿ ತಾಲೂಕಿಗೆ ಈ ಸುರಂಗ ಮಾರ್ಗದ‌ ಮೂಲಕ ವಿಸಿ ನಾಲೆ ಹಾದು ಹೋಗಿದೆ.

ವಿ.ಸಿ.ನಾಲಾ ಸುರಂಗದ ಪಕ್ಕದಲ್ಲೇ ಭೂ ಕುಸಿತ ಉಂಟಾಗಿದೆ. ವಿಶ್ವೇಶ್ವರಯ್ಯ ಅವರು ನಿರ್ಮಿಸಿದ ಸುರಂಗ ನಾಲೆಯಿಂದ ಕೇವಲ 20 ಮೀಟರ್ ದೂರದಲ್ಲೇ ಭೂಕುಸಿತ ಉಂಟಾಗಿದೆ. ಇನ್ನು ಸುರಂಗ ನಿರ್ಮಾಣ ವೇಳೆ ಮಣ್ಣು ಹಾಗೂ ಇತರೆ ಸಾಮಗ್ರಿ ಸಾಗಿಸಲು ದಾರಿ ಮಾಡಿಕೊಂಡಿದ್ದ ಜಾಗದಲ್ಲಿ ಭೂ ಕುಸಿತ ಉಂಟಾಗಿದೆ. ನಾಲೆಯ ಸುರಂಗಕ್ಕೆ ಸಂಪರ್ಕ ಕಲ್ಪಿಸಿದ್ದ ಜಾಗವನ್ನು ಸಂಪೂರ್ಣ ಮುಚ್ಟಿರಲಿಲ್ಲ. ಅದರ ಮೇಲ್ಭಾಗದಲ್ಲಿ ಮಣ್ಣು ಮುಚ್ಚಿ ಅದನ್ನು ವಸತಿ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು.

ಸುರಂಗ ನಾಲೆಗೆ ಸರಕು ಸಾಮಗ್ರಿಗಳನ್ನು ಸಾಗಣೆ ಮಾಡಲು ಮಾಡಿಕೊಂಡಿದ್ದ ಕೊಳವೆ ಮಾರ್ಗದ ಮೇಲೆ ಮಣ್ಣು ಮುಚ್ಚಲಾಗಿದ್ದು, ಇದು ಗಟ್ಟಿಯಾಗಿದೆ ಎಂದು ಕೊಂಡು ಅದರ ಮುಂಭಾಗವೇ ರಾಜಣ್ಣ ಎನ್ನುವವರು ಫ್ಲೋರ್‌ ಮಿಲ್‌ ನಿರ್ಮಸಿಕೊಂಡಿದ್ದರು. ಆದರೆ, ಮಣ್ಣು ಗಟ್ಟಿಯಾಗಿ ಕುಳಿತುಕೊಳ್ಳದ ಹಿನ್ನೆಲೆಯಲ್ಲು ರಾತ್ರಿ ಸುರಿದ ಧಾರಾಕಾರ ಮಳೆಗೆ ಕುಸಿತವಾಗಿದೆ. ಏಕಾಏಕಿ ಸುರಂಗದ ಮಾರ್ಗ ಕುಸಿತಗೊಂಡ ಕಾರಣ ಮನೆ ಗೋಡೆಯೂ ಕುಸಿತವಾಗಿದೆ ಎಂದು ಹೇಳಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದಾರೆ. ಇನ್ನು ವಿಸಿ ನಾಲೆಯ ಅಧಿಕಾರಿಗಳು ಭೇಟಿ ಮಾಡಿ ಕೂಡಲೇ ಈ ಸುರಂಗ ಮಾರ್ಗವನ್ನು ಮುಚ್ಚುವಂತೆ ಸ್ಥಳೀಯ ಗ್ರಾಮಸ್ಥರು ಮನವಿ ಮಾಡಿದ್ದಾರೆ.