ಮಂಗಳೂರು(ದಕ್ಷಿಣ ಕನ್ನಡ): ಹಿಂದೂ ಧರ್ಮದ ಯುವಕನನ್ನು ಮುಸ್ಲಿಂ ಯುವತಿ ಮದುವೆಯಾದ ಘಟನೆ ಮಂಗಳೂರಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಇಬ್ಬರ ವಿವಾಹದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪ್ರಶಾಂತ್ ಹಾಗೂ ಆಯೇಷಾ (ಅಕ್ಷತಾ) ವಿವಾಹವಾದ ಜೋಡಿ. ಇವರಿಬ್ಬರು ಮೊನ್ನೆಯಿಂದ ನಾಪತ್ತೆಯಾಗಿದ್ದರು ಎನ್ನಲಾಗಿದೆ.
ಈ ಕುರಿತು ಹಿಂದೂ ಮುಖಂಡ ಶರಣ್ ಪಂಪ್ ವೆಲ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ‘ಆಯಿಷಾಳಿಂದ ಅಕ್ಷತಾ. ನೈಜವಾಗಿ ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಮದುವೆಯಾದ ಮಂಗಳೂರಿನ ಪ್ರಶಾಂತ್ ಮತ್ತು ಅಕ್ಷತಾ. ನಿಮ್ಮ ವೈವಾಹಿಕ ಜೀವನಕ್ಕೆ ಶುಭಾಶಯಗಳು’ ಎಂದಿದ್ದಾರೆ.
ಇವರ ಮದುವೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.