ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ದೈನಂದಿನ ವಿಮಾನ ಸಂಪರ್ಕಕ್ಕೆ ದೊಡ್ಡ ಉತ್ತೇಜನ ದೊರೆತಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ದೇಶೀಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
107 ಪ್ರಯಾಣಿಕರನ್ನು ಹೊತ್ತ ಫ್ಲೈಟ್ ಐಎಕ್ಸ್ 782 ಮಧ್ಯಾಹ್ನ 12:30 ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಿತು. ಇದು ಬೋಯಿಂಗ್ 737 ಮ್ಯಾಕ್ಸ್ ವಿಮಾನದ (ವಿಟಿ-ಬಿಎಕ್ಸ್‌ಡಿ) ಮೊದಲ ಹಾರಾಟವಾಗಿದೆ. ಮಂಗಳೂರಿನಿಂದ ಈಗ ಬೆಂಗಳೂರಿಗೆ ಪ್ರತಿದಿನ ಏಳು ವಿಮಾನಗಳಿವೆ. ಐಎಕ್ಸ್ 678 ವಿಮಾನವು ಮಧ್ಯಾಹ್ನ 1:10ಕ್ಕೆ ಸಿಬ್ಬಂದಿ ಸೇರಿದಂತೆ 92 ಪ್ರಯಾಣಿಕರೊಂದಿಗೆ ಬೆಂಗಳೂರಿಗೆ ಹೊರಟಿತು.
ಮುಖ್ಯ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿ ವೀರೇಂದ್ರ ಮೋಹನ್ ಜೋಶಿ, ವಿಮಾನ ನಿಲ್ದಾಣದ ವಿವಿಧ ವಿಭಾಗಗಳ ಮುಖ್ಯಸ್ಥರು, ಏರ್ ಇಂಡಿಯಾ ಎಕ್ಸ್‌ಪ್ರೆಸ್ , ಏರ್ ಇಂಡಿಯಾ, ಎಐಎಸ್‌ಎಟಿಎಸ್, ಕಸ್ಟಮ್ಸ್, ವಲಸೆ ವಿಭಾಗದ ಮುಖ್ಯ ಸ್ಥರು, ಸಿಐಎಸ್‌ಎಫ್ ಮತ್ತು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಸಾಂಪ್ರದಾಯಿಕವಾಗಿ ದೀಪವನ್ನು ಬೆಳಗಿಸಿದರು.
ಎರಡನೇ ಎಐಇ ವಿಮಾನ ಐಎಕ್ಸ್ 1795 ವಿಮಾನವು ಕಣ್ಣೂರಿನಿಂದ ಸಂಜೆ 4:30 ಕ್ಕೆ ಹೊರಟು ಸಂಜೆ 5:50 ಕ್ಕೆ ಬೆಂಗಳೂರು ತಲುಪಿತು. ಬೆಂಗಳೂರಿನಿಂದ ಸಂಜೆ 6:25ಕ್ಕೆ ಹೊರಟು ರಾತ್ರಿ 7:35ಕ್ಕೆ ಮಂಗಳೂರು ತಲುಪಿದೆ.