ಮಂಗಳೂರು: ಮದುವೆ ವೇಳೆ ಉಂಟಾದ ಗಲಾಟೆಯ ವಿಚಾರವನ್ನು ಬಗೆಹರಿಸಲು ಸಂಧಾನಕ್ಕೆ ಬಂದ ವ್ಯಕ್ತಿಯೊಬ್ಬನನ್ನು ನೇರವಾಗಿ ಹತ್ಯೆಗೈದ ಭೀಕರ ಘಟನೆ ಮಂಗಳೂರಿನ ಹೊರವಲಯದಲ್ಲಿರುವ ವಳಚ್ಚಿಲ್ ಎಂಬಲ್ಲಿ ನಡೆದಿದೆ.
ಹತ್ಯೆಗೊಳಗಾದ ವ್ಯಕ್ತಿಯನ್ನು ಮಂಗಳೂರಿನ ವಾಮಂಜೂರು ನಿವಾಸಿ ಸುಲೈಮಾನ್ (50) ಎಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ, ಮದುವೆಯೊಂದರಲ್ಲಿ ಕೆಲ ದಿನಗಳ ಹಿಂದೆ ನಡುಗಟ್ಟಿದ ಗಲಾಟೆಯ ವಿಚಾರವನ್ನು ಚರ್ಚಿಸಲು ಮತ್ತು ಪರಿಹಾರಕ್ಕೆ ಬರುವ ಉದ್ದೇಶದಿಂದ ಸುಲೈಮಾನ್ ಅವರು ವಳಚ್ಚಿಲ್ ಪ್ರದೇಶಕ್ಕೆ ಬಂದಿದ್ದರು. ಆದರೆ, ಅನಿರೀಕ್ಷಿತವಾಗಿ ಈ ಸಂಧಾನ ಸತ್ಯಾನ್ವೇಷಣೆಯ ಬದಲು ಹಿಂಸಾತ್ಮಕ ಸಂದರ್ಭವನ್ನುಂಟುಮಾಡಿದ್ದು, ಕೊನೆಗೆ ಕೊಲೆಯ ರೂಪವನ್ನು ಪಡೆದಿದೆ.
ಹತ್ಯೆಗೈದ ಆರೋಪಿಯನ್ನು ಮುಸ್ತಫಾ (30) ಎಂದು ಗುರುತಿಸಲಾಗಿದೆ. ಇವರಿಬ್ಬರ ನಡುವೆ ಗಂಭೀರ ವಾದವಿವಾದ ಉಂಟಾದ ಹಿನ್ನೆಲೆಯಲ್ಲಿ ಮುಸ್ತಫಾ ತೀವ್ರ ಕೋಪಕ್ಕೆ ಒಳಗಾಗಿ ತೀವ್ರವಾಗಿ ಹಲ್ಲೆ ಮಾಡಿ ಸುಲೈಮಾನ್ ಅವರನ್ನು ಸ್ಥಳದಲ್ಲೇ ಬರ್ಬರವಾಗಿ ಹತ್ಯೆಗೈದಿದ್ದಾನೆ. ಅಲ್ಲದೇ ಸುಲೈಮಾನ್ ನ ಸಹೋದರರ ಮೇಲೂ ದಾಳಿ ಮಾಡಿ ಪರಾರಿಯಾಗಿದ್ದಾನೆ.
ಗಾಯಗೊಂಡ ರಿಯಾಬ್ ಮತ್ತು ಸಿಯಾಬ್ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.














