ಬೇಸಿಗೆ ಕಾಲ ಆರಂಭವಾಗಿದೆ. ಮಾವಿನ ಹಣ್ಣಿನ ರುಚಿಗಾಗಿ ಎಲ್ಲರೂ ಕಾಯುತ್ತಾರೆ. ಈಗಾಗಲೇ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬಂದಿವೆ. ಮಾವಿನ ಕಾಯಿಗಳಿಂದ ನೀವು ವಿವಿಧ ಖಾದ್ಯಗಳನ್ನು ಮಾಡಿ ಸವಿಯಬಹುದು.
ಬೇಸಿಗೆಯ ಹಣ್ಣುಗಳಲ್ಲಿ ಮಾವು ಅತ್ಯಂತ ಜನಪ್ರಿಯ ಮತ್ತು ರುಚಿಕರ ಹಣ್ಣಾಗಿದೆ. ಬೇಸಿಗೆ ಆರಂಭದಲ್ಲಿ ಮಾಗಿದ ಮಾವಿನ ಹಣ್ಣುಗಳು ಸಿಗಲ್ಲ. ಆದರೆ ಹಸಿ ಮಾವಿನ ಕಾಯಿಗಳು ಸಿಗುತ್ತವೆ. ನೀವು ಹಸಿ ಮಾವಿನ ಕಾಯಿಯಿಂದ ಹಲವು ಪೋಷಕಾಂಶಗಳನ್ನು ಪಡೆಯಬಹುದು.
ಆರೋಗ್ಯಕರ ಹಸಿ ಮಾವಿನ ಚಟ್ನಿ ರೆಸಿಪಿಯನ್ನು ಬೆಳಗ್ಗೆ ತಿಂಡಿಗೆ ಚಪಾತಿ ಇಲ್ಲವೇ ದೋಸೆ ಜೊತೆಗೆ ಮಾಡಿ ಸವಿಯಿರಿ. ನಿಮಗೆಲ್ಲಾ ದೋಸೆ ರೆಸಿಪಿ ಮತ್ತು ಚಪಾತಿ ಮಾಡುವ ವಿಧಾನದ ಬಗ್ಗೆ ಗೊತ್ತೇ ಇದೆ.
ಹಾಗಾಗಿ ನಾವು ಬೆಳಗಿನ ತಿಂಡಿಗೆ ಮಾವಿನಕಾಯಿ ಚಟ್ನಿ ಮಾಡುವುದು ಹೇಗೆ ಅಂತಾ ತಿಳಿಯೋಣ. ಹಸಿ ಮಾವಿನ ಚಟ್ನಿಯು ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ. ಹಸಿ ಮಾವಿನಕಾಯಿ ದ್ರವಗಳ ಉತ್ತಮ ಮೂಲ ಅಂತಾರೆ ತಜ್ಞರು.
ಬೇಸಿಗೆ ಕಾಲದಲ್ಲಿ ಮಾವಿನ ಸೇವನೆ ದೇಹವು ಸಂಪೂರ್ಣವಾಗಿ ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ. ಹಸಿ ಮಾವಿನ ಹಣ್ಣಿನಲ್ಲಿರುವ ಬೀಟಾ ಕ್ಯಾರೋಟಿನ್ ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುತ್ತದೆ. ಸ್ವತಂತ್ರ ರಾಡಿಕಲ್‌ಗಳ ಹಾನಿಕಾರಕ ಪರಿಣಾಮಗಳಿಂದ ದೇಹವನ್ನು ರಕ್ಷಿಸುತ್ತದೆ.
ಹಸಿ ಮಾವಿನಕಾಯಿ ಚಟ್ನಿ ಮಾಡಲು ದೊಡ್ಡ ಗಾತ್ರದ ಒಂದು ಹಸಿ ಮಾವು, ಹಸಿರು ಮೆಣಸಿನಕಾಯಿ – 1, ಶುಂಠಿ – 1 ಇಂಚು ತುಂಡು, ಕೊತ್ತಂಬರಿ ಸೊಪ್ಪು – ½ ಕಪ್, ಪುದೀನ ಎಲೆಗಳು – ¼ ಕಪ್, ಬೆಳ್ಳುಳ್ಳಿ ಎಸಳು – 3 ರಿಂದ 4, ಜೀರಿಗೆ – ½ ಟೀಸ್ಪೂನ್, ಉಪ್ಪು ಬೇಕು.
ಹಸಿ ಮಾವಿನಕಾಯಿ ಮಾಡುವ ವಿಧಾನ ಹೀಗಿದೆ. ಮೊದಲು ಮಾವಿನ ಹಣ್ಣಿನ ಸಿಪ್ಪೆ ತೆಗೆದು ಚೆನ್ನಾಗಿ ಸ್ವಚ್ಛಗೊಳಿಸಿ. ನಂತರ ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಪುದೀನ ಮತ್ತು ಕೊತ್ತಂಬರಿ ಸೊಪ್ಪನ್ನು ತೆಗೆದಿಟ್ಟುಕೊಳ್ಳಿ. ಈಗ ಬ್ಲೆಂಡಿಂಗ್ ಜಾರ್ ತೆಗೆದುಕೊಂಡು ಅದರಲ್ಲಿ ಮಾವಿನಕಾಯಿ, ಪುದೀನಾ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ.
ನಂತರ ಹಸಿರು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಎಸಳು ಮತ್ತು ಜೀರಿಗೆ ಸೇರಿಸಿ. ಇಂಗು, ನೀರು ಸೇರಿಸಿ, ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಚೆನ್ನಾಗಿ ರುಬ್ಬಿಕೊಳ್ಳಿ. ಈಗ ನಿಮ್ಮ ನೆಚ್ಚಿನ ಮಾವಿನಕಾಯಿ ಚಟ್ನಿ ರೆಡಿ. ಚಪಾತಿ ಇಲ್ಲವೇ ದೋಸೆ ಜೊತೆಗೆ ಸವಿಯಿರಿ.