ಮನೆ ರಾಷ್ಟ್ರೀಯ ಮಣಿಪುರ ಹಿಂಸಾಚಾರ: ಬಿಜೆಪಿ ಶಾಸಕ ವುಂಗ್ ಜಾಗಿನ್ ವಾಲ್ಟೆ ಮೇಲೆ ಗುಂಪಿನ ದಾಳಿ

ಮಣಿಪುರ ಹಿಂಸಾಚಾರ: ಬಿಜೆಪಿ ಶಾಸಕ ವುಂಗ್ ಜಾಗಿನ್ ವಾಲ್ಟೆ ಮೇಲೆ ಗುಂಪಿನ ದಾಳಿ

0

ಇಂಫಾಲ್: ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರೊಂದಿಗಿನ ಸಭೆಯ ನಂತರ ರಾಜ್ಯ ಸಚಿವಾಲಯದಿಂದ ಹಿಂದಿರುಗುತ್ತಿದ್ದಾಗ ಗುರುವಾರ ಇಂಫಾಲ್ ನಲ್ಲಿ ಬಿಜೆಪಿ ಶಾಸಕ ವುಂಗ್ ಜಾಗಿನ್ ವಾಲ್ಟೆ ಮೇಲೆ ಗುಂಪೊಂದು ದಾಳಿ ನಡೆಸಿದ್ದು, ಶಾಸಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Join Our Whatsapp Group

ಆದಿವಾಸಿಗಳು ಮತ್ತು ಬಹುಸಂಖ್ಯಾತ ಮೈತೆ ಸಮುದಾಯದ ನಡುವೆ ರಾಜ್ಯಾದ್ಯಂತ ಹಿಂಸಾಚಾರ ಭುಗಿಲೆದ್ದ ನಂತರ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ  ನಡುವೆ ಈ ಘಟನೆ ನಡೆದಿದೆ.

ಫೆರ್ಜಾಲ್ ಜಿಲ್ಲೆಯ ಥಾನ್ಲೋನ್ ನಿಂದ ಮೂರು ಬಾರಿ ಶಾಸಕರಾಗಿರುವ ವಾಲ್ಟೆ ಅವರು ಇಂಫಾಲ್ ನಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ತೆರಳುತ್ತಿದ್ದಾಗ ದಾಳಿ ನಡೆದಿದೆ.

ಶಾಸಕ ಮತ್ತು ಅವರ ಚಾಲಕನ ಮೇಲೆ ಆಕ್ರೋಶಗೊಂಡ ಗುಂಪು ಹಲ್ಲೆ ನಡೆಸಿದ್ದು, ಅವರ ಪಿಎಸ್’ಒ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶಾಸಕರು ಪ್ರಸ್ತುತ ಗಂಭೀರ ಸ್ಥಿತಿಯಲ್ಲಿದ್ದು, ಇಂಫಾಲ್ನ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್) ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.