ಹಿಂದೂ ಧರ್ಮದಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ತ್ರಿಮೂರ್ತಿ ದೇವರುಗಳು. ವಿಷ್ಣು ಮಂತ್ರವನ್ನು ಜಪಿಸುವುದರಿಂದ ಆತನಿಗೆ ಸುಖ, ಶಾಂತಿ, ಸಮೃದ್ಧಿ, ಆರೋಗ್ಯ ಪ್ರಾಪ್ತವಾಗುತ್ತದೆ. ವಿಷ್ಣು ಮಂತ್ರವನ್ನು ಪಠಿಸಿ ಆತನ ಕೃಪೆಗೆ ಪಾತ್ರರಾಗಿ.
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಧಾರಂ ಗಗನಸದ್ರಿಶಂ, ಮೇಘವರ್ಣಂ ಶುಭಾಂಗಂ
ಲಕ್ಷ್ಮಿಂಕಾತಂ ಕಮಲಾನಯನಂ, ಯೋಗಿಭಿರ್ಧ್ಯಾನಗಮ್ಯಂ
ವಂದೇ ವಿಷ್ಣುಂ ಭವಭಯಹರಂ, ಸರ್ವಲೋಕೈಕನಾಥಂ
ಈ ಮಂತ್ರವನ್ನು ನಿಯಮಿತವಾಗಿ ಜಪಿಸುವುದರಿಂದ ಆ ವ್ಯಕ್ತಿಯಲ್ಲಿನ ಭಯವು ನಾಶವಾಗುತ್ತದೆ. ಆ ವ್ಯಕ್ತಿಯು ನಿರ್ಭಯನಾಗುತ್ತಾನೆ. ಈ ಮಂತ್ರದ ಪಠಣೆಯು ಅವಾಸ್ತವ ಲೌಕಿಕ ಸಂಬಂಧದಿಂದ ಅಥವಾ ವ್ಯವಹಾರಗಳಿಂದ ಮತ್ತು ಅದರ ಭಯದಿಂದ ಹೊರಬರಲು ಸಹಕರಿಸುತ್ತದೆ.