ಮನೆ ರಾಜಕೀಯ ಕಾಂಗ್ರೆಸ್’ ಅನೇಕ ಮುಖಂಡರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ:  ಸಿ.ಟಿ.ರವಿ

ಕಾಂಗ್ರೆಸ್’ ಅನೇಕ ಮುಖಂಡರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ:  ಸಿ.ಟಿ.ರವಿ

0

ಹುಬ್ಬಳ್ಳಿ(Hubballi): ಕಾಂಗ್ರೆಸ್ ಪಕ್ಷದ ಹಿರಿ-ಕಿರಿಯ ಮುಖಂಡರು ನಮ್ಮ ಸಂಪರ್ಕದಲ್ಲಿದ್ದು, ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಅದಕ್ಕೆ ಆಪರೇಷನ್ ಕಮಲ ಎನ್ನುತ್ತೀರೋ ಅಥವಾ ರಾಜಕೀಯ ಧೃವೀಕರಣ ಎನ್ನುತ್ತೀರೋ ಜನತೆಗೆ ಬಿಟ್ಟಿದ್ದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾರ್ಮಿಕವಾಗಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಡಿಸೆಂಬರ್ ಅಂತ್ಯದಲ್ಲಿ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎಂದು ಹೇಳಿದರು.

ನೀತಿ, ನಿಯತ್ತು ಮತ್ತು ನೇತೃತ್ವ ಇಲ್ಲದ ಯಾವುದೇ ಪಕ್ಷ ಜಗತ್ತಿನ ಭೂಪಟದಲ್ಲಿ ಇರಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿ ಈಗಿನ ಕಾಂಗ್ರೆಸ್‌ಗೆ ಬಂದಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಕಾಂಗ್ರೆಸ್ ಕುಟುಂಬ ರಾಜಕಾರಣವೇ ನಿಯತ್ತು ಎಂದುಕೊಂಡಿದೆ. ದೇಶದ ಹಿತ ಮತ್ತು ಜನರ ಕಲ್ಯಾಣದ ನಿಯತ್ತಿನ ಅಗತ್ಯವಿದೆ. ಇದ್ಯಾವುದು ಕಾಂಗ್ರೆಸ್’ನಲ್ಲಿ ಇಲ್ಲದಿರುವುದೇ ಅದರ ಅವನತಿಗೆ ಕಾರಣವಾಗಿದೆ ಎಂದರು.

ಬಿ.ಎಸ್. ಯಡಿಯೂರಪ್ಪ ಪ್ರಶ್ನಾತೀತ ನಾಯಕರಾಗಿದ್ದು, ಅವರನ್ನು ಯಾರೂ ಕಟ್ಟಿ ಹಾಕಲು ಸಾಧ್ಯವಿಲ್ಲ. ಬಿಜೆಪಿಯನ್ನು ಬೆಳೆಸಿದ ನಾಯಕ ಅವರು. ಹಾಗೆ, ಬಿಜೆಪಿ ಸಹ ಯಡಿಯೂರಪ್ಪ ಅವರನ್ನು ಬೆಳೆಸಿದೆ. ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟಿಸುತ್ತೇನೆ ಎಂದಿರುವ ಅವರು, ಸದ್ಯದಲ್ಲಿಯೇ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ರಾಷ್ಟ್ರವಾದ, ವಿಕಾಸವಾದದ ನೆಲೆಯಲ್ಲಿ ಎದುರಿಸಲಿದ್ದೇವೆ ಎಂದರು.

ಅಂತಿಮವಾಗಿ ಗೆಲ್ಲುವುದು ಸತ್ಯ: ಸಿ.ಟಿ. ರವಿ’ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಮುರುಘಾ ಶರಣರು ಬಂಧನವಾಗಿ ತನಿಖೆ ಎದುರಿಸುತ್ತಿದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಯಲಿದೆ. ಅದರ ನಂತರ ಸತ್ಯ ಏನೆಂಬುದು ಜನರಿಗೆ ತಿಳಿಯಲಿದೆ. ಸತ್ಯ ಹೊಸಲು ದಾಟುವ ಮೊದಲು, ಸುಳ್ಳು ಊರೆಲ್ಲ ಸುತ್ತಾಡಿ ಬಂದಿರುತ್ತದೆ. ಅಂತಿಮವಾಗಿ ಗೆಲ್ಲುವುದು ಸತ್ಯವೇ ಎಂದು ಸಿ.ಟಿ. ರವಿ ಅಭಿಪ್ರಾಯಪಟ್ಟರು.