ಮನೆ ರಾಜ್ಯ ಹಲವು ಅಕ್ರಮ: ಸ್ವಿಸ್ ಸೆಕ್ಯೂರಿಟಿ ಸರ್ವೀಸ್ ಲೈಸೆನ್ಸ್ ರದ್ದುಗೊಳಿಸಲು ಆದೇಶಿಸಿದ ಮಣಿವಣ್ಣನ್

ಹಲವು ಅಕ್ರಮ: ಸ್ವಿಸ್ ಸೆಕ್ಯೂರಿಟಿ ಸರ್ವೀಸ್ ಲೈಸೆನ್ಸ್ ರದ್ದುಗೊಳಿಸಲು ಆದೇಶಿಸಿದ ಮಣಿವಣ್ಣನ್

0

ಬೆಂಗಳೂರು: ಸ್ವಿಸ್ ಸ್ವಿಸ್ ಸೆಕ್ಯೂರಿಟಿ ಸರ್ವೀಸ್ ನ ಲೈಸೆನ್ಸ್ ರದ್ದು ಮಾಡಿ ಬ್ಲಾಕ್ ಲಿಸ್ಟ್ ಗೆ ಸೇರಿಸಲು ಸಮಾಜ ಕಲ್ಯಾಣ ಇಲಾಖೆ  ಆಯುಕ್ತರಾದ ಪಿ. ಮಣಿವಣ್ಣನ್ ಮೌಖಿಕವಾಗಿ ಆದೇಶಿಸಿದ್ದಾರೆ.

Join Our Whatsapp Group

ಸಮಾಜ ಕಲ್ಯಾಣ ಇಲಾಖೆ ಮತ್ತು ಇಲಾಖೆಯ ಅಧೀನಕ್ಕೆ ಒಳಪಡುವ ನಿಗಮ/ ಮಂಡಳಿ/ ಆಯೋಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ಬೇಡಿಕೆಗಳ ಬಗ್ಗೆ ಚರ್ಚಿಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಜೂನ್ 20 ರಂದು  ಬೆಂಗಳೂರಿನ ವಿಕಾಸ ಸೌಧದ 2ನೇ ಮಹಡಿ ಕೊಠಡಿ ಸಂಖ್ಯೆ 222 ರಲ್ಲಿ ಸಭೆ ಕರೆಯಲಾಗಿತ್ತು.

ಸಭೆಯಲ್ಲಿ  ರಾಜ್ಯದ ಎಲ್ಲಾ ಜಿಲ್ಲೆಗಳ ಸಮಾಜ ಕಲ್ಯಾಣ ಇಲಾಖೆಯ ಜಂಟಿ/ ಉಪ ನಿರ್ದೇಶಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗೆ ಹಾಜರಾಗಲು  ಸೂಚಿಸಲಾಗಿತ್ತು. ಸದರಿ ಸಭೆಯಲ್ಲಿ ಈ ಆದೇಶ ಹೊರಡಿಸಿದ್ದಾರೆ.

ಕಲಬುರಗಿಯಲ್ಲಿ  ಸ್ವಿಸ್ ಸೆಕ್ಯೂರಿಟಿ ಸರ್ವೀಸ್ ನವರು ಗುತ್ತಿಗೆದಾರರಿಗೆ ವೇತನ  ಪಾವತಿಸಿಲ್ಲವೆಂಬ ದೂರುಗಳು ಸಭೆಯಲ್ಲಿ ಕೇಳಿಬಂದವು. ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲಿ ಗುತ್ತಿಗೆದಾರರು, ನೌಕರರು ಸ್ವಿಸ್ ಸೆಕ್ಯೂರಿಟಿ ಸರ್ವೀಸ್ ಮೇಲೆ ಹಲವು ದೂರುಗಳನ್ನು ನೀಡಿರುವುದು ತಿಳಿದುಬಂದಿದೆ.

ಈ ಹಿನ್ನಲೆ ದಾಖಲೆಗಳನ್ನು ಪರಿಶೀಲಿಸಿದಾಗ ಕಂಪನಿಯವರು ನಕಲಿ ದಾಖಲೆ ಸೃಷ್ಠಿಸಿ ಸರ್ಕಾರಕ್ಕೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಗುತ್ತಿಗೆದಾರರ ಆರೋಪಗಳು ಮೇಲ್ನೋಟಕ್ಕೆ ಸತ್ಯವೆಂದು ಕಂಡುಬಂದ ಹಿನ್ನಲೆಯಲ್ಲಿ ಕಂಪನಿಯ ಲೈಸೆನ್ಸ್ ರದ್ದು ಮಾಡಿ, ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗಿದೆ.

ಮಾತ್ರವಲ್ಲದೇ ಸ್ವಿಸ್ ಸೆಕ್ಯೂರಿಟಿ ಸರ್ವೀಸ್ ಟೆಂಡರ್ ಕ್ಯಾನ್ಸಲ್ ಮಾಡಿ ಎಂದು  ಮಣಿವಣ್ಣನ್ ಅವರು ಸೂಚನೆ ನೀಡಿದ್ದು, ‘ಹೊರ ಗುತ್ತಿಗೆ  ನೌಕರರ ಟೆಂಡರ್ ನಲ್ಲಿ ಸ್ವಿಸ್ ಸೆಕ್ಯೂರಿಟಿ ಸರ್ವೀಸ್ ನವರು ಭಾಗವಹಿಸಲು ನಿಷೇಧ ಹೇರಲಾಗಿದೆ.

ಹಿಂದಿನ ಲೇಖನನಂದಿನಿ ಹಾಲಿನ ದರ ಹೆಚ್ಚಿಸಿದ ಕೆಎಂಎಫ್
ಮುಂದಿನ ಲೇಖನಎಎಐ ಅಧಿಕಾರಿ ಮಹಿಳೆಯ ಉಡುಪಿನಲ್ಲಿ ಶವವಾಗಿ ಪತ್ತೆ