ಮನೆ ಆರೋಗ್ಯ ವಾಲ್‌’ನಟ್​ ಸೇವಿಸುವುದರಿಂದ ಹಲವು ಸಮಸ್ಯೆ ನಿವಾರಣೆ

ವಾಲ್‌’ನಟ್​ ಸೇವಿಸುವುದರಿಂದ ಹಲವು ಸಮಸ್ಯೆ ನಿವಾರಣೆ

0

ಬೆಂಗಳೂರು: ಸಾಮಾನ್ಯವಾಗಿ ಹಿರಿಯರು ಮತ್ತು ವೈದ್ಯರು, ಡ್ರೈ ಫ್ರೂಟ್ಸ್‌ ತಿಂದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುವುದನ್ನು ಗಮನಿಸಿಯೇ ಇರುತ್ತೇವೆ. ಯಾವ ಡ್ರೈ ಫ್ರೂಟ್ಸ್​​ನಿಂದ ನಮಗೇನು ಪ್ರಯೋಜನ ಎಂದು ತಿಳಿದುಕೊಂಡರೆ ಒಳ್ಳೆಯದು. ವಾಲ್‌ ನಟ್​ ಅನ್ನು ಸೇವಿಸುವುದರಿಂದ ಹಲವು ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ.

Join Our Whatsapp Group

ವಿವಿಧ ರೀತಿಯ ಖನಿಜಾಂಶಗಳು, ಆರೋಗ್ಯಕರ ಕೊಬ್ಬು ಹಾಗೂ ವಿಟಮಿನ್​ಗಳನ್ನು ಹೊಂದಿರುವ ವಾಲ್‌ ನಟ್‌ ಮೆದುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಎರಡು ವಾಲ್‌ನಟ್‌ಗಳನ್ನು ಪ್ರತಿದಿನ ತಪ್ಪದೇ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.

ವಾಲ್‌ ನಟ್ಸ್‌ ನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳಿವೆ. ಇದು ಎಲ್‌ ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡುತ್ತದೆ. ವಾಲ್‌ನಟ್‌ ಮೆದುಳಿನ ಕಾರ್ಯ ಮತ್ತು ಬೆಳವಣಿಗೆಗೆ ಅವಶ್ಯಕವಾಗಿರುವ ಕೊಬ್ಬಿನಾಮ್ಲಗಳನ್ನು ಒದಗಿಸುವುದರ ಜತೆಗೆ ಇದೊಂದು ಉತ್ತಮ ಆಹಾರ ಎಂದು ಕೆಲ ಅಧ್ಯಯನಗಳು ಹೇಳಿವೆ.

ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಇದು, ಹೆಚ್ಚಿನ ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುತ್ತವೆ. ಒಮೆಗಾ-3 ಕೊಬ್ಬಿನಾಮ್ಲಗಳು ರಕ್ತನಾಳಗಳ ವಿಶ್ರಾಂತಿ ಮತ್ತು ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಹಲವಾರು ಸೋಂಕುಗಳಿಂದ ಮತ್ತು ಅನಾರೋಗ್ಯದಿಂದ ಕಾಪಾಡಲು ಸಹಾಯ ಮಾಡುವ ಇದು, ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಒಟ್ಟಾರೆ ವಾಲ್​ನಟ್​ ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಆಹಾರವಾಗಿದ್ದು, ದೇಹವನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ.