ಈ ಮಾಸದಲ್ಲಿ ಶು. 10ಕ್ಕೆ ರವಿವಾರವಿದ್ದು ಅಂದು ಮೂಲಾ ನಕ್ಷತ್ರ ಕೂಡಿದರೆ ಎಳ್ಳು, ಚೌಡಲ, ಎಣ್ಣೆ ಮೊದಲಾದ ರಸ ಪದಾರ್ಥಗಳನ್ನು ಸಂಗ್ರಹಿಸಿ ಮುಂದೆ ಮಾರಿದರೆ ಲಾಭವಿದೆ.
ಶು. 11ರಂದು ರವಿವಾರ ಬಂದರೆ ಹತ್ತಿ, ಅರಳೆ, ನೂಲು, ಬಟ್ಟೆ ಸಂಗ್ರಹ ಮಾಡಿ ವೈಶಾಖ ಮಾಸದಲ್ಲಿ ಮಾರಿದರೆ ಲಾಭವಾಗುವುದು ಶು. 15 ರಂದು ಮೃಗಶಿರ ನಕ್ಷತ್ರ ಬಂದರೆ ಲೋಹ,ಕಿರಣಿ,ವಸ್ತುಗಳು ಚರ್ಮ, ತಂಬಾಕು,ಕರ್ಪೂರ,ಹುಣಸೆ, ಕೊಬ್ಬರಿ, ತೆಂಗು, ಅಡಿಕೆ,ಶುಂಠಿ, ಮೆಣಸು, ಮುಂತಾದ ರಸ ಪದಾರ್ಥಗಳೆಲ್ಲ ತೇಜಿಯು. ಶು. 3 ರಂದು ಪುಷ್ಯ ಅಥವಾ ಅರಿದ್ರ ನಕ್ಷತ್ರಗಳು ಬಂದಲ್ಲಿ ಧಾನ್ಯದ ಧಾರಣಿಯಲ್ಲಿ ಸಮತ್ವ ಉಳಿಯುವುದು. ಬ.9 ರಂದು ಚಿತ್ತಾ ನಕ್ಷತ್ರವಿದ್ದರೆ, ಧಾನ್ಯಗಳು ತೇಜಿಯಲ್ಲಿ ಮುಂದುವರೆಯುವುದು. ಮಾರ್ಗಶಿರ ಕೃಷ್ಣ ಪಕ್ಷ 14 ಅಥವಾ ಅಮಾವಾಸ್ಯೆಯ ದಿವಸ ಸೂರ್ಯನಿಗೆ ಮೋಡ ಮುಸುಕಿದರೆ ಮುಂದೆ ಧಾನ್ಯಗಳು ತೇಜಯಾಗುವವು ಬ. 4 ತಿಥಿಗೆ ಜನ್ಮನಕ್ಷತ್ರವಿದ್ದು ಆ ದಿವಸ ಆಕಾಶದಲ್ಲಿ ಮೋಡವುಂಟಾದರೆ ಅಥವಾ ಹನಿಗಳು ಉದುರಿದರೆ ಆಹಾರ ಧಾನ್ಯದಿಗಳು ಸಮತ್ವದಲ್ಲಿ ಉಳಿಯುವವು.