ಮನೆ ಮನರಂಜನೆ “ಮರೀಚಿ’ ಚಿತ್ರ ವಿಮರ್ಶೆ

“ಮರೀಚಿ’ ಚಿತ್ರ ವಿಮರ್ಶೆ

0

ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಾ, ಅಲ್ಲಲ್ಲಿ ಹೊಸ ಹೊಸ ಟ್ವಿಸ್ಟ್‌ ನೊಂದಿಗೆ ಪ್ರೇಕ್ಷಕರನ್ನು ತನ್ನ ಜೊತೆ ಕೊನೆವರೆಗೆ ಒಂದು ಚಿತ್ರ ಹೆಜ್ಜೆ ಹಾಕಿಸಿದರೆ ಸಸ್ಪೆನ್ಸ್‌-ಥ್ರಿಲ್ಲರ್‌ ಚಿತ್ರ ಇಷ್ಟಪಡುವ ಪ್ರೇಕ್ಷಕರು ಖುಷಿಯಾಗುತ್ತಾರೆ. ಈ ನಿಟ್ಟಿನಲ್ಲಿ ಈ ವಾರ ತೆರೆಕಂಡಿರುವ “ಮರೀಚಿ’ ಒಂದು ಪ್ರಯತ್ನವಾಗಿ ಮೆಚ್ಚುಗೆ ಪಡೆಯುವ ಚಿತ್ರ.

ನಿರ್ದೇಶಕ ಸಿಧ್ರುವ್‌ ತಮ್ಮ ಚೊಚ್ಚಲ ಪ್ರಯತ್ನದಲ್ಲಿ ಒಂದು ಗಟ್ಟಿ ಕಥಾಹಂದರವೊಂದಿರುವ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ ಒಂದರ ಹಿಂದೊಂದರಂತೆ ನಡೆಯುವ ಕೊಲೆಗಳ ಹಿಂದೆ ಬೀಳುವ ಪೊಲೀಸ್‌ ಅಧಿಕಾರಿ ಒಂದು ಕಡೆಯಾದರೆ, ಚಾಲಾಕಿತನದಿಂದ ತಪ್ಪಿಸಿಕೊಂಡು ಹೋಗುವ ಕೊಲೆಗಾರ ಮತ್ತೂಂದು ಕಡೆ… ಈ ಅಂಶವನ್ನು ಎಷ್ಟು ಥ್ರಿಲ್ಲರ್‌ ಆಗಿ ಹೇಳಬಹುದೋ ಅದನ್ನು ನಿರ್ದೇಶಕರು ಮಾಡಿದ್ದಾರೆ. ಬಿಗಿಯಾದ ನಿರೂಪಣೆ ಹಾಗೂ ಚಿತ್ರಕಥೆ ಈ ಸಿನಿಮಾದ ಪ್ಲಸ್‌ ಪಾಯಿಂಟ್‌ ಎನ್ನಬಹುದು.

ಒಂದು ಕಡೆ ತನಿಖೆ ಹಾಗೂ ಅದರ ತೀವ್ರತೆ ಸಾಗಿದರೆ ಮತ್ತೂಂದು ಕಡೆ ಕೊಲೆಯ ಹಿಂದಿನ ಉದ್ದೇಶವನ್ನು ಕೂಡಾ ತೋರಿಸುತ್ತಾ ಹೋಗಲಾಗಿದೆ. ನಿರ್ದೇಶಕರು ಇಲ್ಲಿ ಸಸ್ಪೆನ್ಸ್‌ ಹಾಗೂ ಥ್ರಿಲ್ಲರ್‌ ಎರಡೂ ಅಂಶವನ್ನು ಬ್ಯಾಲೆನ್ಸ್‌ ಮಾಡುವ ಮೂಲಕ ಚಿತ್ರಕ್ಕೊಂದು ಹೊಸ ಸ್ಪರ್ಶ ಕೊಟ್ಟಿದ್ದಾರೆ.  ಇನ್ನು ಜೂಡಾ ಸ್ಯಾಂಡಿ ಅವರ ಹಿನ್ನೆಲೆ ಸಂಗೀತ ಚಿತ್ರದ ಪ್ಲಸ್‌ ಪಾಯಿಂಟ್‌ಗಳಲ್ಲೊಂದು.

ನಾಯಕ ವಿಜಯ ರಾಘವೇಂದ್ರ ಭೈರವ್‌ ನಾಯಕ್‌ ಎಂಬ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಸೋನು ಗೌಡ, ಗೋಪಾಲ ಕೃಷ್ಣ ದೇಶಪಾಂಡೆ ಸೇರಿದಂತೆ ಇತರರು ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ.