ಮನೆ ರಾಜ್ಯ ಪಕ್ಷಿಗಳಿಗೆ ಧಾನ್ಯ ಚೆಲ್ಲುವುದಕ್ಕೆ ನಿಗದಿತ ಪ್ರದೇಶ ಗುರ್ತಿಸಿ, ಅರಮನೆ ಆವರಣ ಸ್ವಚ್ಛತೆಗೆ ಕ್ರಮ ಕೈಗೊಳ್ಳಿ: ಸಚಿವ...

ಪಕ್ಷಿಗಳಿಗೆ ಧಾನ್ಯ ಚೆಲ್ಲುವುದಕ್ಕೆ ನಿಗದಿತ ಪ್ರದೇಶ ಗುರ್ತಿಸಿ, ಅರಮನೆ ಆವರಣ ಸ್ವಚ್ಛತೆಗೆ ಕ್ರಮ ಕೈಗೊಳ್ಳಿ: ಸಚಿವ ಹೆಚ್.ಕೆ ಪಾಟೀಲ್ ಸೂಚನೆ

0

ಬೆಂಗಳೂರು: ಮೈಸೂರು ಅರಮನೆಯ ಆಂಜನೇಯ ಸ್ವಾಮಿ ದೇವಸ್ಥಾನದ ದ್ವಾರದ ಮುಂಭಾಗ ಪಾರಿವಾಳಗಳಿಗೆ  ನಿತ್ಯ ಧಾನ್ಯಗಳನ್ನು ಚೆಲ್ಲುತ್ತಿರುವುದರಿಂದ ಅನಾನುಕೂಲವಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ದಾನ್ಯಗಳನ್ನ ಹಾಕಲು ನಿಗದಿತ ಪ್ರದೇಶ ಗುರ್ತಿಸುವಂತೆ ಕಾನೂನು ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ ಪಾಟೀಲ್ ಸೂಚನೆ ನೀಡಿದ್ದಾರೆ.

Join Our Whatsapp Group

ಈ ಕುರಿತು ಆದೇಶ ಹೊರಡಿಸಿರುವ ಸಚಿವ ಹೆಚ್.ಕೆ ಪಾಟೀಲ್, ವಿಶ್ವವಿಖ್ಯಾತ ಸಾಂಸ್ಕೃತಿಕ, ಪಾರ೦ಪರಿಕ, ಐತಿಹಾಸಿಕವುಳ್ಳ ತಾಣವಾದ ಮೈಸೂರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ದ್ವಾರದ ಮುಂಭಾಗ ಪಾರಿವಾಳಗಳಿಗೆ  ನಿತ್ಯ ಧಾನ್ಯಗಳನ್ನು ತಂದು ಚೆಲ್ಲುತ್ತಿರುವುದರಿಂದ 10ನೇ ಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆ ಮತ್ತು ಅರಮನೆಯ ಆವರಣ ಸೌಂದರ್ಯ ಮತ್ತು ಅದರ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದ್ದು, ಸಾರ್ವಜನಿಕ ಆರೋಗ್ಯ ಮತ್ತು ಪ್ರವಾಸಿಗರಿಗೆ ತೀವ್ರ ಅನಾನುಕೂಲವಾಗುತ್ತಿರುವುದಾಗಿ ಹಲವಾರು ದೂರುಗಳು ಬಂದಿವೆ.

ಆದ್ದರಿಂದ, ವಿಶ್ವವಿಖ್ಯಾತ ಮೈಸೂರು ಅರಮನೆಯ ಆವರಣ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಪಕ್ಷಿಗಳಿಗೆ ಧಾನ್ಯ ನೀಡುವುದಕ್ಕೆ ನಿಗದಿತ ಪ್ರದೇಶವನ್ನು ಗುರುತಿಸಿ ಅರಮನೆಯ ಆವರಣ ಸ್ವಚ್ಛತೆ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೈಸೂರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ಸಮಿತಿ ಅಧ್ಯಕ್ಷರಿಗೆ  ಸೂಚನೆ ನೀಡಿದ್ದಾರೆ.

ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ದ್ವಾರದ ಮುಂಭಾಗ ಕ ಪಾರಿವಾಳಗಳಿಗೆ ನಿತ್ಯ ಧಾನ್ಯಗಳನ್ನು ತಂದು ಚೆಲ್ಲುತ್ತಿರುವುದರಿಂದ  ಅರಮನೆ ಮತ್ತು10ನೇ ಚಾಮರಾಜೇಂದ್ರ ಒಡೆಯರ್‍ ಅವರ ಪ್ರತಿಮೆ ಮತ್ತುಅರಮನೆಯ ಆವರಣ ಸೌಂದರ್ಯ ಮತ್ತು ಅದರ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ. ಹೀಗಾಗಿ  ಧಾನ್ಯ ಚೆಲ್ಲುವುದನ್ನ ನಿಷೇಧಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ರಘು ಕೌಟಿಲ್ಯ ಆಗ್ರಹಿಸಿದ್ದರು.

ಹಿಂದಿನ ಲೇಖನಉಡುಪಿಯಲ್ಲಿ ನಾಲ್ವರ ಕೊಲೆ ಪ್ರಕರಣ: ಆರೋಪಿ ಜಾಮೀನು ಅರ್ಜಿ ವಜಾ
ಮುಂದಿನ ಲೇಖನಅರಣ್ಯ ಒತ್ತುವರಿ: ಉಪಗ್ರಹ ಆಧಾರಿತ ಎಚ್ಚರಿಕೆ ವ್ಯವಸ್ಥೆ ರೂಪಿಸಲು ಖಂಡ್ರೆ ಸೂಚನೆ