ಮನೆ ಜ್ಯೋತಿಷ್ಯ ಮಂಗಳ

ಮಂಗಳ

0

ಭೂಮಿಗೆ ಸನಿಹದಲ್ಲಿರುವ ಮಂಗಳಗ್ರಹ ಕೆಂಪಾಗಿ ಕಾಣಿಸುವುದು. ಆದುದರಿಂದ ಮಂಗಳ ಗ್ರಹವನ್ನು ಯುದ್ಧ ದೇವತೆ ಎಂದು ಕರೆದಿದ್ದಾರೆ.

ಭೂಮಿಯಿಂದ ಸುಮಾರು 6 ಕೋಟಿ 25 ಲಕ್ಷ ದೂರದಲ್ಲಿದ್ದು, ಪ್ರತಿ ರಾಶಿಯಲ್ಲಿ 1.50ಮಾಸದಿಂದ 1.75 ಮಾಸದವರೆಗೆ ಇರುತ್ತಾನೆ. ಸೂರ್ಯನನ್ನು ಒಮ್ಮೆ ಸುತ್ತಿ ಬರಲು 2 ವರ್ಷಗಳ ಅವಧಿ ಬೇಕಾಗುವುದು. ಇಂಗ್ಲೀಷಿನಲ್ಲಿ “ಮಾರ್ಸ್” ಎಂದು ಮಂಗಳ ಗ್ರಹವನ್ನು ಕರೆದಿದ್ದಾರೆ.

ಅಮೆರಿಕದ ವೈಕಿಂಗ್ ಉಪಗ್ರಹದ ಮೂಲಕ ಮಂಗಳ ಗ್ರಹವನ್ನು ತಲುಪುವ ಪ್ರಯತ್ನ ಸಫಲವಾಗಿರುವುದು. ಮಂಗಳ ಗ್ರಹಕ್ಕೆ ಎರಡು ಲಘು ಚಂದ್ರರಿದ್ದಾರೆ. ಮಂಗಳ ಗ್ರಹದಲ್ಲಿ ಗಾಳಿ, ನೀರುಗಳಿಲ್ಲ. ಆದುದರಿಂದ ಯಾವುದೇ ರೀತಿಯ ಸಸ್ಯ ಪ್ರಾಣಿಗಳು ಅಲ್ಲಿಲ್ಲ ಎಂದು ನಂಬಲಾಗಿದೆ.

ಪಾಶ್ಚಾತ್ಯರು ಮಂಗಳ ಗ್ರಹವನ್ನು ಸೇನಾಪತಿ ಅಥವಾ ನಾಯಕ ಎಂದು ತಿಳಿದಿದ್ದಾರೆ. ಗ್ರೀಕರ ಕಥೆಯಲ್ಲಿ ದೇಶಪ್ರೇಮ, ಸಾಹಸ, ಸಹನೆ, ಯುದ್ಧ ಕೌಶಲ್ಯ, ಕಠಿಣ ಸಮಸ್ಯೆಗಳನ್ನು ಪರಿಹರಿಸುವುದು ಮುಂತಾದ ವಿಷಯಗಳನ್ನು ಮಂಗಳನೊಂದಿಗೆ ಹೊಂದಿಸಿದ್ದಾರೆ. ಮಂಗಳ ಗ್ರಹ ಯುದ್ಧಕ್ಕೆ ಸಿದ್ದನಾದ ಅಪಾಯಗಳೊಂದಿಗೆ ಆಟವಾಡುವ ಗ್ರಹವೆಂದು ತಿಳಿದಿದ್ದಾರೆ.

ಮಂಗಳ ಗ್ರಹ ಮೇಷ ರಾಶಿಯ ಸ್ವಾಮಿಯಾಗಿದ್ದಾನೆ. ರಾತ್ರಿ ಬಲಿಷ್ಠನಾಗುವ ಮಂಗಳ ದಕ್ಷಿಣ ದಿಕ್ಕಿನ ಅಧಿಪತಿಯಾಗಿದ್ದಾನೆ. ತಮೋಗುಣಿ, ಕೆಂಪು ಬಣ್ಣದವನಾಗಿದ್ದಾನೆ. ಇವನ ಸಂಖ್ಯೆ 9 ಆಗಿದೆ. ಅಗ್ನಿಸ್ಥಳ, ಯುದ್ಧಭೂಮಿ, ಸೇನಾವಾಸಗ್ರಹ, ವಿಷ ಸರ್ಪಗಳು, ಕೀಟಗಳು, ಕ್ಷತ್ರಿಯ ಜಾತಿ ಅವರಿಗೆ ಮತ್ತು ಅನೇಕ ಪ್ರಾಣಿಗಳಿಗೆ ಪ್ರತಿನಿಧಿ ಎನಿಸಿದ್ದಾನೆ.

ಶರೀರದಲ್ಲಿ ಮಂಗಳನು ತಲೆಯಿಂದ ಬೆನ್ನಿನವರೆಗೆ, ಮೂಗು, ಕಿವಿ, ಪುಪ್ಪಸ, ಮೆದುಳು, ರಕ್ತದೋಷಗಳ ಬಗ್ಗೆ ನಿಯಂತ್ರಣ ಹೊಂದಿದ್ದಾನೆ. ಮಂಗಳ ಅಶುಭನಾಗಿದ್ದರೆ, ಗರ್ಮಿ, ಧಾತುಪೀಡೆ, ಶತ್ರುಪೀಡೆ, ಅಗ್ನಿಪರಿಣಾಮ, ಜ್ವರ, ರಕ್ತದ ವಿಕಾರಗಳಿಗೆ, ಗುಳ್ಳೆ, ತುರಿಕೆಗಳಿಗೆ ಕಾರಣನಾಗುವನು.

ಜ್ಯೋತಿಷ್ಯಶಾಸ್ತ್ರದಲ್ಲಿ ಮಂಗಳ ಗ್ರಹಕ್ಕೆ “9” ಅಂಕಿಯನ್ನು ನಿರ್ದಿಷ್ಟ ಪಡಿಸಿದ್ದಾರೆ. ಮಂಗಳ ಗ್ರಹದಿಂದ ಪಿತ್ತ, ಪಿತ್ತ ವಿಕಾರಗಳು, ಸಡಿಯುವಿಕೆ, ಆಕ್ರಮಣ, ಮಾನಸಿಕ ಸಂತುಲನಗಳ ಬಗ್ಗೆ ತಿಳಿಯಲಾಗುವುದು. ವಿಷವುಳ್ಳ ಅನಿಲ, ಗಾಯ, ಮೋಸ, ವಂಚನೆ, ಕಪಟ, ತಂತ್ರಗಾರಿಕೆ, ಅಗ್ನಿ ದುರ್ಘಟನೆ ವಿಸ್ಪೋಟಗಳ ಬಗ್ಗೆಯೂ ಕಲಾಚ ಮಂಗಳ ಗ್ರಹದಿಂದ ತಿಳಿಯುವರು.

ಹವಳ, ತಾಮ್ರ, ಮಣ್ಣು ಮದಿರೆ, ತಂಬಾಕು ಸಿಗರೇಟ್ ಮಾದಕ ದ್ರವ್ಯ, ಚಳುವಳಿ ಸಾಹಸ ಕಾರ್ಯಗಳು, ಆಟಗಾರರ ಆಟಗಳು, ಮಲ್ಲಯುದ್ಧ, ಕ್ರೀಡೆಗಳು (ವೈಯುಕ್ತಿಕ) ಢಕಾಯಿತಿ, ಕಳ್ಳರ, ಮೋಸಗಾರರ ನಿವಾಸ ತಿಳಿಯುವುದು. ಮಂಗಳ ಗ್ರಹದ ಅಧ್ಯಯನದಿಂದ ಸಾಧ್ಯವಾಗುವುದು. ಮಂಗಳ ಅಶುಭನಾಗಿದ್ದರೆ, ಆ ವ್ಯಕ್ತಿಯು ಕೆಟ್ಟ ಕೆಲಸ ಮಾಡುವ ಅಪಯಶಸ್ಸಿನ, ಮೋಸಗಾರ ಅಪರಾಧಿ ಗುಣಗಳನ್ನು ಹೊಂದುವನು.

ಮಂಗಳ ಶುಭಕರನಾಗಿದ್ದರೆ ಆಸ್ತಿ ಹೊಂದುವವರು, ಸಹೋದರರಿಂದ ಸಂತಸ, ನಾಯಕನಾಗುವುದು. ಸೇನೆ ಪೊಲೀಸ್, ಇಂಜಿನಿಯರಿಂಗ್, ಕ್ಷೇತ್ರದ ವಿಚಾರಗಳು, ರಾಜಶ್ರಯ, ಅಧಿಕಾರ, ಶಸ್ತ್ರಚಿಕಿತ್ಸಕ, ರಾಜನೀತಿಜ್ಞ ಮುಂತಾದವುಗಳ ಬಗೆಗೆ ತಿಳಿಯ ಬಹುದಾಗಿದೆ.

ಮಂಗಳ ಶುಭಕರನಾಗಿದ್ದರೆ, ಆ ವ್ಯಕ್ತಿಗೆ ಉತ್ತಮ ಫಲ ನೀಡುವನು, ಸುಖ, ನಿಶ್ಚಿಂತೆ, ಆಕರ್ಷಣೆ ಮತ್ತು ದೃಢತೆಗಳನ್ನು ನೀಡುವನು. ವೈವಾಹಿಕ ಜೀವನದಲ್ಲಿ ವಿಶೇಷವಾದ ಭಾದೆಯನ್ನು ಅಶುಭನಾಗಿದ್ದಾಗ ನೀಡುವನು. ವಿವಾಹ ವಿಚ್ಛೇದನಕ್ಕೂ ಸೂಚಕನಾಗಿರುವನು. ಒಟ್ಟಾರೆ ಮಂಗಳ ಗ್ರಹವು ತಾಮಸ ಸ್ವಭಾವ ಹೊಂದಿದ್ದು, ಯಾವಾಗಲೂ ಸಿಟ್ಟು ಮತ್ತು ಆಕ್ರಮಣಶೀಲ ಪ್ರಭಾವ ಹೊಂದಿರುವದು. ಶತ್ರುಭಯ ಅಥವಾ ಶತ್ರುಗಳನ್ನುಂಟು ಮಾಡುವದು. ಮಂಗಳ ಗ್ರಹದ ವಿಶೇಷವಾಗಿದೆ. ಮಂಗಳ ಗ್ರಹದ ದೋಷ ನಿವಾರಣೆಗೆ ಹನುಮಂತನ ಸ್ಮರಣೆ ಮತ್ತು ಹವಳ ಧಾರಣೆಗಳನ್ನ ಹೇಳಿದ್ದಾರೆ.