ಮನೆ ತಂತ್ರಜ್ಞಾನ ನೂತನ ಮಾರುತಿ ಇಕೋ ವ್ಯಾನ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ ಇಂಡಿಯಾ

ನೂತನ ಮಾರುತಿ ಇಕೋ ವ್ಯಾನ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ ಇಂಡಿಯಾ

0

ದೇಶದ ಅತಿದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ ಇಕೋ ವ್ಯಾನ್’ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

5, 7 ಸೀಟ್’ಗಳ, ಕಾರ್ಗೋ, ಟೂರ್ ಮತ್ತು ಆ್ಯಂಬ್ಯುಲೆನ್ಸ್ ಸೇರಿದಂತೆ ಒಟ್ಟು 13 ಮಾದರಿಗಳಲ್ಲಿ ಹೊಸ ಆವೃತ್ತಿ ಲಭ್ಯವಾಗಲಿದೆ. ಪೆಟ್ರೋಲ್ ಮತ್ತು ಸಿಎನ್’ಜಿ ವರ್ಶನ್’ಗಳು ಲಭ್ಯವಾಗಲಿವೆ.

ಹೊಸ ಮಾದರಿಯಲ್ಲಿ 1.2 ಲೀಟರ್’ನ ಕೆ ಸೀರಿಸ್’ನ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಇದೆ. ಹಿಂದಿನ ಆವೃತ್ತಿಗೆ ಹೋಲಿಕೆ ಮಾಡಿದರೆ ಹೊಸ ಎಂಜಿನ್ ಶೇ.10ರಷ್ಟು ಹೆಚ್ಚು ಶಕ್ತಿಯುತವಾಗಿದೆ.

ಪ್ರತಿ ಲೀಟರ್’ಗೆ ಅದು 20.20 ಕಿಮೀ ಮೈಲೇಜ್ ನೀಡುತ್ತದೆ. ಅದರ ಬೆಲೆ ಎಕ್ಸ’ಶೋರೂಮ್ 5.10 ಲಕ್ಷ ರೂ.ಗಳಿಂದ 8.13 ಲಕ್ಷ ರೂ. ಇರಲಿದೆ.