ಮನೆ ಆಟೋ ಮೊಬೈಲ್ ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿಯಾಗಿ ಮಾರುತಿ ಸುಜುಕಿ ಇನ್ವಿಕ್ಟೋ ಬಿಡುಗಡೆಗೆ ಸಿದ್ದ..

ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿಯಾಗಿ ಮಾರುತಿ ಸುಜುಕಿ ಇನ್ವಿಕ್ಟೋ ಬಿಡುಗಡೆಗೆ ಸಿದ್ದ..

0

ಹೊಸ ಕಾರು ಮಾರಾಟ ದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಎಂಪಿವಿ ವಿಭಾಗದಲ್ಲಿ ಹೊಚ್ಚ ಹೊಸ ಕಾರು ಪರಿಚಯಿಸಲಿದೆ. ಹೊಸ ಇನ್ವಿಕ್ಟೋ ಕಾರು ಮಾದರಿಯು ಟೊಯೊಟಾ ಇನೋವಾ ಕ್ರಿಸ್ಟಾ ಎಂಪಿವಿ ಕಾರು ಮಾದರಿಗೆ ತೀವ್ರ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಹೊಸ ಕಾರು ಖರೀದಿಗಾಗಿ ಇದೀಗ ರೂ.25 ಸಾವಿರ ಮುಂಗಡದೊಂದಿಗೆ ಬುಕಿಂಗ್ ತೆರೆದಿದೆ.

Join Our Whatsapp Group

ಮಾರುತಿ ಸುಜುಕಿ ಕಂಪನಿಯು ಹೊಸ ಇನ್ವಿಕ್ಟೊ ಎಂಪಿವಿ ಮಾದರಿಯನ್ನು ಮುಂದಿನ ತಿಂಗಳು ಜುಲೈ 5ರಂದು ಅನಾವರಣಗೊಳಿಸಲು ನಿರ್ಧರಿಸಿದ್ದು, ಹೊಸ ಕಾರನ್ನು ಮಾರುತಿ ಸುಜುಕಿ ಕಂಪನಿಯು ಟೊಯೊಟಾ ಸಹಭಾಗಿತ್ವ ಯೋಜನೆ ಅಡಿ ಅಭಿವೃದ್ದಿಪಡಿಸಿದೆ. ಹೀಗಾಗಿ ಇದು ಇತ್ತೀಚೆಗೆ ಬಿಡುಗಡೆಗೊಂಡಿರುವ ಇನೋವಾ ಹೈಕ್ರಾಸ್‌ ವಿನ್ಯಾಸ ಆಧರಿಸಿದ್ದು, ಅದಕ್ಕಿಂತ ವಿಭಿನ್ನವಾದ ಡಿಸೈನ್ ಮತ್ತು ಫೀಚರ್ಸ್ ಗಳೊಂದಿಗೆ ಗ್ರಾಹಕರನ್ನು ಸೆಳೆಯಲಿದೆ.

ಹೊಸ ಇನ್ವಿಕ್ಟೊ ಕಾರು ಮಾರುತಿ ಸುಜುಕಿ ನಿರ್ಮಾಣದ ಇತರೆ ಕಾರುಗಳಿಂತಲೂ ತುಸು ವಿಭಿನ್ನವಾಗಿರಲಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್ ಮತ್ತು ಮಾರ್ಡನ್ ಡಿಸೈನ್ ಪಡೆದುಕೊಂಡಿರಲಿದೆ. ಹೀಗಾಗಿ ಬೆಲೆಯಲ್ಲೂ ತುಸು ದುಬಾರಿ ಎನ್ನಿಸಿದರೂ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಹೈಕ್ರಾಸ್ ಎಂಪಿವಿಗಿಂತಲೂ ತುಸು ಕಡಿಮೆ ಇದರಲಿದ್ದು, ಇದು ಮಧ್ಯಮ ಕ್ರಮಾಂಕದ ಎಂಪಿವಿ ಕಾರು ಖರೀದಿದಾರರಿಗೆ ಪ್ರಮುಖ ಆಕರ್ಷಣೆಯಾಗಿರಲಿದೆ.

ಮಾರುತಿ ಸುಜುಕಿ ಕಂಪನಿಯು ಹೊಸ ಕಾರನ್ನು ಟೊಯೊಟಾ ಸಹಭಾಗಿತ್ವ ಯೋಜನೆ ಅಡಿ ಅಭಿವೃದ್ದಿಪಡಿಸುತ್ತಿರುವುದರಿಂದ ಹೊಸ ಕಾರು ಬಿಡದಿ ಕಾರು ಉತ್ಪಾದನಾ ಘಟಕದಲ್ಲಿಯೇ ನಿರ್ಮಾಣಗೊಳ್ಳಲಿದ್ದು, ಇದು ಇನೋವಾ ಹೈಕ್ರಾಸ್ ನಲ್ಲಿರುವಂತೆ 2.0-ಲೀಟರ್ ಪೆಟ್ರೋಲ್ ಹಾಗೂ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಹೀಗಾಗಿ ಇದರಲ್ಲಿ ಇ-ಸಿವಿಟಿ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರಲಿದ್ದು, ಮ್ಯಾನುವಲ್ ಆಯ್ಕೆ ಲಭ್ಯವಾಗುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ.

ಇನ್ನು ಹೊಸ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಇನೋವಾ ಹೈಕ್ರಾಸ್ ಮಾದರಿಯಲ್ಲಿಯೇ ಹಲವಾರು ಪ್ರೀಮಿಯಂ ಫೀಚರ್ಸ್ ಜೋಡಣೆ ಮಾಡಿದ್ದು, ಹೊಸ ಕಾರು 7 ಸೀಟರ್ ಮತ್ತು 8 ಸೀಟರ್ ಆಯ್ಕೆಯೊಂದಿಗೆ 12.8 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ ಮತ್ತು ಕಾರ್ ಪ್ಲೇ, ಆಲ್ ಎಲ್ ಇಡಿ ಹೆಡ್ ಲ್ಯಾಂಪ್ಸ್, 60 ಕ್ಕೂ ಹೆಚ್ಚು ಕಾರ್ ಕನೆಕ್ಟೆಡ್ ಟೆಕ್, ಪನೊರಮಿಕ್ ಸನ್ ರೂಫ್, ಸ್ಟ್ಯಾಂಡರ್ಡ್ ಆಗಿ ಆರು ಏರ್ ಬ್ಯಾಗ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವಾರು ಸುರಕ್ಷಾ ಫೀಚರ್ಸ್ ಜೋಡಣೆ ಹೊಂದಿರಲಿದೆ. ಈ ಮೂಲಕ ಹೊಸ ಕಾರು ಫೀಚರ್ಸ್ ಗಳಿಗೆ ಅನುಗುಣವಾಗಿ ರೂ. 18 ಲಕ್ಷದಿಂದ ರೂ. 20 ಲಕ್ಷ ಬೆಲೆಯ ಅಂತರದಲ್ಲಿ ಮಾರಾಟಗೊಳ್ಳುವ ಸಾಧ್ಯತೆಗಳಿದ್ದು, ಅನಾವರಣದ ದಿನದಂದು ಮತ್ತಷ್ಟು ಮಾಹಿತಿ ದೊರಲಿದೆ.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನಜೂನ್ 23ರಂದು ಮಲಯಾಳಂ, ಕನ್ನಡದಲ್ಲಿ‘ಧೂಮಂ’ ಸಿನಿಮಾ ರಿಲೀಸ್