ಮನೆ ಅಪರಾಧ ಮಸ್ಕಿ: ವ್ಯಕ್ತಿ ಮೇಲೆ ಬಸ್ ಹರಿದು ಸ್ಥಳದಲ್ಲೇ ಸಾವು

ಮಸ್ಕಿ: ವ್ಯಕ್ತಿ ಮೇಲೆ ಬಸ್ ಹರಿದು ಸ್ಥಳದಲ್ಲೇ ಸಾವು

0

ಮಸ್ಕಿ: ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿ ಮೇಲೆ ಬಸ್ ಹರಿದು ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಹೆದ್ದಾರಿಯಲ್ಲಿ ಜು.18ರ ಗುರುವಾರ ನಡೆದಿದೆ.

Join Our Whatsapp Group

ಅಂಕುಶದೊಡ್ಡಿ ಗ್ರಾಮದ ನಿವಾಸಿ ಸಿದ್ದಪ್ಪ (22) ಮೃತ ದುರ್ದೈವಿ.

ಗ್ರಾಮದ ಸರ್ಕಾರಿ ಶಾಲೆಯ ಬಳಿಯಿರುವ ಮನೆಯತ್ತ ಜು.17ರ ಬುಧವಾರ ರಾತ್ರಿ ಹೊರಟಿದ್ದ ಸಿದ್ದಪ್ಪನ ತಲೆಯ ಮೇಲೆ ಬಸ್ ಹರಿಸಿರುವ ಪರಿಣಾಮ ತಲೆಗೆ ತೀವ್ರ  ಗಾಯವಾಗಿ ಮೆದಳು ಹೊರಬಂದು ಆತ ಒದ್ದಾಡಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.‌

ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ.

ಅಪಘಾತ ಬಳಿಕ ಬಸ್ ನಿಲ್ಲಿಸದೆ ಚಾಲಕ ಬಸ್ ಸಮೇತ ಮಸ್ಕಿ ಕಡೆ ಹೋಗಿದ್ದು, ಗ್ರಾಮಸ್ಥರು ಬಸ್ ಅನ್ನು ಬೆನ್ನತ್ತಿ ಜನರ ಸಹಾಯದಿಂದ ಮಸ್ಕಿಯ ಹಳೇ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ, ಚಾಲಕನ ಹೆಸರು, ಬಸ್ಸಿನ ನಂಬರ್ ತಿಳಿದುಕೊಂಡಿದ್ದಾರೆ.

ಈ ಕುರಿತು ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ತಾರಾಬಾಯಿ ತಿಳಿಸಿದ್ದಾರೆ.