ಹೈದರಾಬಾದ್(Hyderabad): ಅಪ್ರಾಪ್ತೆಯೋರ್ವಳ ಮೇಲೆ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಪ್ರಕರಣ ನಡೆದ ಮೂರು ದಿನಗಳ ಬಳಿಕ ಬೆಳಕಿಗೆ ಬಂದಿದೆ.
ಕಳೆದ ತಿಂಗಳ 28ರಂದು ಇಬ್ಬರು ಸ್ನೇಹಿತರ ಜೊತೆ ಸೇರಿ ಬಾಲಕಿ ಜುಬಿಲಿ ಹಿಲ್ಸ್ ಪಬ್ಗೆ ತೆರಳಿದ್ದಳು. ಪಬ್ನಲ್ಲಿ ಪರಿಚಯವಾಗಿರುವ ಇತರೆ ಕೆಲ ಸ್ನೇಹಿತರೊಂದಿಗೆ ಬಾಲಕಿ ಹೊರಗಡೆ ಹೋಗಿದ್ದು, ಈ ವೇಳೆ ಕಾರಿನಲ್ಲೇ ಆಕೆಯ ಮೇಲೆ ಅತ್ಯಾಚಾರವೆಸಲಾಗಿದೆ ಎಂದು ತಿಳಿದು ಬಂದಿದೆ.
ಮನೆಗೆ ಬಂದ ಬಾಲಕಿಯನ್ನು ತಂದೆ ಪ್ರಶ್ನೆ ಮಾಡಿದಾಗ ತನ್ನ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರದ ಬಗ್ಗೆ ಹೇಳಿಕೊಂಡಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ತಂದೆ ದೂರು ದಾಖಲು ಮಾಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಸ್ಥಳೀಯ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ 11 ಹಾಗೂ 12ನೇ ತರಗತಿಯಲ್ಲಿ ಎಲ್ಲಾ ಅಪರಾಧಿಗಳು ವ್ಯಾಸಂಗ ಮಾಡ್ತಿದ್ದು, ಓರ್ವ ರಾಜಕೀಯ ಪಕ್ಷದ ಮುಖಂಡರ ಪುತ್ರನಿದ್ದಾನೆಂದು ಹೇಳಲಾಗ್ತಿದೆ. ಆದರೆ, ಪೊಲೀಸರು ಇದನ್ನ ತಳ್ಳಿ ಹಾಕಿದ್ದಾರೆ.
ಜುಬಿಲಿ ಹಿಲ್ಸ್ನಲ್ಲಿರುವ ಪಬ್ಗೆ ಬಾಲಕಿ ಹೋಗಿದ್ದು, ಅಲ್ಲಿಂದ ವಾಪಸ್ ಮನೆಗೆ ಬಿಡುವುದಾಗಿ ಹೇಳಿ, ಆಕೆಯನ್ನು ಕಾರಿನಲ್ಲಿ ಹತ್ತಿಸಿಕೊಂಡಿದ್ದಾರೆ. ಈ ವೇಳೆ ದುಷ್ಕೃತ್ಯವೆಸಗಲಾಗಿದೆ.