ವಾಷಿಂಗ್ಟನ್ : ಅಮೆರಿಕದ ಟೆನ್ನೀಸೀಯಲ್ಲಿರುವ ಯುದ್ಧ ಸಾಮಾಗ್ರಿ ಸ್ಥಾವರದಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 19 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಎಂಟು ಕಟ್ಟಡಗಳು ಹೊಂದಿರುವ ಅಕ್ಯುರೇಟ್ ಎನರ್ಜಿಟಿಕ್ ಸಿಸ್ಟಮ್ಸ್ ಕಂಪನಿಯ 1,300 ಎಕ್ರೆ ವಿಸ್ತಾರ ಕ್ಯಾಂಪಸ್ನಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಇಡೀ ಕಟ್ಟಡವೇ ನಾಮಾವಶೇಷವಾಗಿದ್ದು, ಕಿ.ಮೀಗಟ್ಟಲೇ ದೂರಕ್ಕೆ ಕಂಪನದ ಅನುಭವವಾಗಿದೆ.
ಇದು ಯುಎಸ್ ಮಿಲಿಟರಿ ಸ್ಫೋಟಕಗಳು ಹಾಗೂ ಮದ್ದು ಗುಂಡುಗಳನ್ನು ತಯಾರಿಸಿ, ಪರೀಕ್ಷೆ ಮಾಡುವ ಸ್ಥಳವಾಗಿತ್ತು. ಸ್ಫೋಟಕ್ಕೆ ಸ್ಥಾವರದ ಹತ್ತಿರದಲ್ಲಿದ್ದ ಮನೆಗಳು ನಡುಗಿ ಹೋಗಿವೆ. ಈ ಘಟನೆಯ ಕುರಿತು ಹಂಫ್ರೀಸ್ ಕೌಂಟಿ ಶೆರಿಫ್ ಕ್ರಿಸ್ ಡೇವಿಸ್ ಮಾತನಾಡಿ, ಹೇಳಲು ಏನೂ ಉಳಿದಿಲ್ಲ. ಎಲ್ಲವೂ ಭಸ್ಮವಾಗಿವೆ.
ಟೆನ್ನೀಸೀಯಲ್ಲಿರುವ ಯುದ್ಧ ಸಾಮಗ್ರಿ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 19 ಮಂದಿ ನಾಪತ್ತೆಯಾಗಿದ್ದಾರೆ. ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ ನಿಖರ ಕಾರಣ ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ.














