ಮನೆ ರಾಜ್ಯ ಕಬ್ಬಿನ ದರ ನಿಗದಿಗೆ ಆಗ್ರಹಿಸಿ ಜು.4 ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ

ಕಬ್ಬಿನ ದರ ನಿಗದಿಗೆ ಆಗ್ರಹಿಸಿ ಜು.4 ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ

0

ಮೈಸೂರು(Mysuru): ಪ್ರಸಕ್ತ ಸಾಲಿನ ಕಬ್ಬಿನ ದರ ನಿಗದಿ ಮಾಡುವಂತೆ ಒತ್ತಾಯಿಸಿ ಜುಲೈ 4 ರಂದು ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾಹಿತಿ ನೀಡಿದ್ದಾರೆ.

ಇಂದು ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ‍್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರಕ್ಕೆ ಪತ್ರ ಬರೆದರೂ ಇನ್ನೂಕಬ್ಬಿನ ದರ ನಿಗದಿ ಮಾಡಿಲ್ಲ. ಹಾಗಾಗಿ ಧರಣಿ ಮಾಡಲು ಸಂಘಟನೆ ನಿರ್ಧಾರ ಮಾಡಿರುವುದಾಗಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜು. 4 ರಂದು ಮತ್ತು ಜು. 5 ರಂದು ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಎಸ್ ಎಪಿ ಬೆಲೆಯನ್ನ 3500 ನಿಗದಿ ಮಾಡಿದ್ದಾರೆ.ಅದೇ ಮಾನದಂಡದಂತೆ ನಮಗೂ ಕಬ್ಬಿನ ದರ ನಿಗದಿ ಮಾಡಬೇಕು. ಕಬ್ಬು ಕಾರ್ಖಾನೆಗಳು , ಇಳುವರಿ ಹಾಗೂ ತೂಕದಲ್ಲಿ ಮೋಸ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ಕಬ್ಬುದರ ನಿಗದಿ ಮಾಡಬೇಕು. ಕಬ್ಬು ಕಟಾವು ಮತ್ತು ಸಾಗಣಿಕೆ ವೆಚ್ಚ ಹೆಚ್ಚಾದ್ದರಿಂದ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ತಕ್ಷಣ ದರ ನಿಗದಿ ಮಾಡದಿದ್ದರೆ ಹಣ ನೀಡುವುದು ವಿಳಂಬವಾಗಿ ರೈತರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಕಾರ್ಖಾನೆಗಳು ಕೂಲಿ ಕಾರ್ಮಿಕರನ್ನು ಮುಂಗಡವಾಗಿ ಬುಕ್ ಮಾಡಿಕೊಂಡಿವೆ. ರೈತರ ಹೊಲದಲ್ಲಿನ ದರ ನಿಗದಿ ಆಗಬೇಕು. ಕಬ್ಬಿನ ಉತ್ಪನ್ನಗಳ ಲಾಭವನ್ನು ರೈತರಿಗ ಶೀಘ್ರದಲ್ಲೇ ನೀಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಶ್ರೀರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದಿದೆ. ಕೇಂದ್ರ ಸರ್ಕಾರ ಜೂಜುಕೋರರಿಗೆ, ಕ್ಯಾಸಿನೋಗಳಿಗೆ ಜಿಎಸ್ ಟಿ ವಿಧಿಸಿಲ್ಲ. ಆದರೆ ಬಡವರ ಉತ್ಪಾದನೆ ಮಾಡುವ ಮೊಸರು, ಮಜ್ಜಿಗೆ, ಹಾಲು ಕರೆಯುವ ಯಂತ್ರಕ್ಕೆ ಜಿಎಸ್ ಟಿ ಹಾಕಲಾಗುತ್ತಿದೆ. ಕೂಡಲೇ ಸರ್ಕರ ಜಿಎಸ್ ಟಿ ರದ್ದು ಮಾಡುವಂತೆ ಒತ್ತಾಯಿಸಿದರು.

ಕನ್ನಯ್ಯಲಾಲ್‌ ಹತ್ಯೆ ವಿಚಾರ ‌ಕುರಿತು ಪ್ರತಿಕ್ರಿಯಿಸಿ, ಕನ್ನಯ್ಯಲಾಲ್ ಹತ್ಯೆ ಖಂಡಿನೀಯ. ಇದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಎಚ್ಚೆತ್ತುಕೊಳ್ಳಬೇಕು. ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಕುರುಬೂರು ಶಾಂತ ಕುಮಾರ್ ಒತ್ತಾಯಿಸಿದರು.