ಮನೆ ಜ್ಯೋತಿಷ್ಯ ಮುದ್ರಣ ವಸ್ಥಾಧಿಗಳಿಗೆ ಸಂಬಂಧಿಸಿದ ವಿಚಾರ

ಮುದ್ರಣ ವಸ್ಥಾಧಿಗಳಿಗೆ ಸಂಬಂಧಿಸಿದ ವಿಚಾರ

0

 ಮುದ್ರಣಾಂ ಪಾತನಂ ಸದ್ ದೃವ ಮೃದುಚರಭಕ್ಷಿಪ್ರಭೈರ್ವೀಂದು ಸೌರೇ

 ಘಸ್ರೇ ಪೂರ್ಣಾಜಯಾಖ್ಯೇ ನ ಚ ಗುರುಭೃಗುಜಾಸ್ತೇ ವಿಲಗ್ನೇ ಶುಭೈಃ  ಸ್ಯಾತ್

 ವಸ್ತ್ರಾಣಾಂ ಕ್ಷಾಲನಂ ಸದ್ ವಸುಹ್ಯದಿನಕೃತ್ ಪಂಚಕಾದಿತ್ಯಪುಷ್ಯೆ

 ನೋ ರಿಕ್ತಾಪರ್ವಷಷ್ಠೀಪಿತೃದಿನ ರವಿ ಜಜ್ಞೇಷು ಕಾರ್ಯ್ಯಂಕದಾಪಿ ||

Join Our Whatsapp Group

     ಧ್ರುವಸಂಜ್ಞಕ ಮೃದುಸಂಜ್ಞಕ  ಚರಸಂಜ್ಜಕ ಮತ್ತು ಕ್ಷಿಪ್ರಸಂಜ್ಞಕ ನಕ್ಷತ್ರಗಳಲ್ಲಿ ಸೋಮವಾರ ಶನಿವಾರವನ್ನು ಹೊರತುಪಡಿಸಿ,ಪೂರ್ಣಾ ಮತ್ತು ಜಯಾ ತಿಥಿಗಳಲ್ಲಿ ಗುರು ಮತ್ತು ಶುಕ್ರ ಅಸ್ತರಾಗಿದಿದ್ದರೆ ತಮ್ಮ ಶುಭಗ್ರಹ ಲಗ್ನದಲ್ಲಿದ್ದರೆ ಮುದ್ರಣಕ್ಕೆ ಹಾಕಬೇಕು.ಧನಿಷ್ಠಾ, ಅಶ್ವಿನಿ, ಹಸ್ತಾದಿಂದ ಐದು ನಕ್ಷತ್ರ( ಹಸ್ತಾ, ಚಿತ್ತ,   ಸ್ವಾತಿ, ವಿಶಾಖಾ, ಅನುರಾಧ) ಪುನರ್ವಸು, ಪುಷ್ಯ ಈ ನಕ್ಷತ್ರಗಳಲ್ಲಿ ಬಟ್ಟೆಗಳನ್ನು ನೀರಿಗೆ ಹಾಕುವುದು ಒಗೆಯುವುದು ಶುಭವಾದುದು. ರಿಕ್ತಾ ತಿಥಿ,ಹಬ್ಬದ ದಿನ, ಷಷ್ಠಿ ತಾಯ್ತಂದೆಯರ ಶ್ರದ್ಧಾದ ದಿನ ಶನಿವಾರ ಮತ್ತು ಬುಧವಾರದಂದು ವಿಶೇಷ ಪ್ರಕಾರ ಮತ್ತು ದುಬಾರಿ ಬೆಲೆಯ ಬಟ್ಟೆಗಳನ್ನು ಒಗೆಯಲು ನೀಡಬಾರದು.

 ಸತ್ತ ಧಾರಣೆ (ಆಯುಧ ಇಟ್ಟುಕೊಳ್ಳುವುದು) :

 ಸಂಧಾರ್ಯಂಕುಂತವರ್ಮ್ಮೆಷ್ಟಸನಶರಕೃಪಾಣಾಸಿಪುತ್ರ್ಯೋ ವಿರಿಕ್ತೇ

 ಶುಕ್ರೇಜ್ಯಾರರ್ಕೇಹ್ನಿ ಮೈತ್ರಧ್ರುವಲಘಸಹಿತಾದಿತ್ಯ ಶಾಕ್ರದಿವದೈವೇ |

 ಸ್ಯುರ್ಲಗ್ನೇಪಿ ಸ್ಥಿರಾಖ್ಯೇ ಶಶಿನಿ ಚ ಶುಭದೃಷ್ಟೇ ಶುಭೈಃ ಕೇಂದ್ರಗೈಃ

 ಸ್ಯಾದ್ ಭೋಗಃ ಶಯ್ಯಸನಾದೇಧ್ರುವಮೃದುಹರ್ಯಂತಕಾದಿತ್ಯ ಇಷ್ಟ ||

    ರಿಕ್ತಾ ತಿಥಿಯನ್ನು ಹೊರತುಪಡಿಸಿ ಶುಕ್ರ,ಗುರು ಮತ್ತು ರವಿವಾರದಲ್ಲಿ ಮೈತ್ರಸಂಜ್ಞಕ, ಧ್ರುವ ಸಂಜ್ಞಕ, ಲಘುಸಂಜ್ಞಕ, ಆದಿತ್ಯ= ಪುನರ್ವಸು, ಶುಕ್ರ = ಜೇಷ್ಠಾ ದ್ವಿದೈವ = ವಿಶಾಖಾ – ಈ ನಕ್ಷತ್ರಗಳಲ್ಲಿ  ಸ್ಥಿರ ಲಗ್ನದಲ್ಲಿ, ಚಂದ್ರನನ್ನು ಶುಭಗ್ರಹದೃಷ್ಟಿಸುತ್ತಿದ್ದರೆ ಮತ್ತು ಶುಭ ಗ್ರಹ ಕೇಂದ್ರದಲ್ಲಿದ್ದರೆ ಭರ್ಚಿ, ಕವಚ, ಧನುಷ್ ಬಾಣ ಖಡ್ಗ, ಚೂರಿಯನ್ನು ಧಾರಣ ಮಾಡಬೇಕು. ಧ್ರುವಸಂಜ್ಞನಕ, ಮೃದುಸಂಜ್ಞಕ, ಲಘುಸಂಜ್ಞಕ,ಪ್ನ  ಮತ್ತು ಹಯ = ಅಶ್ವಿನಿ, ಆತಂಕ = ಭರಣಿ, ಆದಿತ್ಯ = ಪುನರ್ವಸು — ಈ ನಕ್ಷತ್ರಗಳಲ್ಲಿ ಶಯ್ಯಾ, ಉಣ್ಣೆಯ ಆಸನ ಮತ್ತು ಚಿಗರೆಯ ಚರ್ಮದ ಮೇಲೆ ಕುಳಿತುಕೊಳ್ಳುವುದು ಶುಭವಾದದು.