ನವದೆಹಲಿ: ದೇಶದೆಲ್ಲೆಡೆ ಜನ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಗಳನ್ನು ಕೋರಿದ್ದಾರೆ.
ಪ್ರಧಾನಿ ಮೋದಿ ಅವರಿ ತಮ್ಮ ಟ್ವಿಟರ್ ಖಾತೆಯಲ್ಲಿ ಸಂದೇಶವನ್ನು ಹಂಚಿಕೊಂಡಿದ್ದು ದೇಶದ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಈ ದೀಪಾವಳಿ ಎಲ್ಲರ ಜೀವನದಲ್ಲೂ ಸುಖ, ಸಂತೋಷ ಸಮೃದ್ಧಿ, ಉತ್ತಮ ಅರೋಗ್ಯ ನೀಡಿ ತಾಯಿ ಲಕ್ಷ್ಮೀ ಮತ್ತು ಗಣೇಶ ಆಶೀರ್ವಾದ ಸದಾ ಎಲ್ಲರ ಮೇಲಿರಲಿ ಎಂದು ಹಾರೈಸಿದ್ದಾರೆ.
ದೀಪಾವಳಿ ಹಬ್ಬವನ್ನು ದೇಶಾದ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತದೆ ದೀಪಾವಳಿ ಹಬ್ಬಕ್ಕಾಗಿ ಜನ ಕಾಯುತ್ತಿರುತ್ತಾರೆ, ಈ ಹಬ್ಬವನ್ನು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ.
ಈ ವರ್ಷದ ಜನವರಿಯಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ನಂತರ ನಗರದಲ್ಲಿ ಮೊದಲ ಬಾರಿಗೆ ಡೆಪಾವಳಿ ಹಬ್ಬ ಆಚರಣೆ ಮಾಡಲು ಅಯೋಧ್ಯೆ ಸಜ್ಜಾಗಿದ್ದು ಅದರಂತೆ ದೀಪಾವಳಿಯ ಮುನ್ನಾದಿನವಾದ ಬುಧವಾರ ಇಲ್ಲಿನ ಸರಯೂ ನದಿ ತೀರದಲ್ಲಿ ಸುಮಾರು ೨೫ ಲಕ್ಷಕ್ಕೂ ಹೆಚ್ಚು ಹಣತೆಗಳನ್ನು ಬೆಳಗಿಸುವ ಮೂಲಕ ಗಿನ್ನಿಸ್ ದಾಖಲೆಯನ್ನು ಬರೆಯಲಾಗಿದೆ ಎಂದು ಪ್ರಧಾನಿ ಸಂಭ್ರಮದಿಂದ ಹೇಳಿಕೊಂಡಿದ್ದಾರೆ.