ಮನೆ ಸುದ್ದಿ ಜಾಲ ಮಳೆ ಸಮಸ್ಯೆಗೆ ಸ್ಪಂದಿಸಲು 24 ಗಂಟೆ ಸಿದ್ಧವಾಗಿರುವಂತೆ ಅಭಯ ತಂಡಕ್ಕೆ ಸೂಚನೆ: ಮೇಯರ್ ಸುನಂದಾ ಪಾಲನೇತ್ರಾ

ಮಳೆ ಸಮಸ್ಯೆಗೆ ಸ್ಪಂದಿಸಲು 24 ಗಂಟೆ ಸಿದ್ಧವಾಗಿರುವಂತೆ ಅಭಯ ತಂಡಕ್ಕೆ ಸೂಚನೆ: ಮೇಯರ್ ಸುನಂದಾ ಪಾಲನೇತ್ರಾ

0

ಮೈಸೂರು (Mysuru)- ಮಳೆ ಸಮಸ್ಯೆಗಳಿಗೆ ಸ್ಪಂದಿಸಲು 24 ಗಂಟೆ ಸಿದ್ಧವಾಗಿರಿ ಎಂದು ಅಭಯ ತಂಡಕ್ಕೆ ಸೂಚಿಸಲಾಗಿದೆ ಎಂದು ಮಹಾಪೌರರಾದ ಸುನಂದಾ ಪಾಲನೇತ್ರಾ ಹೇಳಿದರು.
ಮೈಸೂರು ಮಹಾನಗರ ಪಾಲಿಕೆಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದನಗರದಲ್ಲಿ ಬೀಳುತ್ತಿರುವ ಅಕಾಲಿಕ ಮಳೆಯಿಂದಾಗಿ ಅನೇಕ ಸಮಸ್ಯೆ ಉಂಟಾಗಿದೆ‌. ಈ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳೊಂದಿಗೆ, ಆಡಳಿತ ಪಕ್ಷದ ನಾಯಕರು, ಆಯುಕ್ತರು, ಉಪಆಯುಕ್ತರು, ವಿವಿಧ ವಿಭಾಗದ ಅಭಿಯಂತರರೊಂದಿಗೆ ಸಭೆ ನಡೆಸಿ ಮಳೆ ಸಮಸ್ಯೆಗಳಿಗೆ ಸ್ಪಂದಿಸಲು 24 ಗಂಟೆ ಸಿದ್ಧವಾಗಿರಲು ಅಭಯ್ ತಂಡ ಹಾಗೂ ಇಂಜಿನಿಯರ್ ಗಳು ಸೇರಿ ಕೆಲವು ತೀರ್ಮಾನಗಳನ್ನು ಕೈಗೊಂಡು ಎಲ್ಲರಿಗೂ ಸೂಚನೆ ನೀಡಲಾಗಿದೆ ಎಂದರು.
ರಸ್ತೆಗುಂಡಿ ದುರಸ್ತಿಗೆ ಹಣದ ಕೊರತೆಯಿಲ್ಲ. ಮಳೆ ಅಡ್ಡಿಯಷ್ಟೇ.
ಪ್ರತಿ ವಾರ್ಡಿನ ರಸ್ತೆ ಗುಂಡಿ ಮುಚ್ಚಲು 10 ಲಕ್ಷ ರೂ. ಬಿಡುಗಡೆಯಾಗಿ ಕೆಲವೆಡೆ ಕಾಮಗಾರಿ ನಡೆಯುತ್ತಿದ್ದು, ಹಲವೆಡೆ ಆರಂಭವಾಗಬೇಕಿದೆ. ಪ್ರಮುಖ ರಸ್ತೆಗಳ ದುರಸ್ತಿಗೆ ಪಾಲಿಕೆ ಜೂ.20 ಕಾಮಗಾರಿ ಆರಂಭಿಸಲಿದೆ. ನಗರದ ಅಭಿವೃದ್ಧಿಗೆ ಯಾವುದೇ ಹಣದ ಕೊರತೆಯಿಲ್ಲ. ಎಸ್‌ಎಫ್‌ಸಿ ಹಾಗೂ ನಗರೋತ್ಥಾನದ ಅನುದಾನ ಬಂದಿದೆ. ಪ್ರಮುಖ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ ಸಹ ಸಿದ್ದವಿದೆ. ಇವೆಲ್ಲವೂ ಚಾಲನೆ ಸಿಗಬೇಕಾದ ವೇಳೆ ಮಳೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡು ಸಮಸ್ಯೆ ಹೆಚ್ಚಾಗಿದೆ ಎಂದರು.