ಶ್ರೀನಗರ: ಪಾಕಿಸ್ತಾನದ ವಿವಿಧ ಕಾಲೇಜುಗಳಲ್ಲಿ ಜಮ್ಮು ಕಾಶ್ಮೀರದ ಸ್ಥಳೀಯರಿಗೆ ಎಂಬಿಬಿಎಸ್ ಸೀಟು ಕೊಡಿಸುವ ದಂಧೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಗುರುವಾರ ಕಾಶ್ಮೀರದ ಒಂಬತ್ತು ಸ್ಥಳಗಳಲ್ಲಿ ಪರಿಶೀಲನೆ ಕೈಗೊಂಡಿದ್ದಾರೆ.
ಶ್ರೀನಗರದ ಮೂರು ಸ್ಥಳಗಳಲ್ಲಿ ದಾಳಿ ನಡೆದಿದೆ. ಅನಂತನಾಗ್ ಜಿಲ್ಲೆಯಲ್ಲೂ ಶೋಧನೆ ನಡೆಯುತ್ತಿವೆ ಎಂದು ವರದಿಯಾಗಿದೆ.
ಸ್ಥಳೀಯ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಇಡಿ ಅಧಿಕಾರಿಗಳಿಗೆ ನೆರವಾಗಿದ್ದಾರೆ.
Saval TV on YouTube