ಗುರುಗ್ರಾಮ: ವೈದ್ಯಕೀಯ ಸಹಾಯಕಳಾಗಿ ಕೆಲಸ ಮಾಡುತ್ತಿದ್ದ 21 ವರ್ಷದ ಯುವತಿ ಕಟ್ಟಡದ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.
ಅಲ್ಲಿನ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿ ವೃದ್ಧ ದಂಪತಿಯನ್ನು ನೋಡಿಕೊಳ್ಳಲು ಆಕೆಯನ್ನು ನೇಮಿಸಲಾಗಿತ್ತು, ಆ ದಂಪತಿಯ ಮಗ ವಿದೇಶದಲ್ಲಿ ವಾಸವಾಗಿದ್ದ. ಇಲ್ಲಿ ಯಾರೂ ನೋಡಿಕೊಳ್ಳಲು ಇಲ್ಲ ಎಂದು ಆಕೆಯನ್ನು ನೇಮಿಸಲಾಗಿತ್ತು.
ಮೃತಳ ಕುಟುಂಬ ಸದಸ್ಯರು ಯಾವುದೇ ದೂರು ದಾಖಲಿಸಿಲ್ಲ. ಅವರ ದೇಹವನ್ನು ಅವರಿಗೆ ಹಸ್ತಾಂತರಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.